– ಮಾಜಿ ಸಚಿವರಿಗೆ ಫೋನ್ ಮಾಡಿದ್ದ ಅಮಿತ್ ಶಾ
ರಾಮನಗರ: ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರ ಮಾಜಿ ಸಚಿವ ಡಿಕೆ ಶಿವಕುಮಾರ್ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಎಂಎಲ್‍ಸಿ ಸಿಎಂ ಲಿಂಗಪ್ಪ ಅವರು ಆರೋಪಿಸಿದ್ದಾರೆ.
ಇಡಿಯಿಂದ ಡಿಕೆಶಿ ವಿಚಾರಣೆಯ ಹಿನ್ನೆಲೆಯಲ್ಲಿ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತ್ ಶಾಸಕರು ಈಗಲ್ ಟನ್ ರೆಸಾರ್ಟಿಗೆ ಬಂದಿದ್ದ ವೇಳೆ ಅಮಿತ್ ಶಾ ಹಾಗೂ ಡಿಕೆಶಿ ನಡುವಿನ ಸಂಭಾಷಣೆ ವಿಚಾರ ಹೊರಹಾಕಿದ್ದೆ. ಆದರೆ ಅಂದು ನನ್ನ ಮಾತನ್ನ ಯಾರೂ ನಂಬಲಿಲ್ಲ. ಅಮಿತ್ ಶಾ ಅವರು 11.30ರ ಸುಮಾರಿಗೆ ಕರೆ ಮಾಡಿದಾಗ ನಾನು ಜೊತೆಯಲ್ಲೇ ಇದ್ದೆ. ಮೂರು ಜನರನ್ನ ಬಿಟ್ಟುಬಿಡು ಅಂದಿದ್ದರು. ಆದರೆ ಡಿಕೆಶಿಯವರು ಒಪ್ಪಲಿಲ್ಲ. ಅಂದೇ ಡಿಕೆಶಿ ಮೇಲಿನ ಸೇಡು ತೀರಿಸಿಕೊಳ್ಳಲು ಶುರುವಾಗಿದೆ ಎಂದರು.
Advertisement
Advertisement
ಅಮಿತ್ ಶಾ ಅವರು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಆರ್ಥಿಕ ಅಪರಾಧ ಮಾಡಿದರೆ ಕುಟುಂಬದವರಿಗೆಲ್ಲ ಕಿರುಕುಳ ನೀಡುವುದು ಯಾವ ನ್ಯಾಯ. ಭ್ರಷ್ಟರು, ಆರ್ಥಿಕ ಅಪರಾಧ ಮಾಡಿರುವವರು ಕಾಂಗ್ರೆಸ್ಸಿಗರು ಎಂಬ ಸಂದೇಶ ಕೊಡಲು ಬಿಜೆಪಿ ಮುಂದಾಗಿದೆ. ಇದನ್ನ ಸಹಿಸಲು ಸಾಧ್ಯವಿಲ್ಲ. ಬೀದಿಗೆ ಇಳಿಯಬೇಕಾಗುತ್ತದೆ. ಈ ಚಾಳಿಯನ್ನ ಬಿಜೆಪಿಯವರು ಬಿಡಬೇಕಿದೆ ಎಂದು ಎಚ್ಚರಿಕೆ ನೀಡಿದರು.
Advertisement
ನೋಟಿಸನ್ನು ಮೂರು ದಿನದ ಅವಧಿ ನೀಡಬೇಕಲ್ವಾ. ಒಂದೇ ದಿನಕ್ಕೆ ಅದರಲ್ಲೂ ಕೆಲವೇ ಗಂಟೆಗಳಲ್ಲಿ ವಿಚಾರಣೆಗೆ ಬನ್ನಿ ಅಂತಾರೆ. ಬಿಜೆಪಿಯವರು ಮನುಷ್ಯ ಕುಟುಂಬದವರಲ್ಲ ಪಶುಕುಟುಂಬಕ್ಕೆ ಸೇರಿದವರು. ಕಾಫೀ ಡೇ ಯ ಸಿದ್ಧಾರ್ಥ ಅವರ ಸಾವಿಗೂ ಐಟಿಯವರೇ ಕಾರಣರಾಗಿದ್ದಾರೆ. ಡಿಕೆಶಿಯವರು ಆದಾಯ ತೆರಿಗೆ ಪಾವತಿಸದೇ ಇರುವವರಲ್ಲ. ಸಿದ್ಧಾರ್ಥ್ ಸಾವಿನಲ್ಲಿ ಐಟಿಯವರು ಇಷ್ಟೊಂದು ಕ್ರೂರಿಗಳಾಗಬೇಕಾ ಎಂದು ಗರಂ ಆಗಿ ಪ್ರಶ್ನಿಸಿದರು.
Advertisement
ಸಿದ್ದರಾಮಯ್ಯನವರು ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿಯವರ ಬಗ್ಗೆ ಸ್ವಪಕ್ಷದಲ್ಲೇ ಅಸಮಧಾನವಿದೆ. ನಿನ್ನೆ ಮೊನ್ನೆಯ ವಿರೋಧವಲ್ಲ. 1995 ರಿಂದಲೂ ಇದು ನಡೆಯುತ್ತಲೇ ಇದೆ. ದೋಸ್ತಿ ಸರ್ಕಾರ ರಚನೆ ವೇಳೆ ಡಿಕೆಶಿಯವರು ಸಾಕಷ್ಟು ಮುಜುಗರ ಅನುಭವಿಸಿದ್ದರು. ಡಿಕೆಶಿಯವರ ಬಂಧನವಾದರೆ ಅದರ ಬಗ್ಗೆ ನಾವೂ ಮುಂದೆ ಏನು ಮಾಡಬೇಕೆಂದು ಯೋಚನೆ ಮಾಡುತ್ತೇವೆ. ಸರ್ಕಾರ ಬಿದ್ದ ಬಳಿಕ ಮೈತ್ರಿ ಕಳೆದುಕೊಂಡೆವು ಅನ್ನೋ ಭಾವನೆ ದೇವೇಗೌಡರಿಗೆ ಬಂದಿದೆ. ಸಿದ್ದರಾಮಯ್ಯ ಒಳ್ಳೆಯ ಮನುಷ್ಯ ಆದರೆ ಸ್ವಲ್ಪ ಮುಂಗೋಪಿ ಅಷ್ಟೇ. ಅನರ್ಹರ ಬಗ್ಗೆ ಕಾಳಜಿಯ ಮಾತುಗಳನ್ನಾಡಿದರು ಎಂದರು.