ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ನಾಗಮಂಗಲದ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಭಾರೀ ಗದ್ದಲ, ಕೋಲಾಹಲಕ್ಕೆ ವೇದಿಕೆ ಒದಗಿಸಿತ್ತು. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಮತ್ತು ಸಿಎಂ ಸಿದ್ದರಾಮಯ್ಯ (Siddaramaiah) ನಡುವೆ ತೀವ್ರ ವಾಕ್ಸಮರ ನಡೆಯಿತು.
ನಾಗಮಂಗಲ ಕೆಎಸ್‌ಆರ್‌ಟಿಸಿ ಡಿಪೋ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ, ಸಚಿವರ ರಾಜೀನಾಮೆ ಪಡೆಯುವಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಜಂಟಿ ಹೋರಾಟ ನಡೆಸಿದರು. ಇದನ್ನೂ ಓದಿ: ಹೆಚ್‌ಡಿಕೆಯ ವರ್ಗಾವಣೆ ಬಾಂಬ್‌ಗೆ ‘ದ್ವೇಷ’ದ ಪಂಚ್ ಕೊಟ್ಟ ಸಿದ್ದರಾಮಯ್ಯ
Advertisement
Advertisement
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೊದಲು ಪ್ರಕರಣದ ಬಗ್ಗೆ ಪ್ರಸ್ತಾಪಿಸಿ, ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ತನಿಖೆ ಮುಗಿಯೋವರೆಗೂ ಸಚಿವ ಚೆಲುವರಾಯಸ್ವಾಮಿ ರಾಜೀನಾಮೆ ಕೊಡಬೇಕು ಅಂತ ಆಗ್ರಹಿಸಿದರು. ಬಳಿಕ ಮಧ್ಯ ಪ್ರವೇಶಿಸಿದ ಹೆಚ್‌ಡಿಕೆ ಸಚಿವ ಚೆಲುವರಾಯಸ್ವಾಮಿ ವಿರುದ್ಧ ತೀಕ್ಷ್ಣವಾಗಿಯೇ ವಾಗ್ದಾಳಿ ನಡೆಸಿದರು. ಈ ವೇಳೆ ಪರಸ್ಪರ ನಡುವೆ ವಾಕ್ಸಮರ ನಡೆಯಿತು. ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚೆಲುವರಾಯಸ್ವಾಮಿ ಕಾರಣ ಅಂತ ಹೆಚ್‌ಡಿಕೆ ಆರೋಪಿಸಿದರು. ಇತ್ತ, ಮೈಸೂರು ಆಸ್ಪತ್ರೆಗೆ ಜಗದೀಶ್ ದಾಖಲು ತಡೆದಿದ್ದು ಹೆಚ್‌ಡಿಕೆ, ಆತನಿಗೆ ಹೆಚ್ಚು ಕಡಿಮೆ ಆದ್ರೆ ಹೆಚ್‌ಡಿಕೆ ಕಾರಣ ಅಂತ ಚೆಲುವರಾಯಸ್ವಾಮಿ ಕಿಡಿಕಾರಿದರು. ಒಂದು ಹಂತದಲ್ಲಿ ಇಬ್ಬರೂ ಸಹನೆ ಕಳೆದುಕೊಂಡು ಏಕವಚನದಲ್ಲೇ ಬೈದಾಡಿಕೊಂಡರು.
