ಮೈಸೂರು: ಬಿಜೆಪಿ ಸರ್ಕಾರಕ್ಕೆ 9 ತಿಂಗಳಷ್ಟು ಆಯಸ್ಸು ಇದೆ. 9 ತಿಂಗಳ ಬಳಿಕ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ 9 ತಿಂಗಳಷ್ಟು ಆಯಸ್ಸು ಇದೆ. 9 ತಿಂಗಳ ಬಳಿಕ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಪರಿಷತ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ದೇವೇಗೌಡರು, ನಾನು, ಕುಮಾರಸ್ವಾಮಿ ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದೇವೆ. ನಾನು ಯಾವುದೇ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಬಡಿಸುವ ಸ್ಥಾನದಲ್ಲಿದ್ದೇನೆ. ಕಟ್ಟಡವೇ ನನ್ನದು, ಹೀಗಿರುವಾಗ ಅದರಲ್ಲಿರುವ ರೂಂನ್ನು ನಾನು ಯಾಕೆ ಕೇಳಲಿ. ಪಕ್ಷದ ಅಧ್ಯಕ್ಷನಾಗಿ ಕೊಡುವ ಕೆಲಸವಷ್ಟೇ ನನ್ನದು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಲಾ ಬಸ್ ಹರಿದು ಬಾಲಕಿ ಸಾವು
Advertisement
Advertisement
ಮಳಲಿ ಮಸೀದಿ ಬಗ್ಗೆ ಅಷ್ಟಮಂಗಲ ಪ್ರಶ್ನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲು ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಾ ಅಂತ ಪ್ರಶ್ನೆ ಹಾಕಿ. ರಾಜ್ಯದಲ್ಲಿ ಏನಾಗುತ್ತದೆ, ಮೋದಿ ಏನಾಗುತ್ತಾರೆ ಅಂತ ಪ್ರಶ್ನೆ ಹಾಕಿ. ಬಸವಣ್ಣನ ನಾಡಿನಲ್ಲಿ ಇದೆಲ್ಲದಕ್ಕೂ ಆಸ್ಪದ ಇಲ್ಲ. ಇದು ಈ ಹುಚ್ಚು ಮುಂಡೆದು ಪ್ರತಾಪ್ ಸಿಂಹನಿಗೆ ಗೊತ್ತಿಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಿದ ಹಾಗಾಗಿದೆ. ಸಿದ್ದರಾಮಯ್ಯನ ತಪ್ಪಿನಿಂದ ಎರಡು ಬಾರಿ ಅವರು ಎಂಪಿ ಆಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಶಾಸನ, ಸಮಾಧಿ ಇದೆ. ಅದನ್ನು ಕೃಷ್ಣರಾಜ ಒಡೆಯರ್ ಕಾಪಾಡಿಕೊಂಡು ಬಂದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ
Advertisement
Advertisement
ಬಿಜೆಪಿ ಸೋಲಿಸುವುದಕ್ಕೆ ಜೆಡಿಎಸ್‍ಗೆ ಆಗುವುದಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ರಾಜ್ಯಕ್ಕೆ ಬಿಜೆಪಿಯನ್ನ ತಂದವರು ಯಾರು? ಯಡಿಯೂರಪ್ಪನ ಸಿಎಂ ಮಾಡಿದವರು ಯಾರು? ಈಗ ನಮ್ಮ ಶಕ್ತಿ ಏನು ಅಂತ ಸಿದ್ದರಾಮಯ್ಯಗೆ ಗೊತ್ತಾಗುತ್ತಿದೆ. ನಮ್ಮ ಶಕ್ತಿ ಜಲಧಾರೆಯಾಗಿ ಪರಿವರ್ತನೆಯಾಗಿದೆ. ನಮ್ಮನ್ನು ಬಿಜೆಪಿಯ ಬಿ ಟೀಂ ಅಂತ ಹೇಳುತ್ತಿದ್ದರು. ಬೆಂಗಳೂರಿನಲ್ಲಿ ಲಕ್ಷಾಂತರ ಜನ ಸೇರಿ ಜಲಧಾರೆ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಹಾಗಾಗಿ ನಾವೂ ಕೂಡಾ ಕಾಂಗ್ರೆಸ್ ಬಗ್ಗೆ ಮಾತನಾಡಲ್ಲ. ರಾಜ್ಯಾದ್ಯಂತ ಜೆಡಿಎಸ್ ಸಂಘಟನೆ ಮಾಡುತ್ತಿದ್ದೇವೆ. ಹೈಕಮಾಂಡ್ ನಮ್ಮ ಮಾತು ಕೇಳುತ್ತಿಲ್ಲ ಅಂತ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ. ಹಿಂದೂ ಸಂಘಟನೆಗಳ ಅಭಿಯಾನಗಳ ಬಗ್ಗೆ ಮಾತನಾಡಿದ್ದು ಯಾರು? ಡಿ.ಕೆ.ಶಿವಕುಮಾರ್ ಮಾತನಾಡಿದ್ರಾ ಎಂದು ಪ್ರಶ್ನಿಸಿದ್ದಾರೆ.