ಬೆಂಗಳೂರು: ಗೌರಿ ಹಬ್ಬದ ದಿನ ಸಿಎಂ ಗಂಗೆ ಪೂಜೆ ಮಾಡಿ, ಎತ್ತಿನಹೊಳೆ ಯೋಜನೆ (Ettinahole Project) ನೀರು ಬಿಡುಗಡೆ ಮಾಡಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, 7 ಕಡೆ ಎತ್ತಿನಹೊಳೆ ಯೋಜನೆ ಪ್ರಾರಂಭ ಮಾಡಲಾಗುತ್ತೆ. ಗೌರಿ ಹಬ್ಬದ ದಿನ ಗಂಗೆಗೆ 12 ಗಂಟೆ 5 ನಿಮಿಷಕ್ಕೆ ಸಿಎಂ (CM Siddaramaiah) ಪೂಜೆ ನೆರವೇರಿಸಲಿದ್ದಾರೆ. ಎಲ್ಲ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂಓದಿ: ಜಮ್ಮು ಸೇನಾ ನೆಲೆಯ ಮೇಲೆ ಉಗ್ರರ ದಾಳಿ – ಯೋಧನಿಗೆ ಗಾಯ
ಯೋಜನೆಗೆ ಬಹಳ ಜನ ಅಡಚಣೆ ಮಾಡುತ್ತಿದ್ದರು. ಕೆಲವರು ನೀರು ಹೋಗುವುದೆ ಇಲ್ಲ ಅಂತಾರೆ. ಎಲ್ಲ ಕಡೆ ಮಾತನಾಡಿ ಸರಿ ಮಾಡಿದ್ದೇವೆ. ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಈಗಾಗಲೇ ಟ್ರಯಲ್ ರನ್ ಕೂಡ ಮಾಡಿದ್ದೇನೆ ಎಂದು ಹೇಳಿದರು.
ಕರ್ನಾಟಕ (Karnataka) ರಾಜ್ಯದ ಇತಿಹಾಸದಲ್ಲಿ ದೊಡ್ಡ ಪಂಪ್‌ಗಳನ್ನ ಉಪಯೋಗಿಸುತ್ತಿದ್ದೇವೆ. 5 ವರ್ಷ ಗ್ಯಾರಂಟಿ ಇರಲಿದೆ. 132 ಕಿಮೀ ನೀರು ವಾಣಿವಿಲಾಸಕ್ಕೆ ಬಿಡುಗಡೆ ಮಾಡುತ್ತೇವೆ. ಅದಾದ ಬಳಿಕ ಎಸ್ಕೇಪ್ ರೂಟ್ ಮಾಡಿ ಬಿಡುತ್ತೇವೆ. ಇದಕ್ಕಾಗಿ 502 ಎಕರೆ ಜಮೀನು ಅರಣ್ಯ ಭೂಮಿ ಬಿಟ್ಟುಕೊಡಬೇಕಾಗಿದೆ. ಅರಣ್ಯ ಇಲಾಖೆಯವರದು ಸ್ವಲ್ಪ ಕಸಿವಿವಿ ಇದೆ. ವಾರದೊಳಗೆ ಈ ಸಮಸ್ಯೆ ಬಗೆಹರಿಸಬಹುದು. ನಾಲ್ಕೈದು ತಿಂಗಳಲ್ಲಿ ಎಲ್ಲ ಕೆಲಸ ಆರಂಭ ಆಗಲಿದೆ. ತುಮಕೂರು ತನಕ ನೀರು ತರುತ್ತೇವೆ. 2027ಕ್ಕೆ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂಓದಿ: ಅಪರಾಧಿ ಎಂದು ಸಾಬೀತಾದರೂ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ – ಬುಲ್ಡೋಜರ್ ನ್ಯಾಯದ ವಿರುದ್ಧ ಸುಪ್ರೀಂ ಅಸಮಾಧಾನ
ಇನ್ನು ಇದೇ ವೇಳೆ ತುಂಗಭದ್ರಾ ಡ್ಯಾಂ ವಿಚಾರದ ಬಗ್ಗೆ ಮಾತನಾಡಿದ ಡಿಸಿಎಂ, ಬೆಳೆಗಿಂತ ಡ್ಯಾಂ ಮುಖ್ಯ ಎಂದು ತೀರ್ಮಾನ ಮಾಡಿ ಡ್ಯಾಂನಿಂದ ನೀರು ಹೊರಗೆ ಬಿಡಲಾಯಿತು. 4 ದಿನದಲ್ಲಿ ಗೇಟ್ ಸರಿಪಡಿಸಿದ್ದೇವೆ, 50% ನೀರು ಹೋಗಿತ್ತು. 105.79 ಟಿಎಮ್‌ಸಿ ನೀರು ಗರಿಷ್ಠ ಸಾಮರ್ಥ್ಯ, ಈಗ 98 ಟಿಎಮ್‌ಸಿ ನೀರು ಸಂಗ್ರಹ ಇದೆ. ಇದನ್ನೂಓದಿ: ಹುದ್ದೆ ಸದ್ಯ ಖಾಲಿ ಇಲ್ಲ, ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಡಿಕೆಶಿ
ಇನ್ನು ಎರಡು ಮೂರು ದಿನದಲ್ಲಿ ನೀರು ತುಂಬಲಿದೆ. ಕನ್ನಯ್ಯ ನಾಯ್ಡು ಸೇರಿ 108 ಜನ ಎಂಜಿನಿಯರ್ಸ್ ಕೆಲಸ ಮಾಡಿದ್ದಾರೆ. ಅವರನ್ನು ಗೌರವಿಸಿ ಜೊತೆಗೆ ಅವತ್ತು ಸನ್ಮಾನ ಕಾರ್ಯಕ್ರಮ ಕೂಡ ಇರುತ್ತೆ. ಪ್ರಶಸ್ತಿ ಪತ್ರ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.
ಈಗಾಗಲೇ ರಾಜ್ಯದ ಡ್ಯಾಂಗಳ ಸ್ಥಿತಿಗತಿ ಅಧ್ಯಯನಕ್ಕೆ ಕಮಿಟಿ ರಚನೆ ಆಗಿದೆ. ಸೆಕ್ಷನ್ 38,39 ಡ್ಯಾಂ ಸೇಫ್ಟಿ ಆಕ್ಟ್ ಪ್ರಕಾರ ಡ್ಯಾಂ ಸೇಫ್ಟಿ ಕಮಿಟಿ ರಚನೆ ಮಾಡಿದ್ದೇವೆ. ಸಿಡಬ್ಲ್ಯೂಸಿಯ ಸಿ.ಕೆ.ಬಜಾಜ್ ಅವರ ನೇತೃತ್ವದಲ್ಲಿ ಕಮಿಟಿ ರಚನೆ ಆಗಿದೆ ಎಂದು ಹೇಳಿದರು. ಇದನ್ನೂಓದಿ: ನನಗೂ ಸಿಎಂ ಆಗೋ ಆಸೆ ಇದೆ : ಜಮೀರ್ ಅಹ್ಮದ್