ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್ ಐಟಿ ತನಿಖೆಗೆ ಪ್ರಕ್ರಿಯೆ ಶುರು ಮಾಡಿದೆ.
ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಯಾರನ್ನ ಎಸ್ ಐಟಿ ಮುಖ್ಯಸ್ಥರನ್ನಾಗಿ ಮಾಡಬೇಕು ಅನ್ನೋ ಚರ್ಚೆ ಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು, ಅಲೋಕ್ ಕುಮಾರ್ ಅವರನ್ನೇ ಎಸ್ ಐಟಿಗೆ ಮುಖ್ಯಸ್ಥರನ್ನಾಗಿ ಮಾಡಲು ಕುಮಾರಸ್ವಾಮಿ ಒಲವು ತೋರಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
Advertisement
Advertisement
ಪ್ರಕರಣ ಸಂಬಂಧ ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡಲು ಸಾಧ್ಯವೇ ಅನ್ನೋದರ ಬಗ್ಗೆಯೂ ಚರ್ಚೆಯಾಗುತ್ತಿದೆ ಎನ್ನಲಾಗುತ್ತಿದ್ದು, ಅಧಿವೇಶನದಲ್ಲಿ ಮಾತನಾಡಿರೋ ಆಡಿಯೋವನ್ನೇ ವಾಯ್ಸ್ ಟೆಸ್ಟ್ ಗೆ ಪಡೆಯೋ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಈಗಾಗಲೇ ರಾಜ್ಯ ಅಡ್ವೊಕೇಟ್ ಜನರಲ್ ಜೊತೆ ಒಂದು ಸುತ್ತು ಮಾತಾನಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ತನಿಖೆಯಿಂದ ಓಡಿ ಹೋಗುತ್ತಿಲ್ಲ – ಕೊನೆಗೂ ಮೌನ ಮುರಿದ ಬಿಎಸ್‍ವೈ
Advertisement
ಒಂದು ವೇಳೆ ಬಂಧಿಸಿದ್ರೆ ಮುಂದೇನಾಗಬಹುದು ಅನ್ನೋ ಚರ್ಚೆಯಲ್ಲಿ ತೊಡಗಿರೋ ಕುಮಾರಸ್ವಾಮಿ, ಕೇಂದ್ರದಲ್ಲಿ ರಾಜಿಕೀಯ ನಾಯಕರ ವಿರುದ್ಧ ಮೋದಿ ಸೇಡು ತೀರಿಸಿಕೊಳ್ಳಬೇಕಾದ್ರೆ ನಾವ್ಯಾಕೆ ಸುಮ್ಮನಿರಬೇಕು. ನಮ್ಮ ಶಕ್ತಿಯನ್ನು ತೋರಿಸೋಣ ಅನ್ನೋ ಮನೋದಾಟಿಯಲ್ಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಪರೇಷನ್ ಆಡಿಯೋ ಪ್ರಕರಣ – ಎಸ್‍ಐಟಿ ತನಿಖೆ ವಹಿಸಿಕೊಂಡರೆ ತನಿಖೆ ಹೇಗೆ ನಡೆಯುತ್ತೆ?
Advertisement
ಯಡಿಯೂರಪ್ಪ ಅವರನ್ನು ಬಂಧಿಸಿದ್ರೆ ಆಪರೇಷನ್ ಕಮಲಕ್ಕೆ ಬ್ರೇಕ್ ಬೀಳಲಿದೆ. ಹೀಗಾಗಿ ಮುಂದೆ ಯಾವ ಶಾಸಕರು ಕೂಡ ಬಿಜೆಪಿ ಜೊತೆ ಹೋಗಲು ಇಷ್ಟಪಡುವುದಿಲ್ಲ. ಯಡಿಯೂರಪ್ಪ ಬಂಧನವಾದ್ರೆ ಅವರೂ ಸಹ ಮಾನಸಿಕವಾಗಿ ಕುಗ್ಗಿ ಹೋಗಲಿದ್ದಾರೆ. ಇದರಿಂದ ಅವರು ಸಹ ಆಪರೇಷನ್ ಕಮಲಕ್ಕೆ ಮತ್ತೆ ಕೈ ಹಾಕೋ ಸಾಧ್ಯತೆ ಕಡಿಮೆ ಇದೆ. ಇದರ ಜೊತೆಗೆ ಮಾನಸಿಕವಾಗಿ ನೊಂದ ಯಡಿಯೂರಪ್ಪ ಎಂ.ಪಿ ಎಲೆಕ್ಷನ್ ನಲ್ಲೂ ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಈ ಎಲ್ಲಾ ಬೆಳವಣಿಗೆಗಳಿಂದ ದೋಸ್ತಿ ಸರ್ಕಾರಕ್ಕೆ ಅನುಕೂಲವಾಗಲಿದೆ. ಈ ಮೂಲಕ 5 ವರ್ಷ ಸರ್ಕಾರ ಸುಭದ್ರವಾಗಲಿದೆ ಅಂತ ಸಿಎಂ ತಮ್ಮ ಆಪ್ತರ ಬಳಿ ಚರ್ಚೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv