ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ 15 ನಿಮಿಷದ ಸವಾಲ್ ಹಾಕಿದ್ದರು. ಇದೀಗ ಇಂದು ಸಿದ್ದರಾಮಯ್ಯ ಮೋದಿಗೆ 5 ನಿಮಿಷದ ಸವಾಲ್ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು 15 ನಿಮಿಷ ಯಾವುದೇ ನೋಟ್ಸ್ ಸಹಾಯವಿಲ್ಲದೇ ಮಾತನಾಡುವಂತೆ ಸವಾಲು ಎಸೆದಿದ್ದರು. ಈಗ ಕರ್ನಾಟಕ ಚುನಾವಣಾ ಪ್ರಚಾರಕ್ಕಾಗಿ ಬರುತ್ತಿರುವ ಮೋದಿಗೆ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
Advertisement
ಆತ್ಮೀಯ ಪ್ರಧಾನಿ ನರೇಂದ್ರ ಮೋದಿ ಅವರೇ, ಈ ಚುನಾವಣೆಯಲ್ಲಿ ನೀವು ಭ್ರಷ್ಟಾಚಾರವನ್ನು ಮಾಡಿದ್ದೀರಿ ಎಂದು ನನಗೆ ಖುಷಿಯಾಗಿದೆ. ಏಕೆಂದರೆ ಅದು ನಿಮ್ಮ ದುರ್ಬಲ ಅಂಶವಾಗಿದೆ. ನಮ್ಮ ಸರಕಾರದ ಬಗ್ಗೆ ಭ್ರಷ್ಟಾಚಾರದ ಆಧಾರವಿಲ್ಲದೇ ಆರೋಪಗಳನ್ನು ಮಾಡುತ್ತಿದ್ದೀರಿ. ಆದ್ದರಿಂದ ಈ ಚುನಾವಣೆಯಲ್ಲಿ ಗೆಲ್ಲಬೇಕಾದರೆ ರೆಡ್ಡಿ ಬ್ರದರ್ಸ್ ಬಳಸುವ ನೈತಿಕತೆಯ ಬಗ್ಗೆ ನೀವು 5 ನಿಮಿಷಗಳ ಕಾಲ ಮಾತನಾಡಬಹುದೇ? ಎಂದು ಸಿದ್ದರಾಮಯ್ಯ ಮೋದಿಗೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!
Advertisement
ರೆಡ್ಡಿ ಪಾಳಯದ 8 ಮಂದಿಗೆ ಟಿಕೆಟ್ ಕೊಟ್ರಲ್ಲ, ಆ ಬಗ್ಗೆ ಹೇಳಿ..! ಫೋರ್ಜರಿ ಸೇರಿ 23 ಭ್ರಷ್ಟಾಚಾರ ಕೇಸ್ ಇರೋ ಯಡಿಯೂರಪ್ಪರನ್ನು ಸಿಎಂ ಅಭ್ಯರ್ಥಿ ಮಾಡಿದ್ರಲ್ಲಾ..! ನಿಮ್ಮ ಪಕ್ಷದ 11 ಮಂದಿ ವಿರುದ್ಧ ಭ್ರಷ್ಟಾಚಾರದ ಕೇಸ್ ಇದೆ. 35 ಸಾವಿರ ಕೋಟಿ ರೂಪಾಯಿ ಗಣಿ ಲೂಟಿ ಹೊಡೆದ ರೆಡ್ಡಿಗಳ ಬಗ್ಗೆ ಮಾತಾಡಿ. ನೀವು ಬೇಕಾದರೆ ಪೇಪರ್ ನೋಡಿ ಮಾತಾಡಬಹುದು ಎಂದು ಕಿಡಿಕಾರಿದ್ದಾರೆ
Advertisement
ಶ್ರೀರಾಮುಲು – 3 ಕ್ರಿಮಿನಲ್ ಕೇಸ್, ಸೋಮಶೇಖರ ರೆಡ್ಡಿ – 5 ಕ್ರಿಮಿನಲ್ ಕೇಸ್, ಸುರೇಶ್ ಬಾಬು – 6 ಕ್ರಿಮಿನಲ್ ಕೇಸ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು – 4 ಕ್ರಿಮಿನಲ್ ಕೇಸ್ , ಸಿ.ಟಿ.ರವಿ – 3 ಕ್ರಿಮಿನಲ್ ಕೇಸ್ , ಮುರುಗೇಶ್ ನಿರಾಣಿ – 2 ಕ್ರಿಮಿನಲ್ ಕೇಸ್ , ಕೃಷ್ಣಯ್ಯ ಶೆಟ್ಟಿ – 4 ಕ್ರಿಮಿನಲ್ ಕೇಸ್, ಶಿವನಗೌಡ ನಾಯಕ್ – 3 ಕ್ರಿಮಿನಲ್ ಕೇಸ್, ಅಶೋಕ್ – 2 ಕ್ರಿಮಿನಲ್ ಕೇಸ್ ಈ ಎಲ್ಲಾ ಪ್ರಕರಣದ ಬಗ್ಗೆ ಯಾವಾಗ ಮಾತನಾಡುತ್ತೀರಿ. ನಾನು ಕಾಯುತ್ತಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಮೋದಿಗೆ ಟ್ಯಾಗ್ ಮಾಡಿದ್ದಾರೆ.
Advertisement
Dear PM @narendramodi avare, I am glad you have made corruption an issue in this Election because that is your weakest point.
You are making baseless allegations of corruption about our Govt.
Can you speak for 5 minutes on the ethics of using the Reddy Bros’ to win an election? pic.twitter.com/UPTNypEQ32
— Siddaramaiah (@siddaramaiah) May 5, 2018