ಹುಬ್ಬಳ್ಳಿ: ಅಹಿಂದ ಹೆಸರಿನಲ್ಲಿ, ಸಮಾಜವಾದಿ ಎಂದು ಆಡಳಿತಕ್ಕೆ ಬಂದವರು ಸಿಎಂ. ಇಂದು ರೆಡ್‌ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ರಾಜ್ಯಪಾಲರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಇದು ರಾಜ್ಯದ ದುರಂತ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ, ಸಂಸ್ಥೆಗಳು ಕೂಡ ರಾಜ್ಯಪಾಲರ ವಿರುದ್ಧ ಹೋರಾಟ ಮಾಡುತ್ತವೆ. ಕಾಂಗ್ರೆಸ್ (Congress) ನಾಯಕರು ಮತ್ತು ಸಿಎಂ ಏನೇನೋ ಮಾತನಾಡುತ್ತಿದ್ದಾರೆ. ಇದು ಷಡ್ಯಂತ್ರ ಅಂತಾರೆ. ಇದು ಸಿಎಂ ಅಧಿಕಾರದಲ್ಲಿದ್ದವರಿಗೆ ಸಾಧ್ಯ. ಇದು ಬೇರೆ ಯಾರಿಗೂ ಸಾಧ್ಯವಿಲ್ಲ ಎಂದು ಸ್ವತಃ ಹೈಕೋರ್ಟ್ ಹೇಳಿದೆ. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ನೀಡಿದೆ. ನಾನು ಸಹ ಕೋರ್ಟ್ ಆದೇಶ ಎಲ್ಲಾ ಅಧ್ಯಾಯ ಮಾಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: Tamil Nadu | ಹೊಸೂರಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಟಾಟಾ ಕಂಪನಿ
Advertisement
ಸಿಎಂ ತಪ್ಪು ಮಾಡಿಲ್ಲ ಅಂದರೆ ಸಿಬಿಐಗೆ ಪ್ರಕರಣ ನೀಡಿ. ಕಾಂಗ್ರೆಸ್‌ನವರಿಗೆ ಸಿಬಿಐ ಭಯ ಕಾಡುತ್ತಿದೆ. ಕಾಂಗ್ರೆಸ್ ಪಾರ್ಟಿಯಲ್ಲಿ ಕುಟುಂಬ ಪ್ರಜಾಪ್ರಭುತ್ವ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ (Siddramaiah) ಮಾತ್ರ ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವ. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಸ್ವತಃ ಸಿಎಂ ಅವರೇ ವರ್ಗಾವಣೆ ಮಾಡಿದ್ದಾರೆ. ನೈತಿಕವಾಗಿ ಕಾಂಗ್ರೆಸ್ ದಿವಾಳಿಯಾಗಿದೆ. ಈ ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿ: ಎಜಿಗೆ ಟಿ ಜೆ ಅಬ್ರಹಾಂ ದೂರು
Advertisement
Advertisement
ಗೋದ್ರಾ ಹತ್ಯಾಕಾಂಡದಲ್ಲಿ ಮೋದಿ (Narendra Modi) ಮತ್ತು ಅಮಿತ್ ಶಾರನ್ನ ಸಿಲುಕಿಸುವ ಪ್ರಯತ್ನ ಮಾಡಲಾಯಿತು. ಅದರಲ್ಲಿ ಮೋದಿ ಅವರ ಪಾತ್ರ ಇಲ್ಲ. ಆದರೆ ಮೋದಿ ಮೇಲೆ ಆರೋಪ ಕೇಳಿ ಬಂದಿವೆ ಅಷ್ಟೇ. 2012 ರಲ್ಲಿ ಯಾಕೆ ಮಾತನಾಡಿಲ್ಲ ಸಿಎಂ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದರು. ಇಂಡಿಯಾ ಒಕ್ಕೂಟದಲ್ಲಿ ಇರುವ ಎಲ್ಲಾ ಪಾರ್ಟಿಗಳನ್ನು ಕಾಂಗ್ರೆಸ್ ವಜಾ ಮಾಡಿತ್ತು. ನೈತಿಕತೆ ಸಂಪೂರ್ಣವಾಗಿ ಬಿಟ್ಟಿದ್ದಾರೆ. ಸಿಎಂ ಮೇಲೆ ಕೇಸು ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಎಸ್‌ಪಿ ಓಡಿ ಹೋಗುತ್ತಾರೆ ಎಂದರು. ಇದನ್ನೂ ಓದಿ: ಕಾಶ್ಮೀರವನ್ನ ಪ್ಯಾಲೆಸ್ತೀನ್‌ಗೆ ಹೋಲಿಸಿದ ಪಾಕ್ ಪ್ರಧಾನಿಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು
