ಬೆಂಗಳೂರು: ಸಿಎಂ ಇಬ್ರಾಹಿಂ (CM Ibrahim) ಅವರ ಮಗನ ಚುನಾವಣೆಗೆ ನನ್ನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ ಎಂದು ಪರಿಷತ್ ಸದಸ್ಯ ಶರವಣ (T A Sharavana) ವಾಗ್ದಾಳಿ ನಡೆಸಿದ್ದಾರೆ.
ಎಂಎಲ್‌ಸಿ (MLC) ಮಾಡೋಕೆ ಶರವಣರಿಂದ ಕುಮಾರಸ್ವಾಮಿ ಹಣ ಪಡೆದಿಲ್ಲ ಅಂತ ಮಗನ ಮೇಲೆ ತಲೆ ಕೈ ಇಟ್ಟು ಆಣೆ ಮಾಡಿ ಎಂಬ ಇಬ್ರಾಹಿಂ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಬೇರೆ ಪಕ್ಷದಿಂದ ಬಂದವನಲ್ಲ. ಸಮಯಕ್ಕೆ ತಕ್ಕಂತೆ ಪಕ್ಷ ಬದಲಾವಣೆ ಮಾಡೋನೂ ನಾನಲ್ಲ. 25 ವರ್ಷಗಳಿಂದ ದೇವೇಗೌಡ, ಕುಮಾರಸ್ವಾಮಿ (HD Kumaraswamy) ಜೊತೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ. ನನ್ನ ರಕ್ತವೇ ಜೆಡಿಎಸ್ ಆಗಿದೆ. ಅಧಿಕಾರಕ್ಕಾಗಿ ಯಾವುದೇ ಪಕ್ಷಕ್ಕೆ ಹೋಗಲ್ಲ. ವಿರೋಧ ಪಕ್ಷ ನಾಯಕ ಮಾಡಿಲ್ಲ ಅಂತ ಹೀಗೆ ಮಾತನಾಡುತ್ತಿದ್ದಾರಾ? ಕಾಂಗ್ರೆಸ್‌ನಲ್ಲಿ (Congress) ಅಧಿಕಾರ ಕೊಡಲಿಲ್ಲ ಅಂತ ಜೆಡಿಎಸ್‌ಗೆ ಬಂದ್ರಿ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದಾಗ ಇಬ್ರಾಹಿಂ ಕೇಳಿಯೇ ಎಲ್ಲವನ್ನು ವರಿಷ್ಠರು ಮಾಡಿದ್ದರು. ದೇವೇಗೌಡರು ನನ್ನ ತಂದೆ ಸಮಾನ ಎಂದು ಹೇಳಿದ್ದಿರಿ. ಎಂಎಲ್‌ಸಿ ಸ್ಥಾನಕ್ಕೆ ನನ್ನ ಹೆಸರು ಘೋಷಣೆ ಮಾಡಿದ್ದು ಇಬ್ರಾಹಿಂ. ಈಗ ಯಾಕೆ ಹೀಗೆ ಮಾತನಾಡುತ್ತಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜಸ್ಥಾನ ವಿಧಾನಸಭೆ ಚುನಾವಣೆ – 7 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
Advertisement
Advertisement
ನಿಮ್ಮ ಮಗನಿಗೆ ಹುಮ್ನಾಬಾದ್‌ನಲ್ಲಿ ಟಿಕೆಟ್ ಕೊಟ್ಟಿದ್ದು ಪುತ್ರ ವ್ಯಾಮೋಹ ಅಲ್ಲವಾ? ಕುಮಾರಸ್ವಾಮಿ ಪಕ್ಷ ನಡೆಸೋಕೆ ನನ್ನಂತಹ ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಪಕ್ಷಕ್ಕೆ ತನು ಮನ, ಧನ ಸಹಾಯ ಮಾಡಿರುತ್ತೇವೆ. ಅದನ್ನು ಹಣ ಪಡೆದಿದ್ದಾರೆ ಅಂದರೆ ಹೇಗೆ? ಕುಮಾರಸ್ವಾಮಿ ಮನೆ ಕಟ್ಟೋಕೆ ಹಣ ಬಳಸಿಕೊಂಡಿಲ್ಲ. ಪಕ್ಷಕ್ಕಾಗಿ ಹಣ ಬಳಕೆ ಮಾಡಿದ್ದಾರೆ. ನಿಮ್ಮ ಮಗನ ಚುನಾವಣೆಗೆ ಸಹಾಯ ಮಾಡಿ ಅಂದಾಗ ನಾನು ನಿಮಗೆ ಆರ್ಥಿಕ ಸಹಾಯ ಮಾಡಿರಲಿಲ್ಲವಾ? ಪಕ್ಷ ಕಟ್ಟೋಕೆ ನಮ್ಮಂತಹವರಿಂದ ಕುಮಾರಸ್ವಾಮಿ ಪಡೆದಿದ್ದಾರೆ. ನಾವು ಪಕ್ಷ ಕಟ್ಟೋಕೆ ಕೈಲಾದ ಸೇವೆ ಮಾಡಿರುತ್ತೇವೆ. ಅದನ್ನು ಕುಮಾರಸ್ವಾಮಿ ಹಣ ತೆಗೆದುಕೊಂಡರು ಎನ್ನುತ್ತೀರಾ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಮಾತಾಡೋಕೆ ಯಾರಿಗೂ ಯೋಗ್ಯತೆ ಇಲ್ಲ: ನರೇಂದ್ರಸ್ವಾಮಿ
Advertisement
Advertisement
ಜೆಪಿ ಭವನ ಕಟ್ಟಿದಾಗ ಮೊದಲು 10 ಲಕ್ಷ ರೂ. ಚೆಕ್ ಕೊಟ್ಟಿದ್ದೇನೆ. ನಿಮ್ಮ ಮಗನ ಚುನಾವಣೆಗೆ ಹಣ ಕೊಟ್ಟಿಲ್ಲವಾ ನಾನು. ಈಗ ಕುಮಾರಸ್ವಾಮಿ ಮಗನ ಮೇಲೆ ಆಣೆ ಮಾಡಿ ಎನ್ನುತ್ತಿದ್ದೀರಿ. ಇದು ಸರಿಯಾದ ವರ್ತನೆ ಅಲ್ಲ. ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟು ಇವತ್ತು ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿದ್ದೀರಿ. ಅನೇಕ ವರ್ಷಗಳಿಂದ ಅಪ್ಪಾಜಿ ಕ್ಯಾಂಟೀನ್ ನಡೆಸುತ್ತಿದ್ದೇನೆ. ಪಕ್ಷದಿಂದ ಹೊರಗೆ ಹೋಗಿದ್ದೀರಿ. ನಿಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ ಎಂದರು. ಇದನ್ನೂ ಓದಿ: ಬಿಜೆಪಿಯವ್ರು ಹೇಳಿದ್ರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ದತ್ತ ಮಾಲೆನೂ ಹಾಕ್ತಾರೆ: ಚಲುವರಾಯಸ್ವಾಮಿ