ಹಾವೇರಿ: ಸ್ಟಿಂಗ್ ಆಪರೇಷನ್ನಿಂದ (Sting Operation) ತಪ್ಪಿಸಿಕೊಳ್ಳಲು ಸಿಎಂ (DK Shivakumar) ಕಿತ್ತೂರಿಗೆ ಓಡಿ ಬಂದು ಕುಳಿತಿದ್ದಾರೆ. ಮುಖ್ಯಮಂತ್ರಿ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್ (B C Patil) ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತಗಾರ, ಹಿಂದುಳಿದವರ ಧ್ವನಿ. ʻಮೈನಸ್ ಸಿದ್ದರಾಮಯ್ಯ ಕಾಂಗ್ರೆಸ್ ಇಸ್ ಬಿಗ್ ಝೀರೋʼ. ಸ್ಟಿಂಗ್ ಆಪರೇಷನ್ ಮೂಲಕ ಸಿದ್ದರಾಮಯ್ಯಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದರು.
ಸಿದ್ದರಾಮಯ್ಯಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ರೈತರ ಬಗ್ಗೆ ಮುಖ್ಯಮಂತ್ರಿ ಅವರು ಒಂದು ದಿನವೂ ಬಾಯಿ ಬಿಟ್ಟಿಲ್ಲ. ಸ್ಟಿಂಗ್ ಆಪರೇಷನ್ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ತಂತ್ರವಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಫ್ರಾನ್ಸ್ನಲ್ಲಿ ಧಗಧಗ; ಭುಗಿಲೆದ್ದ ಹಿಂಸಾಚಾರ – 5 ಲಕ್ಷಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟನೆ
ಸ್ಟಿಂಗ್ ಆಪರೇಷನ್ ಪಿತಾಮಹ ಡಿಕೆಶಿ ಅಂತ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಹೇಳಿಕೆಗೆ ನಾವು ಧ್ವನಿಗೂಡಿಸುತ್ತೇವೆ. ಅದರಲ್ಲಿ ಸತ್ಯವಿದೆ. ಮುಖ್ಯಮಂತ್ರಿಯವರ ಉದ್ಯೋಗವೇ ಸ್ಟಿಂಗ್ ಆಪರೇಷನ್ ಮಾಡೋದು. ಸ್ಟಿಂಗ್ ಆಪರೇಷನ್ ಬಿಟ್ಟು ಜನರ ಪ್ರೀತಿ, ವಿಶ್ವಾಸ ಗೆಲ್ಲಲಿ. ಇಂತಹ ಒಬ್ಬ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕಾ ಎಂದು ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.ಇದನ್ನೂ ಓದಿ: ಅಯ್ಯನ ಮನೆಯ ನಿಗೂಢ ಲೋಕ : ಖುಷಿ ರವಿ, ಅಕ್ಷಯ್ ನಟನೆ