Advertisement
ಚುನಾವಣಾ ಬಾಂಡ್ ಪ್ರಕರಣದಲ್ಲಿ ಎಲ್ಲಾ ಪಕ್ಷಗಳು ಭಾಗಿಯಾಗಿವೆ. ಎಲ್ಲಾ ಪಕ್ಷಗಳ ಸಮ್ಮತಿಯಿಂದಲೇ ಎಲೆಕ್ಟ್ರಿಕಲ್ ಬಾಂಡ್ ಜಾರಿ ಮಾಡಲಾಗಿತ್ತು. ಹೀಗೆ ಎಫ್‌ಐಆರ್ ದಾಖಲು ಮಾಡಿದರೆ ಮೊದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮೇಲು ಸಹ ಮಾಡಬೇಕು. ಅವರು ಸಹ ಎಲೆಕ್ಟ್ರಿಕಲ್ ಬಾಂಡ್ ಮೂಲಕ ಹಣ ಪಡೆದಿದ್ದಾರೆ. ಕೇಂದ್ರ, ಕಾಂಗ್ರೆಸ್ ಮಾತ್ರವಲ್ಲದೆ ರಾಜ್ಯದಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಚುನಾವಣಾ ಬಾಂಡ್ ಮೂಲಕ ಹಣ ಪಡೆಯಲಾಗಿದೆ. ಈ ಬಗ್ಗೆ ಸಮಗ್ರ ದಾಖಲೆ ಬಿಡುಗಡೆ ಮಾಡಲಾಗುತ್ತದೆ. ಜೆಪಿ ನಡ್ಡಾ, ನಿರ್ಮಲಾ ಸೀತಾರಾಮನ್, ವಿಜಯೇಂದ್ರ ಮೇಲೆ ಎಫ್‌ಐಆರ್ ದಾಖಲೆ ಆದೇಶದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್ ಆದೇಶ
ನಮ್ಮಲ್ಲಿ ಹೈಕಮಾಂಡ್ ಇಲ್ಲ. ರಾಷ್ಟ್ರೀಯ ನೇತೃತ್ವವಿದೆ. ಸದ್ಯದಲ್ಲಿಯೇ ಬಿಜೆಪಿ (BJP) ಪಕ್ಷದಲ್ಲಿನ ಎಲ್ಲಾ ಸಮಸ್ಯೆ ಬಗೆಹರಿಯುತ್ತವೆ ಎಂದರು. ರಾಹುಲ್, ಸೋನಿಯಾ ಗಾಂಧಿ ಬೇಲ್ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಇಡೀ ಹೈಕಮಾಂಡ್ ಭ್ರಷ್ಟಾಚಾರದಿಂದ ಕೂಡಿದೆ. ಹೈಕಮಾಂಡ್‌ಗೆ ಕಮಾಂಡರ್ ಇಲ್ಲ. ಇದು ನಿರ್ಲಜ್ಜ ಕಾಂಗ್ರೆಸ್ ಸಂಸ್ಕೃತಿ. ಕುರ್ಚಿಗೆ ಅಂಟಿ ಕೂರುವುದು ಕಾಂಗ್ರೆಸ್ ಹೈಕಮಾಂಡ್ ದೌರ್ಬಲ್ಯ. ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಬೆದರಿಸುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ನನ್ನ ಬಳಿ ಇರುವ ದಾಖಲೆ ಬಿಟ್ಟರೆ 5-6 ಸಚಿವರು ರಾಜೀನಾಮೆ ನೀಡಬೇಕಾಗುತ್ತೆ: ಹೆಚ್‌ಡಿಕೆ ಬಾಂಬ್
ಇಡೀ ವಿಶ್ವದಲ್ಲೇ ಭಾರತದ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಶ್ರೇಷ್ಠ ಮತ್ತು ಸುಭದ್ರವಾಗಿದೆ. ನ್ಯಾಯಾಂಗ ವ್ಯವಸ್ಥೆ ನಮ್ಮ ಕೈಯಲ್ಲಿ ಇದ್ದರೆ ಹಲವಾರು ತೀರ್ಪುಗಳು ನಮ್ಮ ಪರವಾಗಿ ಬರುತ್ತಿದ್ದವು. ಆದರೆ ನ್ಯಾಯಾಲಯದಲ್ಲಿ ನಮ್ಮ ವಿರುದ್ಧವೂ ತೀರ್ಪು ಬರುತ್ತವೆ. ಆದರೆ ನ್ಯಾಯಾಲಯದ ಬಗ್ಗೆ ನಾವು ಯಾವತ್ತೂ ತಪ್ಪು ಮಾತನಾಡುವುದಿಲ್ಲ. ಆದರೆ ಸಚಿವ ಜಮೀರ್ ನ್ಯಾಯಾಲಯದ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಏನು ಮಾಡಬೇಕೆಂದು ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್ ದಶೋತ್ಸವಕ್ಕೆ ವಿದ್ಯುಕ್ತ ಚಾಲನೆ