ಮಡಿಕೇರಿ: ಕೊಡಗು ಜಿಲ್ಲೆಗೆ ಗುರುವಾರ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ದಾರಿ ಸುಗಮಕ್ಕಾಗಿ ಹಲವು ಮರಗಳಿಗೆ ಕೊಡಲಿ ಏಟು ಬಿದ್ದಿದೆ.
ಮುಖ್ಯಮಂತ್ರಿಗಳು ಗುರುವಾರ ಮತ್ತು ಶುಕ್ರವಾರ ಕೊಡಗು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ವೇಳೆ ಹಾರಂಗಿ ಜಲಾಶಯ, ಭಾಗಮಂಡಲ ಹಾಗೂ ತಲಕಾವೇರಿಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ. ಈ ವೇಳೆ ಸಿಎಂ ಸಂಚರಿಸುವ ಮಾರ್ಗದಲ್ಲಿ ಬೀಳುವ ಮತ್ತು ಅಪಾಯ ಇರುವಂತಹ ಮರಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಆದೇಶಿಸಿದ್ದಾರೆ.
Advertisement
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, ಅರಣ್ಯ ಇಲಾಖೆ ಅಧಿಕಾರಿಗಳು ಬೀಳುವ ಅಪಾಯದಲ್ಲಿರುವ ಮರಗಳ ಜೊತೆ ಚೆನ್ನಾಗಿರುವ ಮರಗಳಿಗೂ ಕೊಡಲಿ ಏಟು ಹಾಕಿದ್ದಾರೆ. ಮರಗಳ ಜೊತೆಗೆ ಸಣ್ಣ ಪುಟ್ಟ ಗಿಡಗಳಿಗೆ ಕೊಡಲಿ ಏಟು ಬದ್ದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇತ್ತ ಮರ ಕತ್ತರಿಸುವಂತೆ ಜಿಲ್ಲಾಧಿಕಾರಿ ಮಾಡಿರುವ ಆದೇಶವನ್ನು ಡಿಸಿ ಕಚೇರಿ ನಿರಾಕರಿಸಿದೆ. ಆದರೆ ಜಿಲ್ಲಾಧಿಕಾರಿಗಳು ಹೊರಡಿಸಿರುವ ಅದೇಶದ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
Advertisement