ಬೆಂಗಳೂರು: ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಭಾರೀ ದುಂದುವೆಚ್ಚ ಆಗಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆಯೇ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಆದ್ರೀಗ, ವಸತಿ ಇಲಾಖೆಯಿಂದ ಆರ್ ಟಿಐ ಮಾಹಿತಿ ಪಡೆದಿದ್ದು, 7 ನಿಮಿಷಗಳ ಕಾರ್ಯಕ್ರಮಕ್ಕೆ ಬರೋಬ್ಬರಿ 42 ಲಕ್ಷ ಖರ್ಚಾಗಿದೆ.
Advertisement
ಮಹಾಘಟ್ ಬಂಧನ್ ಮೂಲಕ ತೃತೀಯ ಶಕ್ತಿ ಅನಾವರಣಕ್ಕೆ ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಜೆಡಿಎಸ್ ಆಹ್ವಾನ ನೀಡಿದ್ದು, ಜೆಡಿಎಸ್ ಪಕ್ಷದ ವತಿಯಿಂದಲೇ ಐಷಾರಾಮಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಹಣವನ್ನು ಜನಸಾಮಾನ್ಯರ ತೆರಿಗೆಯಿಂದ ಪಾವತಿಸಲಾಗಿದೆ ಅನ್ನೋದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Advertisement
7 ನಿಮಿಷಕ್ಕೆ 42 ಲಕ್ಷ ಖರ್ಚು:
ತಾಜ್‍ವೆಸ್ಟೆಂಡ್, ಶಾಂಗ್ರಿ ಹೋಟೆಲ್ ನಲ್ಲಿ ಮೇ 23, 24ರಂದು ಅತಿಥಿಗಳ ವಾಸ್ತವ್ಯ ಕಲ್ಪಿಸಲಾಗಿತ್ತು. ಊಟ, ಕಾಫಿ-ತಿಂಡಿಗೆ ಒಟ್ಟು 37,53,536 ರೂ. ಖರ್ಚು ಆಗಿದ್ದರೆ, ಸಂಜೆ ಟೀ, ಸ್ನಾಕ್ಸ್ ಪಾರ್ಟಿಗೆ 4,35,001 ರೂ. ಖರ್ಚಾಗಿದೆ. ಪ್ರಮಾಣವಚನ ಹೂಗುಚ್ಚಕ್ಕೆ 65 ಸಾವಿರ ರೂ. ಖರ್ಚಾಗಿದೆ.
Advertisement
Advertisement
ಯಾರಿಗೆ ಎಷ್ಟು ಖರ್ಚು?
* ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶ ಸಿಎಂ – 8,72,493 ರೂ.
* ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ – 1,85,287 ರೂ.
* ಶರದ್ ಯಾದವ್, ಲೋಕತಾಂತ್ರಿಕ ಜನತಾದಳ ಪಾರ್ಟಿ – 1,67,457 ರೂ.
* ಮಾಯಾವತಿ, ಬಿಎಸ್‍ಪಿ ಅಧ್ಯಕ್ಷೆ – 1,41,443 ರೂ.
* ಪಿಣರಾಯಿ ವಿಜಯನ್, ಕೇರಳ ಸಿಎಂ – 1,02,400 ರೂ.
* ಅಖಿಲೇಶ್ ಯಾದವ್, ಎಸ್‍ಪಿ ಅಧ್ಯಕ್ಷ – 1,02,000 ರೂ.
* ಅಶೋಕ್ ಗೆಹ್ಲೋಟ್, ರಾಜಸ್ತಾನ ಮಾಜಿಸಿಎಂ – 1,02,400 ರೂ.
* ತೇಜಸ್ವಿ ಯಾದವ್, ಆರ್‍ಜೆಡಿ ನಾಯಕ – 1,02,400 ರೂ.
* ಕಮಲ್ ಹಾಸನ್, ಎಂಎನ್‍ಎಂ ಸಂಸ್ಥಾಪಕ – 1,02,040 ರೂ
* ಶರದ್ ಪವಾರ್, ಎನ್‍ಸಿಪಿ ಅಧ್ಯಕ್ಷ – 64,000 ರೂ.
* ಸೀತಾರಾಂ ಯೆಚೂರಿ, ಸಿಪಿಎಂ – 64,000 ರೂ.
* ಬಾಬುಲಾಲ್ ಮರಾಂಡಿ, ಜಾರ್ಖಂಡ್ ಮಾಜಿ ಸಿಎಂ – 45,952 ರೂ.
* ಹೇಮಂತ್ ಸೊರೇನ್, ಜಾರ್ಖಂಡ್ ಮಾಜಿ ಸಿಎಂ – 38,400 ರೂ.
* ಅಸಾದುದ್ದೀನಿ ಓವೈಸಿ, ಎಐಎಂಐಎಂ ಅಧ್ಯಕ್ಷ – 38,400 ರೂ.
* ಮಮತಾ ಬ್ಯಾನರ್ಜಿ ಖರ್ಚಿನ ಬಗ್ಗೆ ವಸತಿ ಇಲಾಖೆ ಮಾಹಿತಿ ಕೊಟ್ಟಿಲ್ಲ ( ಕುಮಾರಕೃಪಾ ಗೆಸ್ಟ್‍ಹೌಸ್‍ನಲ್ಲಿ ಉಳಿದುಕೊಂಡಿದ್ದರು.)
2013ರ ಮೇ 13 ರಂದು ನಡೆದ ಸಿದ್ದರಾಮಯ್ಯ ಪ್ರಮಾಣವಚನಕ್ಕೂ, ಈ ವರ್ಷದ ಮೇ 17 ರಂದು ನಡೆದ ಯಡಿಯೂರಪ್ಪ ಅವರ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದ ಅತಿಥಿಗಳ ವಸತಿಗೆ ನಯಾಪೈಸೆಯನ್ನೂ ಖರ್ಚು ಮಾಡಿಲ್ಲ ಎಂದು ವಸತಿ ಇಲಾಖೆ ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews