ಮಂಡ್ಯ: ತಮ್ಮ ಪರವಾಗಿ ಒಂದೆರೆಡು ಕಡೆ ಪ್ರಚಾರ ಮಾಡಬೇಕು ಎಂದು ಒತ್ತಾಯ ಮಾಡಿದ ಶಾಸಕ ನರೇಂದ್ರಸ್ವಾಮಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ ಘಟನೆ ಮಂಡ್ಯದ ಮಳವಳ್ಳಿಯಲ್ಲಿ ನಡೆದಿದೆ.
ಇಂದು ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ನರೇಂದ್ರಸ್ವಾಮಿ ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ್ರು. ಆದ್ರೆ ಈ ವೇಳೆ ಕೇವಲ ಒಂದು ಕಡೆ ಮಾತ್ರ ಪ್ರಚಾರ ಮಾಡಿ ಹೋಗೋದಾಗಿ ಹೇಳಿದ ಸಿಎಂ ಅವರನ್ನು ಶಾಸಕ ನರೇಂದ್ರಸ್ವಾಮಿ ಮತ್ತೊಂದು ಕಡೆ ಪ್ರಚಾರಕ್ಕೆ ಬರುವಂತೆ ಪಟ್ಟು ಹಿಡಿದ್ರು.
ಇದ್ರಿಂದ ಕೆರಳಿದ ಸಿಎಂ ಹೇಳಿದ್ರೆ ಅರ್ಥ ಆಗಲ್ವ. ನಾನು ಕೇವಲ ಅರ್ಧ ಗಂಟೆ ಮಾತ್ರ ಇರೋದು. ತುಂಬಾ ಕಡೆ ಪ್ರಚಾರ ಇದೆ, ಬೇಗ ಹೋಗ್ಬೇಕು, ಬಲವಂತ ಮಾಡಬೇಡ ಎಂದು ಆಕ್ರೋಶ ಹೊರಹಾಕಿದ್ರು.
ಕೊನೆಗೆ ಶಾಸಕರ ಬೇಡಿಕೆಗೆ ಮಣಿದು ಎರಡು ಕಡೆ ಪ್ರಚಾರ ನಡೆಸಿ ವಾಪಸ್ಸಾದ್ರು. ಇದೇ ವೇಳೆ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಸಿಎಂ ಹೆಲಿಕಾಪ್ಟರ್ ಮತ್ತು ಪಟ್ಟಣದಲ್ಲಿ ಸಿಎಂ ಸಂಚರಿಸಿದ ಫಾರ್ಚೂನರ್ ಕಾರನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ರು. ಇದನ್ನೂ ಓದಿ: ನರೇಂದ್ರಸ್ವಾಮಿ ಬದಲು ನರೇಂದ್ರ ಮೋದಿಗೆ ವೋಟ್ ಹಾಕಿ ಎಂದ ಸಿಎಂ- ವಿಡಿಯೋ ನೋಡಿ