– ನಮ್ಮ ಬೆಂಬಲ ಇಂಡಿಯಾ ಒಕ್ಕೂಟಕ್ಕೆ; ದೇವೇಗೌಡರು ಮೈತ್ರಿ ನಿರ್ಧಾರ ಮಾಡಿಲ್ಲ
ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ. ಇದು ನಮ್ಮ ಮೊದಲ ನಿರ್ಧಾರ. ಬಿಜೆಪಿ ಜೊತೆ ಹೋಗಬೇಡಿ ಅಂತ ಹೆಚ್.ಡಿ.ದೇವೇಗೌಡರಿಗೆ ಹೇಳುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ತಿಳಿಸಿದರು.
Advertisement
ಬಿಜೆಪಿ ಜೊತೆ ಮೈತ್ರಿ (BJP-JDS Alliance) ವಿರೋಧಿಸಿ ಇಂದು (ಭಾನುವಾರ) ಬೆಂಬಲಿಗರ ಚಿಂಥನ-ಮಂಥನ ಸಭೆಯನ್ನ ಸಿ.ಎಂ ಇಬ್ರಾಹಿಂ ಕರೆದಿದ್ದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ಮೈತ್ರಿಗೆ ವಿರೋಧ ಘೋಷಣೆ ಮಾಡಿದರು. ಇದನ್ನೂ ಓದಿ: ಮದ್ಯದಂಗಡಿ ಲೈಸೆನ್ಸ್ ವಿವಾದ- ವೇದಿಕೆ ಮೇಲೆಯೇ ಶಿವಲಿಂಗೇಗೌಡ, ಸುರೇಶ್ ಕಿತ್ತಾಟ
Advertisement
Advertisement
ಈ ಕುರಿತು ಮಾತನಾಡಿರುವ ಅವರು, ಜೆಡಿಎಸ್ ಬಿಜೆಪಿ ಜೊತೆ ಹೋಗುವುದಿಲ್ಲ. ಇದು ನಮ್ಮ ಮೊದಲ ನಿರ್ಧಾರ. ದೇವೇಗೌಡರಿಗೆ ಸಭೆ ನಿರ್ಧಾರ ತಿಳಿಸುತ್ತೇವೆ. ನೀವು ಮೈತ್ರಿಗೆ ಒಪ್ಪಿಗೆ ಕೊಡಬಾರದು ಎಂದು ಮನವಿ ಮಾಡುತ್ತೇವೆ. ಬಿಜೆಪಿ ಜೊತೆ ಹೋಗಬೇಡಿ ಅಂತ ಹೇಳುತ್ತೇವೆ ಎಂದರು.
Advertisement
ನನ್ನದು ಒರಿಜಿನಲ್ ಜೆಡಿಎಸ್. ನಮ್ಮದು ಜಾತ್ಯತೀತ ಜೆಡಿಎಸ್. ನಮ್ಮ ಪಕ್ಷದ ನಿರ್ಧಾರ ಮೈತ್ರಿಗೆ ಒಪ್ಪಿಗೆ ಇಲ್ಲ. ಶಾಸಕರ ಜೊತೆ ಒನ್ ಟು ಮಾತಾಡ್ತೀನಿ. ಶಾಸಕರು ನನ್ನ ಜೊತೆ ಮಾತಾಡಿದ್ದಾರೆ. ಯಾರ್ ಯಾರು ಅಂತ ಹೇಳೋದಿಲ್ಲ. ಸಮಯ ಬಂದಾಗ ಯಾರು ಯಾರು ಬರ್ತಾರೆ ಅಂತ ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಐಟಿ ದಾಳಿಯಲ್ಲಿ SST ಟ್ಯಾಕ್ಸ್, ಸಂತೋಷ್ ಮನೆಯಲ್ಲಿ ಸಿಕ್ಕಿದ್ದು YST ಕಲೆಕ್ಷನ್: ಹೆಚ್‍ಡಿಕೆ ಹೊಸ ಬಾಂಬ್
ನಿಮ್ಮ ನಿಲುವು ಒಪ್ಪದೇ ಹೋದರೆ ಕುಮಾರಸ್ವಾಮಿರನ್ನ ಉಚ್ಚಾಟನೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚಾಟನೆಗೆ ಕಾಲ ಪಕ್ವ ಆಗಿಲ್ಲ. ನಾನೇ ಜೆಡಿಎಸ್ ಬಿಟ್ಟು ಹೋಗ್ತೀನಿ ಅಂತಾರೆ, ಏನ್ ಮಾಡಲಿ. ನಾನು ಜೆಡಿಎಸ್ ಬಿಟ್ಟು ಹೋಗೊಲ್ಲ. ನಮ್ಮ ಮನೆ ಬಿಟ್ಟು ನಾನು ಯಾಕೆ ಹೋಗಲಿ. ನಮ್ಮ ನಿಲುವು ದೇವೇಗೌಡರಿಗೆ ತಿಳಿಸ್ತೀವಿ. ಅವರು ಒಪ್ಪದೇ ಹೋದರೆ ಏನ್ ಮಾಡ್ತೀವಿ ಅಂತ ಕಾದುನೋಡಿ. ಕುಮಾರಸ್ವಾಮಿ ಉಚ್ಚಾಟನೆ ಮಾಡ್ತೀರಾ ಅನ್ನೋ ಪ್ರಶ್ನೆಗೆ ವೇಯ್ಟ್ ಅಂಡ್ ಸಿ ಎಂದು ಪ್ರತಿಕ್ರಿಯಿಸಿದರು.
ಎನ್‌ಡಿಎ ಸೋಲಿಸಬೇಕು. ಹೀಗಾಗಿ ಐಎನ್‌ಡಿಐಎಗೆ ಬೆಂಬಲ ಕೊಡಬೇಕು ಅಂತ ನಿರ್ಣಯ ಆಗಿದೆ. ಮೈತ್ರಿ ಬಗ್ಗೆ ನಿಲುವು ತಿಳಿಸೋಕೆ ಕೋರ್ ಕಮಿಟಿ ಮಾಡ್ತೀನಿ. ಅದು ಮುಂದಿನ ತೀರ್ಮಾನ ಮಾಡುತ್ತೆ. ನಾನು ದೇವೇಗೌಡರನ್ನ ಭೇಟಿ ಆಗ್ತೀನಿ. ಯಾವಾಗ ಅಂತ ಹೇಳಿ ಹೋಗ್ತೀನಿ. ಸದ್ಯ ಒರಿಜಿನಲ್ ಜೆಡಿಎಸ್ ಇಂಡಿಯಾಗೆ ಬೆಂಬಲ ಕೊಡುತ್ತೆ ಎಂದು ತಮ್ಮ ನಿಲುವು ತಿಳಿಸಿದರು. ಇದನ್ನೂ ಓದಿ: ಐಟಿ, ಇಡಿ, ಸಿಬಿಐ ಎಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿವೆ; ಅವರು ಆಡಿದ್ದೇ ಆಟ: ಸಂತೋಷ್ ಲಾಡ್
ಸಭೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಾಟೇಲ್, ಜೆಡಿಎಸ್‌ಗೆ ರಾಜೀನಾಮೆ ನೀಡಿರುವ ಸೈಯದ್ ಶಫಿಉಲ್ಲಾ, ಹಾವೇರಿ ಜಿಲ್ಲೆಯ ಜೆಡಿಎಸ್ ಮುಖಂಡ ಮನೋಹರ್ ತಹಶಿಲ್ದಾರ್ ಸೇರಿ ಹಲವು ಮುಸ್ಲಿಂ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
Web Stories