ಬೆಂಗಳೂರು: `ಆಪರೇಷನ್ ಸಿಂಧೂರ’ದ(Operation Sindoor) ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ(CM Siddaramaiah) ಅವರು ಕುಂಕುಮ ಇಟ್ಟು ಸುದ್ದಿಗೋಷ್ಠಿಗೆ ಆಗಮಿಸಿ ಸೈನಿಕರಿಗೆ ಸಲಾಂ ಹೇಳಿದ್ದಾರೆ.
ಕಾವೇರಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಟಾಲಮ್ಮ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದೆ ಎಂದು ಕುಂಕುಮ ಇಟ್ಟು ಬಂದ ಬಗ್ಗೆ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಎರಡನೇ ದೀಪಾವಳಿ, ಭಾರತೀಯರ ಸಿಂಧೂರಕ್ಕೆ ಕೈ ಹಾಕಿದ್ದಕ್ಕೆ ತಕ್ಕ ಶಾಸ್ತಿ: ಸಿ.ಟಿ ರವಿ
ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ದೇಶದ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ನಮ್ಮ ಸೈನಿಕರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ. ನಮ್ಮ ಸೈನಿಕರು 9 ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿದ್ದಾರೆ. ಪಾಕಿಸ್ತಾನದವರು ಉಗ್ರರಿಗೆ(Pakistan Terrorists) ಬೆಂಬಲ ಕೊಡ್ತಾರೆ. ಬೇರೆ ಜನರ ಮೇಲೆ ದಾಳಿ ಮಾಡಿಲ್ಲ ಎಂದು ಸೇನೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 15ಕ್ಕೂ ಹೆಚ್ಚು ನಕ್ಸಲರನ್ನು ಬಲಿ ಪಡೆದ ಭದ್ರತಾ ಪಡೆ
ಪಹಲ್ಗಾಮ್ ದಾಳಿ(Pahalgam Terror Attack) ಬಳಿಕವೂ ಪಾಕಿಸ್ತಾನದ ಉಗ್ರರನ್ನ ಸದೆಬಡೆಯಲಿಲ್ಲ. ತನ್ನ ಹಠಮಾರಿತನವನ್ನ ಮುಂದುವರಿಸಿದೆ. ಹಾಗಾಗಿ ನಮ್ಮ ಸೈನಿಕರು ದಾಳಿ ಮಾಡಿದ್ದಾರೆ. ಈ ದಾಳಿಯನ್ನ ಬೆಂಬಲಿಸುತ್ತೇನೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಪಾಠ. ಉಗ್ರ ನೆಲೆಯನ್ನ ಟಾರ್ಗೆಟ್ ಮಾಡಿ ದಾಳಿ ಆಗಿದೆ. ಅಮಾಯಕರ ಸಾವು-ನೋವು ಸಂಭವಿಸಿಲ್ಲ. ಹಾಗಾಗಿ ನಮ್ಮ ಭಾರತೀಯ ಸೈನಿಕರಿಗೆ(Indian Soldier) ದೊಡ್ಡ ಸಲಾಂ ಎಂದು ಕರ್ನಾಟಕ ಸರ್ಕಾರದ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾವು ಮೋದಿಗೆ ಹೇಳಿದ್ವಿ ಇಂದು ಉತ್ತರ ಸಿಕ್ತು, ಅವ್ರು ಯಾರಿಗೆ ಹೇಳ್ತಾರೆ: ಮಂಜುನಾಥ್ ಸಂಬಂಧಿ
ನಾವು ಎಚ್ಚರ ವಹಿಸುವ ಕೆಲಸ ಮಾಡುತ್ತೇನೆ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಸಂಪೂರ್ಣ ಬೆಂಬಲವನ್ನ ಕೊಡುತ್ತೇವೆ. ನಮ್ಮ ರಾಜ್ಯದಲ್ಲಿ ಎಲ್ಲಾ ಎಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತದೆ. ಉಗ್ರರ ನೆಲೆ ಮೇಲಿನ ದಾಳಿಯಿಂದಾಗಿ ರಾಯಚೂರಿನ ರ‍್ಯಾಲಿಯನ್ನ ರದ್ದುಗೊಳಿಸಿದ್ದೇವೆ. ಕೇಂದ್ರ ಸರ್ಕಾರದ ಜೊತೆ ರಾಜ್ಯದ ಜನ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ನಮ್ಮ ರಾಜ್ಯವನ್ನ ಆಲರ್ಟ್ ಆಗಿ ಇಡಬೇಕು. ರಾಜ್ಯದಲ್ಲೂ ಮಾಕ್ ಡ್ರಿಲ್ ನಡೆಯುತ್ತಿದೆ. ರಾಷ್ಟ್ರೀಯ ಭದ್ರತೆ ಮುಖ್ಯ, ರಾಜಿ ಇಲ್ಲ. ನೂರಕ್ಕೆ ನೂರು ರಾಷ್ಟ್ರದ ಜೊತೆ ಇರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್ ಉಗ್ರರ ದಾಳಿಗೆ SCALP, HAMMER ಕ್ಷಿಪಣಿಯನ್ನೇ ಬಳಸಿದ್ದು ಯಾಕೆ?
ರಾಜ್ಯ ಕಾಂಗ್ರೆಸ್(Congress) ಶಾಂತಿ ಟ್ವೀಟ್ ಹಾಕಿ ಡಿಲೀಟ್ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಅದೊಂದು ಗಾಂಧಿ, ಬಸವಣ್ಣನವರ ಕಾಲ ಇತ್ತು. ಈಗ ನಾವು ಸುಮ್ಮನಿರೋದಕ್ಕೆ ಆಗುತ್ತಾ? ಬೇರೆ ಯಾವುದೇ ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ ಎಂದರು.