ನಿರ್ದೇಶಕ ಭಗವಾನ್ ನಿಧನಕ್ಕೆ ಸಿಎಂ, ಮಾಜಿ ಸಿಎಂ ಸಂತಾಪ

Public TV
2 Min Read
FotoJet 2 42

ನ್ನಡದ ಮೇರುಪ್ರತಿಭೆ ಎಸ್.ಕೆ.ಭಗವಾನ್ (Bhagwan) ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah), ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish)  ಸೇರಿದಂತೆ ರಾಜಕೀಯ ಕ್ಷೇತ್ರದ ಅನೇಕ ಗಣ್ಯರು ಸಂತಾಪ (condolence) ವ್ಯಕ್ತ ಪಡಿಸಿದ್ದಾರೆ. ಸಂತಾಪ ಸಂದೇಶಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

FotoJet 1 42

ಮಾಜಿ ಸಿಎಂ ಸಿದ್ಧರಾಮಯ್ಯ ಸಂತಾಪ ಸಂದೇಶವನ್ನು ಕಳುಹಿಸಿದ್ದು, ಭಗವಾನ್ ಜೀವನ ಸಾಧನೆಯನ್ನು ಕೊಂಡಾಡಿದ್ದಾರೆ.  ಕನ್ನಡ ಕಲಾ ಜಗತ್ತು ಮತ್ತು ಸಿನಿಮಾ ಪ್ರಪಂಚವನ್ನು ಬೆಳಗಿ ಬೆಳ್ಳೆತೆರೆಯನ್ನು ಶ್ರೀಮಂತಗೊಳಿಸಿದ್ದ ಕನ್ನಡದ ಹಿರಿಮೆಯೂ ಆಗಿದ್ದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ (ಎಸ್.ಕೆ.ಭಗವಾನ್) ಅವರ ನಿಧನ ಅತ್ಯಂತ ಬೇಸರ ತರಿಸಿದೆ. ದೊರೈ ಭಗವಾನ್ ಎಂದೇ ಖ್ಯಾತರಾಗಿದ್ದ ಇವರು ಕನ್ನಡ ಸಿನಿಮಾವನ್ನು ಸಾಂಪ್ರದಾಯಿಕ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದ ಶೈಲಿ ಮತ್ತು ತಂತ್ರಜ್ಞಾನಕ್ಕೆ ಅಳವಡಿಸಿದ ಮೊದಲಿಗರಲ್ಲಿ ಒಬ್ಬರು.

Bhagavan 4

“ಜೇಡರ ಬಲೆ”, “ಗೋವಾದಲ್ಲಿ ಸಿಐಡಿ 999”, “ಆಪರೇಷನ್ ಜಾಕ್‌ಪಾಟ್” ರೀತಿಯ ಸಿನಿಮಾಗಳ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಕನ್ನಡ ಸಿನಿಮಾವನ್ನು ಅರ್ಧ ಶತಮಾನದ ಹಿಂದೆಯೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದವರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಸೇರಿ ನೂರಾರು ಕಲಾ ಪ್ರಶಸ್ತಿಗಳ ಪುರಸ್ಕೃತರಾಗಿದ್ದ  ಇವರು ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು. ಇದನ್ನೂ ಓದಿ:ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ರಜನಿಕಾಂತ್ ದಂಪತಿ

Bhagavan 1

ನನ್ನ ಆತ್ಮೀಯರೂ ಆಗಿದ್ದ ಇವರನ್ನು ನಾನಾ ಸಂದರ್ಭಗಳಲ್ಲಿ ಭೇಟಿಯಾಗುವ ಅವಕಾಶ ಹತ್ತಾರು ಬಾರಿ ಒದಗಿ ಬಂದಿತ್ತು. 90 ವರ್ಷ ವಯಸ್ಸಿನ ಇವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಕನ್ನಡ ರಂಗಭೂಮಿ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಬೆಳ್ಳಿ ಪರದೆಯನ್ನು ಶ್ರೀಮಂತಗೊಳಿಸಿದ ಭಗವಾನ್ ಅವರು ತಮ್ಮ 65 ವರ್ಷಗಳ ಸುದೀರ್ಘ ಸಿನಿಮಾ ಸಾಹಸಗಳಲ್ಲಿ 28ಕ್ಕೂ ಹೆಚ್ಚು ಕನ್ನಡ ಕಾದಂಬರಿಗಳನ್ನು ಬೆಳ್ಳಿ ಪರದೆಗೆ ತಂದ ಕೀರ್ತಿ ಹೊಂದಿದ್ದಾರೆ.

Bhagavan 3

ಭಗವಾನ್ ನಿರ್ದೇಶನದಲ್ಲಿ ಅರಳಿದ “ಕಸ್ತೂರಿ ನಿವಾಸ, ಸಂಧ್ಯಾರಾಗ, ಬಯಲುದಾರಿ, ಹೊಸ ಬೆಳಕು, ಬೆಂಕಿಯ ಬಲೆ…” ಮುಂತಾದ ಹಲವು ಸಿನಿಮಾಗಳು ಈಗಲೂ ನನ್ನ ನೆನಪಿನಲ್ಲಿ ಉಳಿದಿವೆ. ಸಿನಿಮಾ ನಿರ್ದೇಶನಕ್ಕೆ ಪೂರ್ಣವಿರಾಮ ಹಾಕಿದ ಬಳಿಕ “ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್”ನ ಪ್ರಾಂಶುಪಾಲರಾಗಿ ಇವರು ತಮ್ಮ ತಿಳಿವಳಿಕೆ, ಜ್ಞಾನ ಮತ್ತು ಅನುಭವವನ್ನು ಹೊಸ ತಲೆಮಾರಿನ ಕಲಾಸಕ್ತರಿಗೂ ವರ್ಗಾಯಿಸುವ ಮೂಲಕ ಕನ್ನಡದ ಜ್ಞಾನವನ್ನು ಹೆಚ್ಚಿಸಿದ್ದಾರೆ.

Bhagavan 2

ಇವರ ಅಗಲಿಕೆ ಭಾರತೀಯ ಸಿನಿಮಾ ಜಗತ್ತಿಗೆ ತುಂಬಲಾರದ ನಷ್ಟ. ಇವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ, ಬಂಧು ಮಿತ್ರರಿಗೆ, ಅಭಿಮಾನಿಗಳಿಗೆ ಹಾಗೂ ಸಿನಿಮಾ ಜಗತ್ತಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ ಕಲಾ ಶ್ರೀಮಂತಿಕೆಯ ಕಾರಣಕ್ಕೆ ಭಗವಾನ್ ಅವರು ಕನ್ನಡ ಭಾಷೆ ಇರುವವರೆಗೂ ಕನ್ನಡ ಮಣ್ಣಿನಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎಂದು ಹೇಳುತ್ತಾ ಹಿರಿಯ ಪ್ರತಿಭೆಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ ಎಂದಿದ್ದಾರೆ ಸಿದ್ಧರಾಮಯ್ಯ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
1 Comment

Leave a Reply

Your email address will not be published. Required fields are marked *