ಬಾಗಲಕೋಟೆ: ಶಾಸಕ ಸಿಎಂ ಇಬ್ರಾಹಿಂ ನಮ್ಮ ಪಕ್ಷದವನಲ್ಲ ಎಂದು ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ಹೆಬ್ಬಾಳ, ಶಿವಾಜಿನಗರ ಕ್ಷೇತ್ರಕ್ಕೆ ರೋಶನ್ ಬೇಗ್ ಪುತ್ರನನ್ನು ಕರೆ ತರಲು ಸಿಎಂ ಇಬ್ರಾಹಿಂ ಫ್ಲ್ಯಾನ್ ವಿಚಾರವಾಗಿ ಉತ್ತರಿಸಿದ ಅವರು, ಸಿಎಂ ಇಬ್ರಾಹಿಂ ನಮ್ಮ ಪಕ್ಷದವನಲ್ಲ. ರೋಷನ್ ಬೇಗ್ ನಮ್ಮ ಪಾರ್ಟಿಯಲ್ಲಿ ಇಲ್ಲ. ಹೀಗಾಗಿ ಅವರ ಬಗ್ಗೆ ಮಾತಾಡಿ ಏನು ಪ್ರಯೋಜನ? ಮತ್ತೆ ನಾನೇಕೆ ಅವರ ಬಗ್ಗೆ ಕಾಮೆಂಟ್ ಮಾಡಲಿ. ಅವರು ಎಲ್ಲೆಯಾದ್ರೂ ನಿಂತುಕೊಳ್ಳಲಿ. ಜನ ತೀರ್ಮಾನ ಮಾಡೋದು ಎಂದು ನೇರವಾಗಿ ನುಡಿದರು. ಇದನ್ನೂ ಓದಿ: ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ? – ಚಂದ್ರು ಕೊಲೆ ದಿನ ನಡೆದಿದ್ದು ಏನು?
ಸಿದ್ದು ಅಲ್ ಖೈದಾ ಮುಖ್ಯಸ್ಥನಾ? ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರ ಬಗ್ಗೆ ಹೇಳಲ್ಲ ಅಂದ್ರೂ ಯಾಕೆ ಪ್ರಶ್ನೆ ಮಾಡ್ತಿರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಕ್ರೈಂ ಸಿಟಿ ಆಗ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನೋಡಿಲ್ಲ ನೋಡಿ ಹೇಳ್ತಿನಿ ಎಂದು ಸಿಟ್ಟಿನಿಂದ ಉತ್ತರಿಸಿದರು. ಇದನ್ನೂ ಓದಿ: 2 ಲಕ್ಷ ದೋಚಲು ಬಂದು 2 ಕೋಟಿ ಕಳ್ಳತನ – ಓನರ್ ಮನೆಗೆ ಐಟಿ, ಇಡಿ, ಎಂಟ್ರಿ ಸಾಧ್ಯತೆ