ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ದೆಹಲಿ ಕನ್ನಡ ಸಂಘಕ್ಕೆ ಸಿ.ಎಂ ನಾಗರಾಜ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಸಿ.ಎಂ ನಾಗರಾಜ್ ತಂಡದ ಒಂಭತ್ತು ಮಂದಿ ಚುನಾವಣೆಯಲ್ಲಿ ವಿವಿಧ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ.
Advertisement
ದೆಹಲಿ ಕರ್ನಾಟಕ ಸಂಘದ 2021-23 ಕಾರ್ಯಕಾರಿ ಸಮಿತಿ ಆಯ್ಕೆಗೆ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾದ ವೆಂಕಟಾಚಲ ಹೆಗಡೆ ವಿರುದ್ಧ 443 ಮತಗಳನ್ನು ಪಡೆಯುವ ಮೂಲಕ ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಎಂ ನಾಗರಾಜ್ ಅಧ್ಯಕ್ಷರಾಗಿ ಆಯ್ಕೆಯಾದರು. ಇದನ್ನೂ ಓದಿ: ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ
Advertisement
Advertisement
ಉಪಾಧ್ಯಕ್ಷರಾಗಿ ಡಾ.ಎಂ ಎಸ್ ಶಶಿಕುಮಾರ್, ಮಹಿಳಾ ಮೀಸಲಿನಲ್ಲಿ ಪೂಜಾ ಪಿ. ರಾವ್ ಆಯ್ಕೆಯಾಗಿದ್ದಾರೆ. ಆರ್. ರೇಣುಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ, ಜಂಟಿ ಕಾರ್ಯದರ್ಶಿಯಾಗಿ ಬಿ. ನಾರಾಯಣ, ಮಹಿಳಾ ಮೀಸಲು ಕೋಟಾದಲ್ಲಿ ಸುಮಿತಾ ಮುರಗೋಡ ಚುನಾಯಿತರಾಗಿದ್ದಾರೆ. ಖಜಾಂಚಿಯಾಗಿ ರಾಧಾಕೃಷ್ಣ ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಭಾಕರ ಮಡ್ಡಿತೊಟ, ಶಿವಪ್ಪ ಎಂ, ಎ.ಟಿ. ಶ್ರೀನಿವಾಸ, ಕೆ.ಎಸ್. ಮೂರ್ತಿ, ಮಾಲಿನಿ ಪ್ರಹ್ಲಾದ್, ನವೀನ ಕುಮಾರ್ ವಿ, ಸವಿತಾ ನೆಲ್ಲಿ, ಅಶ್ವಿನಿ ಬಿ ಎಸ್ ಚುನಾಯಿತರಾಗಿದ್ದಾರೆ. ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ
Advertisement