ಪಾಟ್ನಾ: ಹೊಸ ಮೈತ್ರಿ ಸರ್ಕಾರದ ಬಾಕಿ ಅವಧಿಯಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ. ಸಾರ್ವಜನಿಕ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ.
We are true socialists, who practice what they preach. We are not 'jumla party'. Bihar has set an example, it has set a parameter. This has sent out a deep message across the country and this is going to be the real issue: Bihar's Deputy CM Tejashwi Yadav pic.twitter.com/wMcmaSffiV
— ANI (@ANI) August 15, 2022
Advertisement
ಎನ್‍ಡಿಎ ಮೈತ್ರಿಯಿಂದ ಹೊರ ಬಂದು ವಿಪಕ್ಷಗಳ ಜೊತೆಗೆ ಸರ್ಕಾರ ರಚನೆ ಬಳಿಕ ಮೊದಲ ಬಾರಿಗೆ ನಿತೀಶ್ ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಮತ್ತು ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಕಳೆದ ಚುನಾವಣಾ ಪ್ರಚಾರದ ಸಮಯದಲ್ಲಿ 10 ಲಕ್ಷ ಉದ್ಯೋಗಗಳ ಭರವಸೆ ಹೇಳಿಕೆಯನ್ನು ಉಲ್ಲೇಖಿಸಿ ನಿತೀಶ್ ಈ ಘೋಷಣೆ ಮಾಡಿದ್ದಾರೆ.
Advertisement
Advertisement
ನಿತೀಶ್ ಕುಮಾರ್ ಘೋಷಣೆ ಬೆನ್ನಲ್ಲೇ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದು, ಇದೊಂದು ಐತಿಹಾಸಿಕ ಘೋಷಣೆ, ನಿರುದ್ಯೋಗಿ ಯುವಕರ ನಿರೀಕ್ಷೆಗಳು ಈಡೇರಲಿದೆ. ಇದಕ್ಕಾಗಿ ನಾನು ನಿತೀಶ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಹಾಗೂ ಬಿಹಾರವನ್ನು ಅಭಿವೃದ್ಧಿ ಮತ್ತು ಪ್ರಗತಿಯ ಪಥದಲ್ಲಿ ಕೊಂಡೊಯ್ಯುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ.
Advertisement
It's a historic day & CM announced from a historic place. He clearly said that we'll give 10 lakh jobs & we want to increase it to 20 lakh. We will also work towards generating employment. We thank the CM. This is youth's victory, Bihar's victory: Bihar's Deputy CM Tejashwi Yadav pic.twitter.com/iSWrkI43Qv
— ANI (@ANI) August 15, 2022
ಸಮಾಜದಲ್ಲಿ ಕೋಮು ಸೌಹಾರ್ದತೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಜನರನ್ನು ಒತ್ತಾಯಿಸಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ, ಈಗ ಯುವ ಶಕ್ತಿಯೊಂದಿಗೆ ಕೆಲಸ ಮಾಡಲು ಅವಕಾಶವಿದೆ ಮತ್ತು ಅವರು ಬಿಹಾರವನ್ನು ಅಭಿವೃದ್ಧಿ ಮತ್ತು ಪ್ರಗತಿಯ ಹೊಸ ಹಾದಿಗೆ ಕೊಂಡೊಯ್ಯುವ ನಿರೀಕ್ಷೆಯಿದೆ ಎಂದು ಹೇಳಿದರು.
2006 ರಿಂದ ಯಾವುದೇ ಕೋಮು ಉದ್ವಿಗ್ನತೆ ಇಲ್ಲ ಎಂದು ಖಚಿತಪಡಿಸಿಕೊಂಡಿದ್ದೇವೆ. ಇಂತಹ ವಿಷಯಗಳಲ್ಲಿ ಪೋಲೀಸರ ಪ್ರತಿಕ್ರಿಯೆಯು ತುಂಬಾ ವೇಗವಾಗಿತ್ತು. ಪರಿಣಾಮವಾಗಿ, ಕೋಮು ಉದ್ವಿಗ್ನತೆಯ ಪ್ರಕರಣಗಳು ಕಡಿಮೆಯಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ, 39ರಷ್ಟು ಕಡಿಮೆ ಮಳೆಯಾಗಿದ್ದು, ಈವರೆಗೆ ಶೇ 80ರಷ್ಟು ಭತ್ತ ಬಿತ್ತನೆಯಾಗಿದೆ ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]