ಬೆಂಗಳೂರು: 17 ಜನರನ್ನು ಸಿದ್ದರಾಮಯ್ಯ ಮುಂಬೈಗೆ ಕಳುಹಿಸಿ ಮಂಚದ ಮೇಲೆ ಮಲಗಿಸಿ ವೀಡಿಯೋ ಮಾಡ್ಸಿ ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
Advertisement
ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತು ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, 2023ಕ್ಕೆ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೌಂಡೇಶನ್ ಹಾಕಿದ್ದಾರೆ. ಇವತ್ತು ಬರೆದಿಟ್ಟು ಕೊಳ್ಳಿ. 2023 ರಲ್ಲಿ ಕುಮಾರಸ್ವಾಮಿ ಸಿಎಂ ಆಗೋದು ತಡೆಯಲು ಆಗೊಲ್ಲ. ಬಿಜೆಪಿಗೆ ಗೊತ್ತಾಗಿದೆ. ಜೆಡಿಎಸ್ 1, ಬಿಜೆಪಿ 2, ಕಾಂಗ್ರೆಸ್ 3 ಅಂತ ಗೊತ್ತಾಗಿದೆ. ಬಿಜೆಪಿ ಅವರು ಭಾರೀ ಡೀಲ್ ಮಾಡಿದ್ರು. ಸಿದ್ದರಾಮಯ್ಯ ಯಡಿಯೂರಪ್ಪನ ಜೊತೆಗೆ ಏರ್‌ಪೋರ್ಟ್‌ನಲ್ಲಿ ಡೀಲ್ ಮಾಡ್ಕೊಂಡ್ರು. ಸಿ.ಟಿ ರವಿ ಅದಕ್ಕೆ ಕಾಂಗ್ರೆಸ್ ಆಫೀಸ್‍ಗೆ ಹೋಗಿ ಅಭಿನಂದನೆ ಸಲ್ಲಿಸಿದ್ದು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಗೆ ಆಯ್ಕೆ ಹಿನ್ನೆಲೆ ಮಂತ್ರಾಲಯ ರಾಯರ ಮಠಕ್ಕೆ ನಟ ಜಗ್ಗೇಶ್ ಭೇಟಿ
Advertisement
Advertisement
ಒಂದು ವೋಟ್ ಕಾಂಗ್ರೆಸ್‍ಗೆ ಮತ್ತೊಂದು ವೋಟ್ ಬಿಜೆಪಿಗೆ ಹಾಕಿಸಿದ್ದಾರೆ. ಅದನ್ನು ಹಾಕಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್. ಜೆಡಿಎಸ್ ಸೋಲಿಸೋಕೆ ಬಿಜೆಪಿ, ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡಿದೆ. ಸೋನಿಯಾ ಗಾಂಧಿಗೆ ಹೇಳ್ತೀನಿ. ಪಿಸಿಸಿ ಅಧ್ಯಕ್ಷರೇ ಬಿಜೆಪಿಗೆ ಮತ ಹಾಕಿಸಿದ್ದಾರೆ. ವಿರೋಧ ಪಕ್ಷದ ನಾಯಕ ಬಿಜೆಪಿಗೆ ಮತ ಹಾಕಿಸಿದ್ದಾರೆ. ನಿಮಗೆ ತಾಕತ್ ಇದ್ದರೆ ಕ್ರಮ ತೆಗೆದುಕೊಳ್ಳಿ. ತಾಕತ್ ಇದೆಯಾ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ತಾಕತ್ ಇದೆಯಾ? ಕೆಪಿಸಿಸಿ ಅಧ್ಯಕ್ಷರನ್ನು ವಜಾ ಮಾಡಿ, ಸಿದ್ದರಾಮಯ್ಯರನ್ನು ಕೆಳಗೆ ಇಳಿಸಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಕೋವಿಡ್ ಸಮಸ್ಯೆ – ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
Advertisement
ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ, ಜನರಲ್ಲಿ ಆಕ್ರೋಶ ಇದೆ. ಇವರು ಬಿಬಿಎಂಪಿ ಚುನಾವಣೆ ಮಾಡಲ್ಲ ಗೊತ್ತಿದೆ. ಗುಬ್ಬಿ ಶ್ರೀನಿವಾಸ್ ಹೆಚ್‍ಡಿಕೆ ಬಗ್ಗೆ ಮಾತನಾಡಿದ್ದಾನೆ ಅಂತ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾಯಿ ಮನ್ಯುಷ್ಯನಿಗೆ ಕಚ್ಚುತ್ತದೆ ಹೊರತು ಮನುಷ್ಯ ನಾಯಿಗೆ ಕಚ್ಚುವುದಿಲ್ಲ ಎಂದು ಟಾಂಗ್ ನೀಡಿದರು.