ಬೆಂಗಳೂರು: ಮಾಜಿ ಸಚಿವ ಹಿರಿಯ ಶಾಸಕ ರಾಯರೆಡ್ಡಿ (Rayareddy) ಸಿಎಂಗೆ ಪತ್ರ ಬರೆದ ವಿಚಾರ ಸದ್ದು ಮಾಡಿದ್ದ ಬೆನ್ನಲ್ಲೇ ಪತ್ರ ವ್ಯವಹಾರಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಕೆಲಸ ಆಗಬೇಕಿರುವ ಇಲಾಖೆಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಿ. ನಿಮ್ಮ ಪತ್ರಕ್ಕೆ ಸಚಿವರು ಸ್ಪಂದಿಸದಿದ್ದರೆ ಕೆಲಸ ಆಗದಿದ್ದರೆ ನನ್ನ ಬಳಿ ಬನ್ನಿ. ಆಗಲೂ ಬಗೆಹರಿಯದಿದ್ದರೆ ಪತ್ರ ಬರೆಯಿರಿ. ಎಲ್ಲದಕ್ಕೂ ನನಗೆ ಪತ್ರ ಬರೆದರೆ ಹೇಗೆ? ಎಂದು ಸ್ವ ಪಕ್ಷೀಯ ಶಾಸಕರಿಗೆ ಸಂದೇಶ ರವಾನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾವೇರಿ ಅರ್ಜಿ ವಿಚಾರಣೆ ಸೆ.21ಕ್ಕೆ ಮುಂದೂಡಿಕೆ
ಎಲ್ಲಾ ಸಚಿವರು ಶಾಸಕಾಂಗ ಪಕ್ಷದ ಸಭೆ ನಂತರ ಹಾಗೂ ಸಿಎಂ ಜೊತೆಗಿನ ಜಿಲ್ಲಾವಾರು ಸಭೆಯ ನಂತರ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಹಾಗಿದ್ದು ನನಗೆ ನೇರವಾಗಿ ಪತ್ರ ಬರೆಯುವ ಸಂಪ್ರದಾಯ ಒಳ್ಳೆಯದಲ್ಲ. ಸಚಿವರನ್ನ ಮೊದಲು ಸಂಪರ್ಕಿಸಿ ಆಮೇಲೆ ಬನ್ನಿ ಎಂಬ ಸಂದೇಶವನ್ನು ಸ್ವಪಕ್ಷಿಯ ಶಾಸಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಅನಗತ್ಯ ವಿವಾದಗಳಿಗೆ ಈ ಮೂಲಕ ತೆರೆ ಎಳೆಯಲು ಅವರು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಒಟ್ಟಾರೆ ಸುಖ ಸುಮ್ಮನೆ ಪತ್ರ ಬರೆದು ಸರ್ಕಾರವನ್ನ ಮುಜುಗರಕ್ಕೆ ಸಿಲುಕಿಸದಂತೆ ಸಿಎಂ ಶಾಸಕರಿಗೆ ನೇರವಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕುಡಿದು ಬೈಕ್ ಸವಾರನೇ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ: ಚಂದ್ರಪ್ರಭಾ
Web Stories