ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮುಖ್ಯಮಂತ್ರಿಯವರಿಗೆ ಗೊಂದಲ ಆರಂಭವಾಗಿದೆಯಾ ಎಂಬ ಪ್ರಶ್ನೆಯೊಂದು ಇದೀಗ ಮೂಡಿದೆ.
ಚುನಾವಣೆಗೆ ಕೊನೆಯ ಸರ್ವೇ ಮಾಡುವಂತೆ ಮುಖ್ತಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಗುಪ್ತಚರ ಇಲಾಖೆಗೆ ಎರಡು ದಿನಗಳ ಹಿಂದೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರಚಂಡ ಗೆಲುವು ಸಾಧಿಸಲಿದ್ದೇವೆ-ಬಿಜೆಪಿಯ ಕಾಂಗ್ರೆಸ್ ಮುಕ್ತ ಕನಸು ಕನಸಷ್ಟೇ: ಸೋನಿಯಾ ಗಾಂಧಿ
ಈ ತಿಂಗಳ ಅಂತ್ಯದೊಳಗೆ ಕಡೆಯ ಸರ್ವೇ ಮುಗಿಸಿಕೊಡಬೇಕು. ಯಾವ ವಿಧಾನಸಭಾ ಕ್ಷೇತ್ರದಲ್ಲಿ ನಾನು ಹೋಗಬೇಕು ಹೇಳಿ? ಮೂಲ, ವಲಸಿಗ ಕಾಂಗ್ರೆಸ್ಸಿಗರ ನಡುವಿನ ಜಗಳ ಇದೆಯಾ? ಈ ಬಗ್ಗೆ ಶೀಘ್ರ ವರದಿ ಸಲ್ಲಿಸುವಂತೆ ಸಿಎಂ ಸೂಚಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಗೆಲ್ಲಿಸಿದ ಜನರನ್ನು ಮರೆತ್ರಾ ಸಿಎಂ ಸಿದ್ದರಾಮಯ್ಯ?
ಹಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಗುಪ್ತಚರ ಇಲಾಖೆ ಸಲಹೆ ನೀಡಿದ್ದು, ಬಹಳಷ್ಟು ಕ್ಷೇತ್ರಗಳಲ್ಲಿ ಸಿಎಂ ಹೋಗದಿದ್ದಲ್ಲಿ ಸೋಲು ಹತ್ತಿರವಾಗುತ್ತದೆ. ಕ್ಷೇತ್ರದಲ್ಲಿ ಮೂಲ, ವಲಸಿಗರ ಕಚ್ಚಾಟ ಇದೆ ಎಂದು ವರದಿಯಾಗಿದೆ. ಇದರಿಂದ ಸಿಎಂ ತೀವ್ರ ಗೊಂದಲಕ್ಕೀಡಾಗಿದ್ದು, ಹಾಗಾಗಿ ಅಂತಿಮ ಸರ್ವೇ ನಡೆಸುವಂತೆ ಗುಪ್ತಚರ ಇಲಾಖೆಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿ ಆಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಸಿಎಂ