ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶ ರೈತರಿಗೆ ನೀರಿನ ಕೊರತೆ ಮಾಡಲ್ಲ. ರೈತರ ಅಗತ್ಯಕ್ಕೆ ಅನುಗುಣವಾಗಿ ನೀರು ಬಿಡಬೇಕು ಅಂತ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಎಚ್ ಡಿ ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದ್ದಾರೆ.
ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ರೈತರ ಬೆಳೆಗೆ ನೀರು ಬಿಡಬೇಕು. ರೈತರ ವ್ಯವಸಾಯಕ್ಕೆ ಬೇಕಾದಂತೆ ನೀರು ಬಿಡುವ ಮೂಲಕ ನೀರು ಬಿಡುಗಡೆಗೆ ಕೊರತೆ ಮಾಡಬಾರದು ಅಂತ ಹೇಳಿದ್ದಾರೆ. ಇದನ್ನೂ ಓದಿ:
ತಮಿಳುನಾಡಿನ ಕೋಟಾದ ನೀರು ಈಗಾಗ್ಲೇ ಹರಿದು ಹೋಗಿದೆ. ಮತ್ತೆ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ, ಅಗತ್ಯವೂ ಇಲ್ಲ. ನಮ್ಮ ರೈತರ ಹಿತ ಕಾಪಾಡಲು ಬೆಳೆಗಳಿಗೆ ನೀರು ಕೊಡಿ ಅಂತ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್‍ಗೆ ಸಿಎಂ ಸೂಚಿಸಿದ್ದಾರೆ.
ರಾಮನಗರ ತಾಲೂಕಿನ ಪೇಟೆಕುರುಬರಹಳ್ಳಿ ಗ್ರಾಮದಲ್ಲಿ ಕಾವೇರಿ ನದಿಯಿಂದ ಮಂಡ್ಯಭಾಗಕ್ಕೆ ನೀರು ಬಿಡುವ ವಿಚಾರದ ಕುರಿತು ಮಾತನಾಡಿದ ಎಚ್‍ಡಿಕೆ, ಮೊದಲು ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂದು ಬೆಳಗ್ಗೆ ಮಾಧ್ಯಮಗಳ ಮೂಲಕ ಸುದ್ದಿ ನೋಡಿದೆ. ಬೆಳೆ ಒಣಗುವ ವಿಚಾರ ನೋಡಿದ್ದೇನೆ. ತಕ್ಷಣ ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ತಮಿಳುನಾಡಿಗೆ ಈ ತಿಂಗಳು ಹರಿಸಬೇಕಾದ ನೀರು ಹರಿಸಲಾಗಿದೆ. ನಮ್ಮ ರೈತರನ್ನ ಉಳಿಸಬೇಕು ನಾನು. ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶದಂತೆ ನೀರು ಹರಿಸಲಾಗಿದೆ. ಏನೇ ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆ ಬಂದರೂ ನಾನು ಜವಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದು, ಮೊದಲು ನೀರು ಬಿಡಲು ಸೂಚಿಸಿದ್ದೇನೆ. ಹೀಗಾಗಿ ಮಂಡ್ಯ ಭಾಗದಲ್ಲಿ ಕಬ್ಬು ಬೆಳೆಗಾರರಿಗೆ ತಕ್ಷಣ ನೀರು ಬಿಡಲಿದ್ದಾರೆ ಅಂತ ಸ್ಪಷ್ಟಪಡಿಸಿದ್ದಾರೆ.