ಬೆಂಗಳೂರು: ಪೊಲೀಸ್ ಇಲಾಖೆಯನ್ನು (Police Department) ಕೇಸರೀಕರಣಗೊಳ್ಳಲು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ (Vidhana Soudha) ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟು ದಿನ ಪೊಲೀಸರು ಬಿಜೆಪಿ ಪರ ಕೆಲಸ ಮಾಡಿದ್ದು ಗೊತ್ತಿದೆ. ನಾಲ್ಕು ವರ್ಷಗಳ ನಿಮ್ಮ ವರ್ತನೆಗಳು ನಮಗೆ ತಿಳಿದಿದೆ. ಇನ್ನಾದರೂ ಉತ್ತಮ ಕೆಲಸ ಮಾಡಿ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಎಂ.ಬಿ ಪಾಟೀಲ್‌ಗೆ ನೇರ ಎಚ್ಚರಿಕೆ ಕೊಟ್ಟ ಡಿಕೆ ಸುರೇಶ್
ಸಿದ್ದರಾಮಯ್ಯರ ಜೊತೆ ಪೊಲೀಸರು ನಡೆದುಕೊಂಡ ರೀತಿ ತಿಳಿದಿದೆ. ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದರೂ ಕೇಸ್ ಹಾಕಿಲ್ಲ. ನಿಮ್ಮ ಕೆಲಸಗಳನ್ನು ಚೆನ್ನಾಗಿ ಗಮನಿಸಿದ್ದೇವೆ ಇನ್ನೂ ಇದೆಲ್ಲ ನಡೆಯುವುದಿಲ್ಲ ಎಂದಿದ್ದಾರೆ.
ಮಂಗಳೂರಿನಲ್ಲಿ ಪೊಲೀಸರು ಕೇಸರಿ ಶಾಲು ಹಾಕುತ್ತಾರೆ ಎಂದರೆ ಅರ್ಥ ಏನು? ಈಗ ಕೇಸರಿ ಶಾಲು ಹಾಕಿ ನೋಡೋಣ? ನಮ್ಮ ಸರ್ಕಾರದಲ್ಲಿ ಈ ರೀತಿಯಾಗಲು ಅವಕಾಶ ಕೊಡುವುದಿಲ್ಲ. ಎಂದು ಗುಡುಗಿದ್ದಾರೆ.
ಆಯುಧ ಪೂಜೆ ವೇಳೆ ಉಡುಪಿಯ ಕಾಪು (Kapu) ಪೊಲೀಸ್ ಠಾಣಾ ಪೊಲೀಸರು ಕೇಸರಿ ಶಾಲು ಧರಿಸಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಯುಪಿಎಸ್‍ಸಿ ಫಲಿತಾಂಶ ಪ್ರಕಟ – ಲೇಡಿಸ್‍ಗೆ ಫಸ್ಟ್ 4 ರ‍್ಯಾಂಕ್