ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧಿಕಾರ ಕೊಟ್ಟಿರೋದು ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟು ಶೇವಿಂಗ್ ಕೂತಂಗೆ ಆಗಿದೆ. ಮೋದಿ ಕತ್ತಿಯನ್ನು ಕುತ್ತಿಗೆಗೆ ಹಿಡಿತಾನೋ ಅಥವಾ ಗಡ್ಡಕ್ಕೆ ಹಿಡಿಯುತ್ತಾನೋ ಅಂತಾನೇ ಗೊತ್ತಾಗ್ತಾ ಇಲ್ಲ ಅಂತಾ ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಇಂದು ಗುಂಡ್ಲುಪೇಟೆಯಲ್ಲಿ ನಡೆದ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಇಬ್ರಾಹಿಂ, 500 ರೂ. ಹಾಗೂ 1000ರೂ. ನೋಟುಗಳನ್ನು ತೆಗೆದೇ ಬಿಟ್ಟ. ಜನಕ್ಕೆ ಒಂದು ಖುಷಿ. ಸವತಿ ಗಂಡ ಸತ್ತ ಅಂತಾ ಇವ್ಳು ಖುಷಿಯಾದ್ಳು. ಒರಿಜನಲ್ ಇವನೇ ಸತ್ತಾಂತ ಆಮೇಲೆ ಗೊತ್ತಾಯ್ತು. ಯಾವ ವ್ಯಾಪಾರ ನಡೀತಾ ಇಲ್ಲ. ಜಮೀನು ಖರೀದಿ ಇಲ್ಲ. ಸಬ್ ರಿಜಿಸ್ಟಾರ್ ಆಫೀಸ್‍ಗೆ ಜನಬರುತ್ತಿಲ್ಲ. ಲೇವಾದೇವಿ ಇಲ್ಲ. ದುಡ್ಡಿಲ್ಲದೇ ಜನ ಕಂಗಾಲಾಗಿದ್ರು. ಒಂದೊಂದು ತಿಂಗಳು ಸಾವಿರಾರು ಜನ ಬ್ಯಾಂಕ್ ಎದುರು ಲೈನಾಗಿ ನಿಲ್ತಿದ್ದರು ಅಂತಾ ಮೋದಿ ನೋಟ್ ಬ್ಯಾನ್ ವಿಚಾರದಲ್ಲಿ ವ್ಯಂಗ್ಯವಾಡಿದ್ರು.
Advertisement
ಮಂತ್ರಿ ಪಟ್ಟ ಕೊಟ್ಟಿಲ್ಲ ಅಂತಾ ರಾಜೀನಾಮೆ ಕೊಟ್ರು. ಇದು ಯಾವ ಪ್ರತಿಷ್ಠೆಗೆ? ಶೂನ್ಯ ಸಿಂಹಾಸನದವನು ನಾನು ಇಲ್ವ. ಹಂಗೆಲ್ಲಾ ನೋಡಕೋದ್ರೆ ನಿಮ್ಮ ಪೋಸ್ಟರ್‍ಗಳಲ್ಲಿ ನಮ್ಮ ಹೆಸರಿಲ್ಲ. ಇದೀಗ ನಾವು ಯಾಕ್ ಬಂದ್ವಿ ಇಲ್ಲಿಗೆ. ಎನಗಿಂತ ಕಿರಿಯನಿಲ್ಲ. ಹಿರಿಯರಿಗಿಂತ ನಾ ಮೇಲಿಲ್ಲ. ಸದಾ ಶರಣರ ಪಾದದ ಧೂಳಾಗಿ ದುಡಿಯಬೇಕು ಕೂಡಲಸಂಗದೇವ ಎಂದು ವಚನವನ್ನು ಉದಾಹರಿಸಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರಿಗೆ ಮಂತ್ರಿಯಾಗೋ ಕನಸು ಕಾಣುವ ಮೊದಲು ಸುತ್ತೂರು ಮಠದಲ್ಲಿ ಒಂದು ವರ್ಷ ಇದ್ದು ತರಬೇತಿ ತಗೋಳ್ತಿದ್ರೆ ಉತ್ತಮವಾಗುತ್ತಿತ್ತು ಅಂತಾ ಹೇಳಿ ಟಾಂಗ್ ನೀಡಿದ್ರು.
Advertisement
ಉಪಚುನಾವಣೆಗೆ ಪರಿಣಾಮ ಆಗಲ್ಲ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಪಂಚರಾಜ್ಯ ಫಲಿತಾಂಶದ ಪ್ರಭಾವ ಬೀರುವುದಿಲ್ಲ. ಯು.ಪಿಯಲ್ಲಿ ಮಳೆ ಬಂದರೆ ಕರ್ನಾಟಕದಲ್ಲಿ ಛತ್ರಿ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಮಳೆ ಬಂದರೆ ಮಾತ್ರ ಛತ್ರಿ ಹಿಡಿದುಕೊಳ್ಳಲು ಸಾಧ್ಯ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Advertisement
ಬಿಜೆಪಿ ಅವರು ಬರಿ ಸುಳ್ಳನ್ನೇ ಗುಸು ಗುಸು ಎನ್ನುತ್ತಾರೆ. ಅವರಿಗೆ ಆರ್‍ಎಸ್‍ಎಸ್ ಸುಳ್ಳು ಗುಸುಗುಟ್ಟುವ ಟ್ರೈನಿಂಗ್ ನೀಡಿದೆ. ನಾವು ಏನ್ ಕೆಲಸ ಮಾಡಿದ್ದೀವಿ ಎನ್ನುವುದನ್ನು 15 ರಂದು ಮಂಡಿಸುವ ಬಜೆಟ್ ನಲ್ಲಿ ನೋಡಿ. ಬಿಜೆಪಿ ಅವರು ಬರಿ ಸುಳ್ಳು ಮತ್ತು ಆರೋಪ ಮಾಡುತ್ತಾ ಓಡಾಡ್ತಾ ಇದ್ದಾರೆ. ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ಸಂಧ್ಯಾ ಸುರಕ್ಷಾ, ಸೈಕಲ್ ಕೊಟ್ಟಿದ್ದು ಅದನ್ನು ಬಿಟ್ಟರೆ ಸೀರೆ ವಿತರಣೆ ಮಾಡಿದ್ದು ಬಿಟ್ಟರೆ ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಅವರು ಮಾಡಿಲ್ಲ ಅಂತಾ ಸಿಎಂ ಬಿಜೆಪಿ ವಿರುದ್ಧ ಕಿಡಿಕಾರಿದ್ರು.
Advertisement
ಇದನ್ನೂ ಓದಿ: ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕೈ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ!