ಬೆಂಗಳೂರು: ಗೆಲ್ಲಿಸಿದ ಜನರನ್ನು ಮುಖ್ಯಮಂತ್ರಿ ಸಿದ್ದರಾವಯ್ಯ ಮರೆತ್ರಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆಧಿಕಾರಕ್ಕೆ ಬಂದ ಕೂಡಲೇ ಪ್ರತಿ ಮಂಗಳವಾರ ಜನತಾ ದರ್ಶನ ನಡೆಸುತ್ತೇನೆ ಅಂತಾ ಹೇಳಿದ್ದ ಸಿಎಂ ತಮ್ಮ ಮಾತನ್ನು ಮರೆತಿರುವ ಹಾಗಿದೆ.
2015 ಡಿಸೆಂಬರ್ ನಿಂದಲೇ ಸಿಎಂ ಸಿದ್ದರಾಮಯ್ಯ ಪ್ರತಿ ಮಂಗಳವಾರ ನಡೆಸುವ ಜನತಾ ದರ್ಶನಕ್ಕೆ ಬ್ರೇಕ್ ಹಾಕಿದ್ದಾರೆ. ಕೆಲವೊಮ್ಮೆ ಮಾತ್ರ ಜನತಾ ದರ್ಶನದಲ್ಲಿ ಭಾಗಿಯಾಗುತ್ತಿದ್ದರು. ಆದ್ರೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಳೆದ ಮೂರು ತಿಂಗಳಿನಿಂದ ಸಿಎಂ ಜನತಾ ದರ್ಶನಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ. ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಬರುವ ಜನರಿಗೆ ಗೃಹ ಕಚೇರಿ ಕೃಷ್ಣ ಮತ್ತು ಸಿಎಂ ನಿವಾಸ ಕಾವೇರಿಯ ಗೇಟ್ ಬಂದ್ ಮಾಡಲಾಗಿದೆ.
Advertisement
ಸಿಎಂ ನಿವಾಸದತ್ತ ಬರುವ ಜನರ ಸಮಸ್ಯೆಯನ್ನು ಆಲಿಸುವ ಬದಲು ಬಸ್ ಟಿಕೆಟ್‍ಗೆ 100, 200 ರೂಪಾಯಿ ಕೊಟ್ಟು ಸಿಎಂ ಸಿಗೊಲ್ಲ ಅಂತ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.