Advertisement
ಇದೇ ವೇಳೆ ಸಚಿವ ಕೆ.ಜೆ ಜಾರ್ಜ್, ಚೆಲುವರಾಯಸ್ವಾಮಿ ಪರ ರಕ್ಷಣೆಗೆ ಬಂದು ಹೆಚ್‌ಡಿಕೆ ವಿರುದ್ಧ ಮುಗಿಬಿದ್ದರು. ಜಾರ್ಜ್ ಮತ್ತು ಹೆಚ್‌ಡಿಕೆ ಮಧ್ಯೆಯೂ ಸಾಕಷ್ಟು ಜಟಾಪಟಿ ನಡೆಯಿತು. ತಾಕತ್ ಇದ್ರೆ ನಿಮ್ಮ ಬಳಿ ಇರೋ ಪೆನ್‌ಡ್ರೈವ್ ಕೊಡಿ ತನಿಖೆ ಮಾಡ್ತೀವಿ ಅಂತ ಜಾರ್ಜ್ ಸವಾಲು ಹಾಕಿದರು. ಇದಕ್ಕೆ ಹೆಚ್‌ಡಿಕೆ, ಇಲ್ಲೇ ಆಡಿಯೋ ವ್ಯವಸ್ಥೆ ಮಾಡಿ 224 ಶಾಸಕರಿಗೂ ಪೆನ್‌ಡ್ರೈವ್ ಆಡಿಯೋ ಕೇಳಿಸ್ತೀನಿ ಅಂತ ಪ್ರತಿ ಸವಾಲೊಡ್ಡಿದರು. ಇನ್ನೂ ಪೆನ್‌ಡ್ರೈವ್‌ನಲ್ಲಿರುವ ಸಚಿವರ ಹೆಸರೇ ಹೇಳಿಲ್ಲ. ನೀವ್ಯಾಕೆ ಮೈಪರಚಿಕೊಳ್ತೀರ ಅಂತ ಜಾರ್ಜ್‌ಗೆ ಹೆಚ್‌ಡಿಕೆ ಟಾಂಗ್ ಕೊಟ್ಟರು. ಇದನ್ನೂ ಓದಿ: ನಾನು ವರ್ಗಾವಣೆ ದಂಧೆ ನಡೆಸಿದ್ದೇನೆ ಅಂತ ಒಂದು ಪ್ರಕರಣ ತೋರಿಸಿದ್ರೆ ರಾಜಕೀಯ ನಿವೃತ್ತಿ: ಹೆಚ್‌ಡಿಕೆ
Advertisement
ಮಾತಾಡುವಾಗ ಸಿಎಂ ಸಿದ್ದರಾಮಯ್ಯರನ್ನೂ ಹೆಚ್‌ಡಿಕೆ ಕೆಣಕಿದರು. ಇಂದು ಬೆಳಗ್ಗೆ ಸಿದ್ದರಾಮಯ್ಯರ ಮಾಧ್ಯಮ ಹೇಳಿಕೆ ಬಗ್ಗೆ ಉಲ್ಲೇಖಿಸಿದ ಹೆಚ್‌ಡಿಕೆ, ಸಿದ್ದರಾಮಯ್ಯನವರು ಮಾಧ್ಯಮಗಳ ಎದುರು ದೇವೇಗೌಡರು ಕುಟುಂಬದ ಬಗ್ಗೆ ಮಾತಾಡಿದ್ದಾರೆ. ಮುಖ್ಯಮಂತ್ರಿಗಳು ಭಾರೀ ಉತ್ತರ ಕೊಟ್ಟುಬಿಟ್ಟಿದ್ದಾರೆ ಅಂತ ಕೆಲವರು ಅವರಿಗೆ ಶೇಕ್ ಹ್ಯಾಂಡ್ ಕೊಟ್ಟರು. ಇದನ್ನೆಲ್ಲ ನಾನು ಗಮನಿಸಿದ್ದೇನೆ. ದೇವೇಗೌಡರನ್ನು ನೀವು ಕುತ್ತಿಗೆ ಕುಯ್ದ್ರಿ. ಜೆಡಿಎಸ್‌ನ ಬಿಜೆಪಿ ‘ಬಿ’ ಟೀಮ್ ಅಂದ್ರಿ. ಈಶ್ವರಪ್ಪರಿಂದ ಸಣ್ಣ ವಿಷಯಕ್ಕೆ ರಾಜೀನಾಮೆ ತಗೊಂಡ್ರಲ್ಲ. ಈಗ ಯಾಕೆ ಚೆಲುವರಾಯಸ್ವಾಮಿ ರಾಜೀನಾಮೆ ಕೊಡ್ತಿಲ್ಲ ಅಂತ ಸಿದ್ದರಾಮಯ್ಯಗೆ ಠಕ್ಕರ್ ಕೊಟ್ಟರು. ಹೆಚ್‌ಡಿಕೆ ಮಾತಿಗೆ ಸಿಟ್ಟಾದ ಸಿಎಂ, ನಿಮಗೆ ಯಾರು ಹೆದರುಕೊಳ್ಳುವುದಿಲ್ಲ ಕುಮಾರಸ್ವಾಮಿಯವರೇ. ನನಗೂ ಇದಕ್ಕೂ ಏನ್ರೀ ಸಂಬಂಧ. ನನಗೆ ಇದರ ಬಗ್ಗೆ ಗೊತ್ತೇ ಇಲ್ಲ. ಯಾರಿಗೆ ನೀವು ಹೆದರಿಸ್ತೀರಿ. ನಾನು ಹೆದರಿಕೊಂಡು ರಾಜಕಾರಣ ಮಾಡಿಲ್ಲ ಅಂತ ತಿರುಗೇಟು ನೀಡಿದರು.
