ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ. ಈ ಬಾರಿ ಜೆಡಿಎಸ್ (JDS) ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಘೋಷಣೆ ಬಗ್ಗೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಚುನಾವಣೆಗೆ (Election) ಜೆಡಿಎಸ್ ಸಿದ್ಧವಾಗಿದೆ. ಈ ಬಾರಿ ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ. ಈ ಚುನಾವಣೆ ಆದ ಮೇಲೆ ಕುಮಾರಸ್ವಾಮಿ (HD Kumaraswamy) ವಿಧಾನಸೌಧದ ಮುಂದೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದರು.
Advertisement
Advertisement
ಅಭ್ಯರ್ಥಿಗಳು ರೆಡಿ ಇದ್ದಾರೆ. ಎರಡನೇ ಪಟ್ಟಿ ಆದಷ್ಟು ಬೇಗ ಘೋಷಣೆ ಮಾಡುತ್ತೇವೆ. ಹೈಕಮಾಂಡ್ ಇಲ್ಲೆ ಮನೆಯಲ್ಲಿ ಇದೆ. ಬೇಗ ಡಿಸೈಡ್ ಮಾಡ್ತೀವಿ ಎಂದರು. ಚುನಾವಣೆಗೆ ಕ್ಯಾಪ್ಟನ್ ಘೋಷಣೆ ಆಗಿದೆ. ಇನ್ನು ಫೀಲ್ಡರ್ ಸಿದ್ಧತೆ ಆಗಬೇಕು. ಕುಮಾರಸ್ವಾಮಿ ವಿಧಾನಸೌಧದ ಎದುರು ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡುತ್ತಾರೆ. ಬಿಜೆಪಿ (BJP), ಕಾಂಗ್ರೆಸ್‌ಗೆ (Congress) ಇದನ್ನು ಹೇಳುವ ಧೈರ್ಯ ಇಲ್ಲ. ಕಾಂಗ್ರೆಸ್‌ನಲ್ಲಿ 5 ಜನ ಸಿಎಂ ಸ್ಥಾನದಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಮೋದಿನೇ ಎಲ್ಲ. ನಮ್ಮಲ್ಲಿ ಒಬ್ಬರೇ ಕ್ಯಾಪ್ಟನ್. ಜನರ ಮನಸ್ಸಿನಲ್ಲಿ ನಾವು ಇದ್ದೇವೆ. ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.
Advertisement
ಸಿಎಂ ಬೊಮ್ಮಾಯಿ (Basavaraj Bommai) ವಿರುದ್ಧ ಕಿಡಿಕಾರಿದ ಅವರು, ಬೊಮ್ಮಾಯಿ ಅವರು ಮೀಸಲಾತಿ ಘೋಷಣೆ ಮಾಡಿದರು. ಈಗ ಅದು ಏನು ಆಯ್ತು. ಸಿಎಂ ಮೀಸಲಾತಿ ಘೋಷಣೆಯನ್ನು 2 ಕೈಯಿಂದ ನೆಕ್ಕಬೇಕು ಅಷ್ಟೆ. 23 ಕ್ಕೆ ಮೀಸಲಾತಿ ಕೊಟ್ರು ಈಗ ಏನ್ ಆಯ್ತು? ಸಿಎಂ ಬೊಮ್ಮಾಯಿ ನಿರ್ಧಾರ ನೋಡಿ ನನಗೆ ನೋವಾಗಿದೆ. ಎಸ್.ಆರ್. ಬೊಮ್ಮಾಯಿ ಮಗ ಅನ್ನೋದಕ್ಕೆ ನಮಗೆ ನೋವಿದೆ. ಬಿಜೆಪಿ ಅವರು ಈಗ ವಿಧವೆ ಆದರು. ಈಗ ಏನು ಮಾಡಲು ಆಗೊಲ್ಲ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ಬ್ರಾಹ್ಮಣ ಮಾಹಾಸಂಘ ವಾಗ್ದಾಳಿ
Advertisement
ಸರ್ಕಾರದವರು ಪೊಲೀಸರು, ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಡಿ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಅವಕಾಶ ಕೊಡಿ. ನಾವು ಈ ಚುನಾವಣೆಯಲ್ಲಿ ಮೋದಿ ಹೆಸರು, ಸೋನಿಯಾ ಗಾಂಧಿ ಹೆಸರು ಹೇಳುವುದಿಲ್ಲ. ಪಂಚರತ್ನದ ಬಗ್ಗೆ ಹೇಳಿ ಮತ ಕೇಳ್ತೀವಿ. ಮೈಸೂರು ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮ. ಇಡೀ ರಾಜ್ಯ ಕಾರ್ಯಕ್ರಮ ನೋಡಿದೆ. ಈ ಬಾರಿ ಜೆಡಿಎಸ್ ಪೂರ್ಣ ಬಹುಮತ ಪಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್