Connect with us

Cinema

ಗಾಯಕ ವಿಜಯ್‍ಪ್ರಕಾಶ್ ಬಳಿ ಬೇಡಿಕೆಯಿಟ್ಟು ಭಾವುಕರಾದ ಸಿಎಂ

Published

on

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ‘ಯುವ ದಸರಾ’ದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಗಾಯಕರಾದ ವಿಜಯ್ ಪ್ರಕಾಶ್ ಅವರ ಬಳಿ ವಿಶೇಷ ಬೇಡಿಕೆಯಿಟ್ಟು ಭಾವುಕರಾಗಿದ್ದಾರೆ.

ಯುವ ದಸರಾದಲ್ಲಿ ಗಾಯಕ ವಿಜಯ್ ಪ್ರಕಾಶ್ ಅವರ ರಸಮಂಜರಿ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ಅವರು ಸೂಪರ್ ಹಿಟ್ ಹಾಡುಗಳನ್ನು ಹಾಡಿ ಅಭಿಮಾನಿ ಹಾಗೂ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರು ಕೂಡ ಭಾಗಿಯಾಗಿದರು.

ಕುಮಾರಸ್ವಾಮಿ ಅವರು ಕಾರ್ಯಕ್ರಮದಲ್ಲಿ ವಿಜಯ್ ಅವರಿಗೆ ‘ಒಳಿತು ಮಾಡು ಮನುಸಾ, ನೀ ಇರೋದು ಮೂರು ದಿವಸ’ ಹಾಡನ್ನು ಹಾಡಲು ಒತ್ತಾಯಿಸಿದರು. ಸಿಎಂ ಒತ್ತಾಯಕ್ಕೆ ಮಣಿದು ವಿಜಯ್ ಸಿ. ಅಶ್ವಥ್ ಅವರ ಈ ಸೂಪರ್ ಹಿಟ್ ಹಾಡನ್ನು ಹಾಡಿ ಅವರನ್ನು ಸಂತೋಷಪಡಿಸಿದರು.

ಈ ಹಾಡು ಮುಗಿಯುತ್ತಿದ್ದಂತೆ ಕುಮಾರಸ್ವಾಮಿ ಅವರು ಮತ್ತೊಮ್ಮೆ ಈ ಹಾಡನ್ನು ಹಾಡುವಂತೆ ವಿಜಯ್ ಪ್ರಕಾಶ್ ಅವರ ಬಳಿ ಮನವಿ ಮಾಡಿಕೊಂಡರು. ವಿಜಯ್ ಪ್ರಕಾಶ್ ಕೂಡ ಕುಮಾರಸ್ವಾಮಿ ಅವರಿಗಾಗಿ ಈ ಹಾಡನ್ನು ಮತ್ತೊಮ್ಮೆ ಹಾಡಿದರು.

ವಿಜಯ್ ಪ್ರಕಾಶ್ ಈ ಹಾಡನ್ನು ಹಾಡುತ್ತಿದ್ದಂತೆ ಕುಮಾರಸ್ವಾಮಿ ಅವರು ಭಾವುಕರಾದರು. ಅಲ್ಲದೇ ಅವರ ಕಣ್ಣಿನ ಅಂಚಿನಲ್ಲಿ ಕಣ್ಣೀರು ಕೂಡ ಬಂತು. ಸದ್ಯ ಈ ಹಾಡು ಕುಮಾರಸ್ವಾಮಿ ಅವರ ನೆಚ್ಚಿನ ಹಾಡಾಗಿದ್ದು, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸ್ವತಃ ಅವರೇ ಈ ಹಾಡಿಗೆ ಬೇಡಿಕೆಯಿಟ್ಟು ಹಾಡಿಸುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *