ಬೆಂಗಳೂರು: ಸಿಎಂ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಸಿಎಂ ಆಪ್ತ ಕೆಲ ಸಚಿವರು ನಾಳೆ ಡೆಲ್ಲಿಗೆ ಭೇಟಿ ನೀಡಲಿದ್ದಾರೆ. ಕರ್ನಾಟಕ ಭವನ (Karnataka Bhavana) ಉದ್ಘಾಟನೆ ನೆಪದಲ್ಲಿ ತೆರಳುತ್ತಿದ್ದು, ಉಳಿದೆಲ್ಲವೂ ರಾಜಕೀಯನಾ ಎಂಬ ಪ್ರಶ್ನೆ ಎದ್ದಿದೆ.
ಅಂದಹಾಗೆ ಎರಡೂವರೆ ತಿಂಗಳ ಬಳಿಕ ಡೆಲ್ಲಿ ಪ್ರವಾಸ ಕೈಗೊಳ್ತಿರುವ ಸಿಎಂ ಸಿದ್ದರಾಮಯ್ಯ (Siddaramaiah) ಕರ್ನಾಟಕದಲ್ಲಿ ಸರ್ಕಾರ, ಸಂಘಟನೆಯಲ್ಲಾದ ಬೆಳವಣಿಗೆಗಳ ಬಗ್ಗೆ ರಿಪೋರ್ಟ್ ನೀಡುವ ಸಾಧ್ಯತೆ ಇದೆ. ಹೈಕಮಾಂಡ್‌ಗೆ ಎರಡೂವರೆ ತಿಂಗಳ ರಿಪೋರ್ಟ್ ಕೊಡಲಿರುವ ಸಿದ್ದರಾಮಯ್ಯ, ಹೈಕಮಾಂಡ್ ಕೇಳಬಹುದಾದ ಎಲ್ಲದಕ್ಕೂ ಉತ್ತರ ಸಿದ್ಧ ಮಾಡಿದ್ದಾರೆ ಎಂಬುದು ಮೂಲಗಳ ಮಾಹಿತಿ. ಇದನ್ನೂ ಓದಿ: ಕೃಷ್ಣಾ, ಭೀಮಾ ನದಿಗೆ ನೀರು ಬಿಡುವಂತೆ ಮನವಿ: ಫಡ್ನವೀಸ್‌ಗೆ ಸಿಎಂ ಪತ್ರ
ಸರ್ಕಾರದ ಮುಂದಿನ ರೋಡ್ ಮ್ಯಾಪ್ ಕೂಡ ವರದಿಯಲ್ಲಿ ಇರುತ್ತೆ ಎನ್ನಲಾಗಿದೆ. ಪ್ರಮುಖವಾಗಿ ರನ್ಯಾರಾವ್ ಕೇಸ್, ಹನಿಟ್ರ್ಯಾಪ್ ಯತ್ನದ ವಿಚಾರಗಳಿಗೆ ಸಂಬಂಧಿಸಿದ ವರದಿ ನೀಡುವ ಸಾಧ್ಯತೆಯಿದೆ.
ಪಕ್ಷದೊಳಗೆ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆಯೂ ರಿಪೋರ್ಟ್ ನೀಡಲಿದ್ದು, ಸಿಎಂ ಎರಡೂವರೆ ತಿಂಗಳ ವರದಿಯಿಂದ ಏನು ಆಗುತ್ತೆ? ಸರ್ಕಾರ ಅಥವಾ ಪಕ್ಷದ ಮಟ್ಟದಲ್ಲಿ ಏನಾದ್ರೂ ಬದಲಾವಣೆಗಳಿಗೆ ಪೂರಕ ಆಗುತ್ತಾ ಎಂಬ ಕುತೂಹಲ ಮನೆ ಮಾಡಿದೆ.