ಸಿಎಂ vs ಮಾಜಿ ಸಿಎಂ ಜಟಾಪಟಿ
ಮಾಜಿ ಸಿಎಂ ಹೆಚ್‌ಡಿಕೆ ಮಾತನಾಡಿವಾಗ, ಬಹಳ ಚೆನ್ನಾಗಿ ಉತ್ತರ ಕೊಟ್ಟಿದ್ದೀರ ಅಂತ ನಮ್ಮ ಮುಖ್ಯಮಂತ್ರಿಗಳಿಗೆ ಶೇಕ್ ಹ್ಯಾಂಡ್ ಬೇರೆ ಕೊಟ್ರು. ರೀ.. ನಾವು ಇದಕ್ಕೆಲ್ಲ ಕೇರ್ ಮಾಡಲ್ಲ. ಇದನ್ನೆಲ್ಲ ಗಮನಿಸುತ್ತಿರುತ್ತೇವೆ. ಇಂಥದ್ದನ್ನೆಲ್ಲ ಬಹಳ ನೋಡಿಬಿಟ್ಟಿದ್ದೀವಿ. ಈ ಥರದ ರಾಜಕಾರಣ ಯಾರಿಗೂ ಶಾಶ್ವತ ಅಲ್ಲ ಎಂದು ಸಿಎಂ ಸಿದ್ದುಗೆ ಟಾಂಗ್ ಕೊಟ್ಟರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿಮಗೆಲ್ಲ ಹೆದರಿಕೊಳ್ತೀವೇನ್ರಿ ನಾವು. ನೀವು ಕೇರ್ ಮಾಡಿದ್ರೆ, ನಾವು ಕೇರ್ ಮಾಡ್ತೀವಿ. ಕೇರ್ ಮಾಡಲ್ಲ ಅಂದ್ರೆ.. ನಾವು ಕೇರ್ ಮಾಡಲ್ಲ. ಯಾರ್ರೀ ಹೆದರಿಕೊಳ್ತಾರೆ ನಿಮಗೆ? ನಾನು ಸುಮ್ನೆ ಕುಲುಕಿದ್ದೇನೆ. ಅವರು ಬಂದು ಕೈ ಕುಲುಕಿದ್ರೆ.. ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ ಅಂತ ಕೈ ಕುಲುಕಿದ್ರು ಅಂತ ಹೇಳಿದ್ರೆ? ನನಗೂ ಇದ್ದಕ್ಕೂ ಸಂಬಂಧವೇ ಇಲ್ಲ ಎಂದು ಹೆಚ್‌ಡಿಕೆ ವಿರುದ್ಧ ಗರಂ ಆದರು. ಇದನ್ನೂ ಓದಿ: ಯತೀಂದ್ರ ನಮ್ಮ ಮನೆಯಲ್ಲಿದ್ದಾರೆ ಅಂತ ಆರೋಪ ಮಾಡೋದು ಸರಿಯಲ್ಲ – HDK ವಿರುದ್ಧ ಸಿಎಂ ವಾಗ್ದಾಳಿ
ಈ ವೇಳೆ, ನಾವು ಕೂಡ ಕೇರ್ ಮಾಡಲ್ಲ ಅಂತ ಹೆಚ್‌ಡಿಕೆ ಪ್ರತಿ ವಾಗ್ದಾಳಿ ನಡೆಸಿದರು. ಆಗ ಸಿಎಂ ಸಿದ್ದರಾಮಯ್ಯ ಮಾತನಾಡಿ, ನೀವು ಕೇರ್ ಮಾಡಲ್ಲ ಅಂದ್ರೆ.. ಅದರ ಅಪ್ಪನಷ್ಟು ನಾವು ಕೇರ್ ಮಾಡಲ್ಲ. ಹೇಯ್.. ಹೋಗ್ರಿ ಕೇರ್ ಮಾಡದೇ ಇದ್ರೆ ನೀವು. ಇಂಥವರನ್ನ ಬಹಳ ಜನರನ್ನ ನೋಡಿಬಿಟ್ಟಿದ್ದೀನಿ ಎಂದು ಜೋರು ಧ್ವನಿಯಲ್ಲೇ ಮಾತನಾಡಿದರು.
Web Stories