ಬೆಂಗಳೂರು: ಮುಡಾ ಹಗರಣ (MUDA Scam) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಕುಟುಂಬ ಪಾರಾಗಿದ್ದಾರೆ. ಆದ್ರೆ, ಕಾನೂನಿನ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು ಈಗ ಸಂಕಷ್ಟ ಎದುರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.
Advertisement
ಹೌದು. 2003-04 ರಿಂದಲೂ ಕೂಡ ಮುಡಾದ ಅಧಿಕಾರಿಗಳು, ಮುಡಾದ ಆಡಳಿತ ಅಧಿಕಾರಿಗಳು ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಲೋಕಾಯುಕ್ತ (Lokayukta) ತೀರ್ಮಾನಕ್ಕೆ ಬಂದಿದೆ. 2016 ರಿಂದ 2024ರ ವರೆಗೂ ಮುಡಾದಲ್ಲಿ ಆಯುಕ್ತರಾಗಿದ್ದ ಅಧಿಕಾರಿಗಳು 1,098 ಸೈಟ್‌ಗಳು ದುರ್ಬಳಕೆ ಆಗಿದೆ ಎಂದು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ – ಮೈಸೂರು KSRTC ಸೂಚನೆ
Advertisement
Advertisement
ಲೋಕಾಯುಕ್ತ ಬಿಟ್ಟರೂ ಇಡಿ ಬಿಡಲ್ಲ
ಸಿಎಂ ವಿರುದ್ಧದ ಮುಡಾ ಹಗರಣ ಪ್ರಕರಣಕ್ಕೆ ಲೋಕಾಯುಕ್ತ ತನಿಖೆ ನಿರಾಳ ನೀಡಿದೆ. ನಾಲ್ಕು ತಿಂಗಳ ಕಾಲ ಸುಧೀರ್ಘವಾದ ತನಿಖೆ ನಡೆಸಿದ ನ್ಯಾಯಾಲಯ ಈಗ ಸಿಎಂ ಮತ್ತು ಕುಟುಂಬದ ವಿರುದ್ಧದ ಆರೋಪಿಗಳಿಗೆ ಸಾಕ್ಷ್ಯಾಧಾರಗಳು ಇಲ್ಲ ಅಂತ ಅಂತಿಮ ವರದಿ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ದೃಶ್ಯಂ 3 ಸಿನಿಮಾ ಕನ್ಫರ್ಮ್ – ಕ್ಲೈಮ್ಯಾಕ್ಸ್ ಬಗ್ಗೆ ಹೆಚ್ಚಾಯ್ತು ಕುತೂಹಲ
Advertisement
ಈ ಮೂಲಕ ಸಿಎಂ ಕುಟುಂಬ ನಿರಾಳ ಆಗಿಲ್ಲ, ಇನ್ನೂ ಕೂಡ ಇಡಿ ಕಂಟಕ ಎದುರಿಸಬೇಕಾದ ಅನಿವಾರ್ಯತೆ ಇದೆ. ಕಾನೂನಿನಲ್ಲಿ ಇಡಿ ತನಿಖಾ ಸಂಸ್ಥೆಗೆ ಲೋಕಾಯುಕ್ತ ಸಲ್ಲಿಕೆ ಮಾಡಿರುವ ಬಿ ರಿಪೋರ್ಟ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅಧಿಕಾರ ಹೊಂದಿದೆ. ಇದನ್ನೇ ದಾಳ ಮಾಡಿಕೊಂಡಿರೋ ಇಡಿ ದೂರುದಾರ ಸ್ನೇಹಮಯಿ ಕೃಷ್ಣ ಪ್ರೊಟೆಸ್ಟ್ ಅಪ್ಲಿಕೇಷನ್ ಅಂದ್ರೆ ಬಿ ರಿಪೋರ್ಟ್ ಸ್ವೀಕೃತಿ ಮಾಡಬಾರದು ಅಂತ ಅರ್ಜಿ ಹಾಕಿದ್ರೆ, ಇಡಿ ಕೂಡ ಪ್ರತ್ಯೇಕವಾದ ಅರ್ಜಿ ಹಾಕಲು ತಯಾರಿ ನಡೆಸಿದೆ.
ಜೊತೆಗೆ ಬಿ ರಿಪೋರ್ಟ್ ಸಲ್ಲಿಕೆ ಇಂದ ನಮ್ಮ ತನಿಖೆಗೆ ಯಾವುದೇ ತೊಂದರೆ ಇಲ್ಲ ಅಂತ ತನಿಖೆ ಮುಂದುವರೆಸಿದ್ದು, ಅತೀ ದೊಡ್ಡ ಸಂಕಷ್ಟ ಸಿಎಂ ಮತ್ತು ಕುಟುಂಬ ಎದುರಿಸುತ್ತಾ ಬೇಕಾಗಿದೆ. ಇದನ್ನೂ ಓದಿ: ಮಾನವೀಯತೆ ಮರೆತ ಶೇಷಾದ್ರಿಪುರಂ ಪೊಲೀಸರು – ತಡರಾತ್ರಿವರೆಗೆ ಠಾಣೆಯಲ್ಲಿ ಗರ್ಭಿಣಿ ಪರದಾಟ