ದೇಶದ ಬಡವರ ಆರಾಧ್ಯ ದೈವ ಆಗಿದ್ರು ಇಂದಿರಾಗಾಂಧಿ: ಸಿದ್ದರಾಮಯ್ಯ

Public TV
2 Min Read
SIDDARAMAIAH 1

– ವಾಜಪೇಯಿಯವ್ರು ಇಂದಿರಾಗಾಂಧಿಯನ್ನು ದುರ್ಗಿ ಅಂದಿದ್ದರು

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರು (Indira Gandhi) ದೇಶದ ಬಡವರ ಆರಾಧ್ಯ ದೈವ ಆಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು (Atal Bihari Vajpayee) ಸಂಸತ್‍ನಲ್ಲಿ ಇವರನ್ನು ದುರ್ಗಿ ಅಂತ ಕರೆದಿದ್ದರು ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

INDIRA GANDHI

ಇಂದು ಇಂದಿರಾಗಾಂಧಿ 39ನೇ ಪುಣ್ಯ ಸ್ಮರಣೆಯ ನಿಮಿತ್ತ ಕೆಪಿಸಿಸಿ ಕಚೇರಿಯಲ್ಲಿ (KPCC Office) ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಲಾಲ್ ಬಹಾದ್ದೂರ್ ಶಾಸ್ತ್ರಿ ಸಂಪುಟದಲ್ಲಿ ಮಂತ್ರಿ ಆಗಿದ್ರು. ಲಾಲ್ ಬಹಾದ್ದೂರ್ ಶಾಸ್ತ್ರಿ ನಂತರ ದೇಶದ ಪ್ರಧಾನಿ ಆದರು. ದೇಶದ ಬಡವರ ಆರಾಧ್ಯ ದೈವ ಆಗಿದ್ರು ಇಂದಿರಾಗಾಂಧಿ. ನಾನು ಜನತಾ ಪಾರ್ಟಿಯಲ್ಲಿ ಇದ್ದೆ. ಹಾರೋಹಳ್ಳಿಯಲ್ಲಿ ವೋಟ್ ಕೇಳೋಕೆ ಹೋಗಿದ್ದೆ. ರಾಜಶೇಖರ ಮೂರ್ತಿ ಊರಿನ ಜನರನ್ನ ಸೇರಿಸಿ ಮಾತಾಡುತ್ತಿದ್ದರು. ನಾನು ಮನೆ ಮನೆಗೆ ಹೋಗಿ ನೋಡಿದ್ರೆ ಇಂದಿರಾಗಾಂಧಿ ಫೋಟೋ ಇತ್ತು. ನಾನು ಆಗ ಕೇಳಿದಾಗ ನಾವು ಎಲ್ಲಾ ಇಂದಿರಾಗಾಂಧಿಗೆ ವೋಟ್ ಹಾಕೋದು ಅಂತ ಹೇಳಿದ್ರು. ಆಗ ನಾನು ರಾಜಶೇಖರ ಅವರಿಗೆ ಇಲ್ಲಿ ವೋಟ್ ಬರೊಲ್ಲ ಅಂತ ಹೇಳಿದ್ದೆ. ಅಷ್ಟರ ಮಟ್ಟಿಗೆ ಆರಾಧ್ಯ ದೈವ ಅಂತ ಪೂಜೆ ಮಾಡುತ್ತಿದ್ದರು. ಇಂತಹ ಪಾಪ್ಯುಲರ್ ಲೀಡರ್ ಅನ್ನ ಇನ್ನೊಬ್ಬರು ದೇಶದಲ್ಲಿ ನೋಡಿಲ್ಲ ಎಂದರು.

ದೇಶದಲ್ಲಿ ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹತ್ಯೆ ಮರೆಯೋಕೆ ಆಗಲ್ಲ. ಇವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇವರನ್ನ ಉಕ್ಕಿನ ಮಹಿಳೆ ಅಂತ ಕರೆಯುತ್ತಾರೆ. ವಾಜಪೇಯಿ ಅವರು ಸಂಸತ್ ನಲ್ಲಿ ಇವರನ್ನು ದುರ್ಗಿ ಅಂತ ಕರೆದಿದ್ದರು ಎಂದರು. ಇನ್ನು ಬಿಜೆಪಿ ಅವರು ರಾಷ್ಟ್ರಪ್ರೇಮದ ಬಗ್ಗೆ ಮಾತಾಡ್ತಾರೆ. ಆದರೆ ಅವರಲ್ಲಿ ಒಬ್ಬರೂ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿಲ್ಲ. ದೇಶಕ್ಕೆ ಬಲಿದಾನ ಮಾಡಿದ್ದು ನೆಹರು ಕುಟುಂಬ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಸೆರೆಗೆ ಬಂದ ಮೈಸೂರಿನ ಸ್ಪೆಷಲ್ ಎಕ್ಸ್‌ಪರ್ಟ್‌ ಟೀಂ

ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ರೇವಣ್ಣ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ನರೇಂದ್ರ ಸ್ವಾಮಿ, ರಾಣಿ ಸತೀಶ್, ನಜೀರ್ ಅಹಮದ್ ಸೇರಿ ಹಲವು ನಾಯಕರು ಭಾಗಿಯಾಗಿದ್ದು, ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

Web Stories

Share This Article