ಬೆಂಗಳೂರು: ಕಾಂಗ್ರೆಸ್ (Congress) ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ. ಕಾಂಗ್ರೆಸ್ ಮನೆ ಮನೆಗೂ ಜಗಳ ಹಚ್ಚಲು ಹೊರಟಿದೆ. ಕಾಂಗ್ರೆಸ್ ಗ್ಯಾರಂಟಿಯನ್ನು ನಂಬಬೇಡಿ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮನೆ ಒಡತಿಗೆ 2 ಸಾವಿರ ಕೊಡುತ್ತೇವೆ ಎಂದು ಹೇಳಿದ್ದಾರೆ. ಅತ್ತೆ-ಸೊಸೆ ಇರೋ ಮನೆ ಕಥೆ ಏನು? ಸೊಸೆಗೆ 2 ಸಾವಿರ ಕೊಟ್ಟರೆ ಅತ್ತೆಗೆ ಏನು ಕೊಡುತ್ತೀರಾ? ಅವರು ಹೊಡೆದಾಡಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾರ್ಮಿಕ ಇಲಾಖೆಯ ಎಡವಟ್ಟು; ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಕಾರ್ಮಿಕರು
ಕಾಂಗ್ರೆಸ್ ಮತ್ತು ಬಿಜೆಪಿಯವರು (BJP) ಅತಂತ್ರ ಎಂದು ಹೇಳುತ್ತಿದ್ದಾರೆ. ಮುಂಡೇವು ಚೆನ್ನಾಗಿ ಕಾಣಲಿ ಅಂತ ಮೇಕಪ್ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ಗೂ ಪೂರ್ಣ ಬಹುಮತ ಬರೋದು ಇಷ್ಟ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ. ಜೆಡಿಎಸ್ ಜನರ ಮನಸ್ಸಿನಲ್ಲಿದೆ. ಈ ಬಾರಿ ಅತಂತ್ರ ಸರ್ಕಾರ ಬರುವುದಿಲ್ಲ. ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ಮಾಡುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: JDS ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ, HDK ಸಿಎಂ ಆಗ್ತಾರೆ: ಇಬ್ರಾಹಿಂ
ಜನರಿಗಾಗಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ರೈತರ ಹೆಣ್ಣುಮಕ್ಕಳನ್ನು ಮದುವೆ ಆದರೆ 2 ಲಕ್ಷ ಕೊಡುತ್ತೇವೆ. ಎಕರೆಗೆ 10 ಸಾವಿರ ಬಿತ್ತನೆಗೆ ಕೊಡುತ್ತೇವೆ. 5 ವರ್ಷಗಳಲ್ಲಿ ನೀರಾವರಿ ಯೋಜನೆ ಮುಕ್ತಾಯ ಮಾಡುತ್ತೇವೆ. ಇದು ನಮಗೆ ರೈತರ ಬಗ್ಗೆ ಇರುವ ಕಾಳಜಿ ಎಂದರು. ಇದನ್ನೂ ಓದಿ: ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್
200 ಯುನಿಟ್ ವಿದ್ಯುತ್ ಎನ್ನುತ್ತಾರೆ. ಆದರೆ ನಾವು 3 ಫೇಸ್ ವಿದ್ಯುತ್ 24 ಗಂಟೆ ರೈತರಿಗೆ ಕೊಡುತ್ತೇವೆ. ರೈತರ ಪಂಪ್ ಸೆಟ್‌ಗೆ ಮೀಟರ್ ಇಲ್ಲ. ಇದು ಜೆಡಿಎಸ್ ಬದ್ಧತೆ. ಕಾಂಗ್ರೆಸ್ ಗ್ಯಾರಂಟಿ ನಂಬಬೇಡಿ ಎಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ (Guarantee Card) ಬಗ್ಗೆ ಟೀಕಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ಬ್ರಾಹ್ಮಣ ಮಾಹಾಸಂಘ ವಾಗ್ದಾಳಿ