ಬೆಂಗಳೂರು: ಸಿಎಂ ಅನುದಾನ ಕೊಡುತ್ತಿಲ್ಲ ಅಂತ ಪದೇ ಪದೇ ಅನ್ನುತ್ತಿದ್ದ ಶಾಸಕರ ಅಸಲಿಯತ್ತೇ ಬೇರೆಯಾಗಿದ್ದು, ಖುದ್ದು ಸಿಎಂ ಅವರೇ ಅನುದಾನ ತಗೆದುಕೊಳ್ಳಿ ಎನ್ನುತ್ತಿದ್ದರೂ ಶಾಸಕರು ಅನುದಾನವನ್ನು ಬಳಸುತ್ತಿಲ್ಲ.
ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಸದ್ಬಳಕೆಯಲ್ಲಿ ಮೈತ್ರಿ ಶಾಸಕರು ಹಿಂದುಳಿದಿದ್ದಾರೆ. ಶಾಸಕರ ನಿಧಿಯ ಅನುದಾನ ಪಡೆದುಕೊಳ್ಳಿ ಎಂದು ಖುದ್ದು ಸಿಎಂ ಪತ್ರ ಬರೆದಿದ್ದಾರೆ. ಸಿಎಂ ಪತ್ರ ಬರೆದರೂ ಕ್ಷೇತ್ರಾಭಿವೃದ್ಧಿ ಅನುದಾನ ಪಡೆಯಲು ಶಾಸಕರು ಆಸಕ್ತಿ ತೋರುತ್ತಿಲ್ಲ. ಈ ಬಾರಿಯ ವಾರ್ಷಿಕ ಎಂಎಲ್‍ಎ ಫಂಡ್ ಪಡೆಯಲು ಯಾರೊಬ್ಬ ಶಾಸಕರು ಪ್ರಸ್ತಾವನೆ ಸಲ್ಲಿಸಿಲ್ಲ. 60ಕ್ಕೂ ಹೆಚ್ಚು ಎಂಎಲ್‍ಎ ಮತ್ತು ಎಂಎಲ್‍ಸಿಗಳು ಕಳೆದ ವರ್ಷ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಪಡೆದೇ ಇಲ್ಲ. ಹೀಗಾಗಿ ಶಾಸಕರ ನಿಧಿಯಲ್ಲಿ ನೂರಾರು ಕೋಟಿ ಹಣ ಕೊಳೆಯುತ್ತಿದೆ.
ಅನುದಾನ ಬಳಸದ ಶಾಸಕರು
* ಗೋಕಾಕ್ – ರಮೇಶ್ ಜಾರಕಿಹೊಳಿ – 2 ಕೋಟಿ
* ಕಂಪ್ಲಿ – ಜೆ.ಎನ್.ಗಣೇಶ್ – 2 ಕೋಟಿ
* ಕಾಗವಾಡ – ಶ್ರೀಮಂತ ಪಾಟೀಲ್ – 80 ಲಕ್ಷ
* ಬಳ್ಳಾರಿ ಗ್ರಾಮಾಂತರ – ಬಿ.ನಾಗೇಂದ್ರ – 81 ಲಕ್ಷ
* ಯಲ್ಲಾಪುರ – ಶಿವರಾಮ್ ಹೆಬ್ಬಾರ್ – 1.91 ಕೋಟಿ ರೂ
* ಮಸ್ಕಿ – ಪ್ರತಾಪ್ ಗೌಡ ಪಾಟೀಲ – 78 ಲಕ್ಷ
* ಮಳವಳ್ಳಿ – ಅನ್ನದಾನಿ – 1.27 ಕೋಟಿ
* ಕೆ.ಆರ್.ಪೇಟೆ – ನಾರಾಯಣಗೌಡ – 1.01 ಕೋಟಿ
* ಜೇವರ್ಗಿ – ಡಾ.ಅಜಯ್ ಸಿಂಗ್ – 1.93 ಕೋಟಿ
* ಶಿಡ್ಲಘಟ್ಟ – ವಿ.ಮುನಿಯಪ್ಪ – 1.43 ಕೋಟಿ
* ಯಶವಂತಪುರ – ಎಸ್.ಟಿ. ಸೋಮಶೇಖರ್ – 2 ಕೋಟಿ
* ಕೆ.ಆರ್.ಪುರ – ಬೈರತಿ ಬಸವರಾಜ್
ಇದರಿಂದ ಈ ಶಾಸಕರಿಗೆ ನಿಜಕ್ಕೂ ಕ್ಷೇತ್ರದ ಅಭಿವೃದ್ಧಿ ಬೇಕಿಲ್ವಾ?, ಶಾಸಕರಿಗೆ ಕ್ಷೇತ್ರದ ಪ್ರಗತಿಗಿಂತ ರಾಜಕೀಯವೇ ಹೆಚ್ಚಾಯ್ತಾ? ಜೊತೆಗೆ ಸರ್ಕಾರ ಬೀಳಿಸುವುದರಲ್ಲೇ ಬ್ಯುಸಿಯಾಗಿದ್ದಾರ ಮೈತ್ರಿ ಶಾಸಕರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]