ಬೀದರ್: ಇಂದು ಸಿಎಂ ಜಿಲ್ಲೆಯನ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮ ವಾಸ್ತವ್ಯ ಹೂಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಅವರಿಗೆ ಅದ್ಧೂರಿಗಾಗಿ ಸ್ವಾಗತ ಕೋರಲು ಆನೆಯನ್ನು ಕರೆತರಲಾಗಿತ್ತು. ಆದರೆ ಆನೆ ಹಾಕಿದ ಹೂವಿನ ಹಾರ ಎರಡು ಬಾರಿಯೂ ಸಿಎಂ ಕೊರಳಿಗೆ ಬೀಳಲಿಲ್ಲ.
ಸಿಎಂ ಅವರಿಗೆ ಹಾರ ಹಾಕಿಸಲೆಂದೇ ಜಿಲ್ಲಾಡಳಿತ ಕಲಬುರಗಿಯ ಕಡಗಂಚಿ ಮಠದ ಆನೆಯನ್ನು ಉಜಳಂಬ ಗ್ರಾಮಕ್ಕೆ ಕರೆತಂದಿದ್ದರು. ಇಂದು ಸಿಎಂ ಗ್ರಾಮಕ್ಕೆ ಹೋದಾಗ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಿಎಂ ಸ್ವಾಗತ ಕೋರಲು ಆನೆಯಿಂದ ಹೂವಿನ ಹಾರ ಹಾಕಿಸಲು ಗ್ರಾಮಸ್ಥರು ಮುಂದಾದರು. ಈ ಸಂದರ್ಭದಲ್ಲಿ ಆನೆ ಹಾರ ಹಾಕಿದ್ದು, ಈ ಹಾರ ಸಿಎಂ ಕೊರಳಿಗೆ ಬೀಳದೇ ನೆಲಕ್ಕೆ ಬಿದ್ದಿದೆ.
ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಆನೆಯಿಂದ ಹಾರ ಹಾಕಿಸುವಂತೆ ಅಲ್ಲಿದ್ದ ಜನ ಆಗ್ರಹಿಸಿದ್ದಾರೆ. ಆಗ ಒಲ್ಲದ ಮನಸ್ಸಿನಿಂದ ಸಿಎಂ ಹಾರ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆಗಲೂ ಆನೆ ಹಾಕಿದ ಹಾರ ಸಿಎಂ ಕೊರಳಿಗೆ ಬೀಳದೇ ಎತ್ತಿನ ಬಂಡಿಯ ಮೇಲೆ ಬಿದ್ದಿದೆ.
https://www.youtube.com/watch?v=Vz3pwT5YEWE