– ನೊಂದವರ ಬದುಕಿಗೊಂದು ಸಾಂತ್ವನದ ಸ್ಪರ್ಶ
ಬೆಂಗಳೂರು: ಸಿಎಂ ಎಚ್.ಡಿ ಕುಮಾರಸ್ವಾಮಿ ಶನಿವಾರ ಮಧ್ಯರಾತ್ರಿವರೆಗೂ ಜನರ ದೂರು ದುಮ್ಮಾನಗಳಿಗೆ ಕಿವಿಯಾದರು. ಅಂಗವಿಕಲರು, ವೃದ್ಧರು, ಮಹಿಳೆಯರು, ಮಕ್ಕಳು, ಅಂಧರು, ಬಾಣಂತಿಯರು ಹೀಗೆ ನೂರಾರು ದುಃಖಿತರ ಕಣ್ಣೀರ ಕಥೆಗಳಿಗೆ ಮುಖ್ಯಮಂತ್ರಿ ಗೃಹ ಚೇರಿ ಕೃಷ್ಣಾ ಸಾಕ್ಷಿಯಾಯಿತು.
ನಿನ್ನೆ ಮಧ್ಯಾಹ್ನ 12.15ಕ್ಕೆ ಆರಂಭವಾದ ಸಿಎಂ ಕುಮಾರಸ್ವಾಮಿ ಅವರ ಜನತಾದರ್ಶನ ತಡರಾತ್ರಿ 11.30ರವರೆಗೂ ನಡೀತು. ಕರುಳು ಕಿತ್ತು ಬರುವಂತಹ ನೋವುಗಳ ಮಹಾಪೂರದಲ್ಲಿ ಜನತಾದರ್ಶನ ಮಿಂದು ಹೋಯಿತು. ನಿನ್ನೆ ಸುಮಾರು 1600 ಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಖುದ್ದು ಮಾತನಾಡಿ, ಪರಿಹಾರ ಒದಗಿಸಲು ನಿರ್ದೇಶನ ನೀಡಿದರು.
Advertisement
Advertisement
ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡರು. 12 ಗಂಟೆಗಳ ನಂತರ ಸಿಎಂ ಕುಮಾರಸ್ವಾಮಿ ಮಾತನಾಡಿದ್ರು. ನಗರದಲ್ಲಿದ್ದಾಗ ಶನಿವಾರದಂದು ಜನರ ಸಮಸ್ಯೆ ವಿಚಾರಿಸುತ್ತೇನೆ. ಇವತ್ತು ಅನೇಕ ಸಮಸ್ಯೆ ಕುಂದು ಕೊರತೆ ಹೇಳಿಕೊಂಡಿದ್ದಾರೆ. ಸ್ಥಳದಲ್ಲೇ ಶೇಕಡಾ 50-60 ರಷ್ಟು ಸಮಸ್ಯೆ ನಿವಾರಿಸಿದ್ದೇನೆ. ಈ ಸಮಸ್ಯೆಗಳು ಮತ್ತೆ ಬಂದ್ರೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv