ರಾಯಚೂರು: ಡಿ.19ರ ಒಳಗಾಗಿ ನಮ್ಮ ಮೀಸಲಾತಿ ಸಿಗುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಪಂಚಮಸಾಲಿಗೆ 2ಎ (2A Reservation) ಕೊಡುವ ಸಾಧ್ಯತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಲಿಂಗಸುಗೂರು ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪಂಚಮಸಾಲಿಗೆ (Panchamasali) ಒಬಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಡಿ.19 ರ ಗಡುವು ಸಿಎಂ ಮೀರಿದ್ರೆ ಡಿ.22ರಂದು ಬೃಹತ್ ಹೋರಾಟ ಮಾಡೋಣ. ಬೆಳಗಾವಿ ಸುವರ್ಣ ಸೌಧದ ಮುಂದೆ ಡಿ. 22ರಂದು ಹೋರಾಟಕ್ಕೆ ಸಿದ್ಧರಾಗಿ ಎಂದು ಕರೆ ನೀಡಿದರು. ಇದನ್ನೂ ಓದಿ: ಚುನಾವಣಾ ಆಯೋಗ ಸೂಚನೆ – ಮತದಾರರ ಪಟ್ಟಿ ಪರಿಷ್ಕರಣೆ ಶುರು
Advertisement
Advertisement
ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಹೇಳಿದ್ದಾರೆ. ಎಲ್ಲಾ ಸಮುದಾಯಗಳಿಗೆ ಮೀಸಲಾತಿ ನೀಡಲು ನಾನು ಒತ್ತಾಯ ಮಾಡಿದ್ದೇನೆ. ಎಲ್ಲಾ ಸಮಾಜಗಳಿಗೂ ನ್ಯಾಯ ಸಿಗಬೇಕು. ನಮ್ಮ ಸಮಾಜಕ್ಕೂ ನ್ಯಾಯ ಸಿಗಬೇಕು. ಜ.15 ರಂದು ಶುರುವಾದ ಪಾದಯಾತ್ರೆ 750 ಕಿ.ಮೀ. ವರೆಗೆ ನಡೆಯಿತು. ನಮ್ಮ ಸಮಾಜದ ಹೆಸರು ಹೇಳಿ ಅನೇಕರು ಸಿಎಂ ಆಗಿದ್ದರು ಎಂದು ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಪಂಚಮಸಾಲಿ ಹೋರಾಟದ ಫಲವಾಗಿ ಎಸ್‌ಸಿ, ಎಸ್‌ಟಿ ಮೀಸಲಾತಿ ಸಿಕ್ಕಿದೆ. ಯತ್ನಾಳ್ ಹಿಂದುತ್ವ ಬಿಟ್ಟು ಪಂಚಮಸಾಲಿ ಶುರು ಮಾಡಿದ್ದಾನೆ. 2ಎ ಮೀಸಲಾತಿ ಸಿಕ್ಕ ಬಳಿಕ ಸ್ವಾಮೀಜಿಗಳು ಹಸಿರು ಶಾಲು ತೆಗೆಯುತ್ತಾರೆ. ಸ್ವಾಮೀಜಿಗಳಿಗೆ ಹಸಿರು ಶಾಲು ನಾನು ಹಾಕಿದ್ದೇನೆ. ಶಾಮನೂರು ಶಿವಶಂಕರಪ್ಪ, ಖಂಡ್ರೆ ಲಿಂಗಾಯತ ಹೆಸರು ಹೇಳಿ ಮಂತ್ರಿ ಆದರು. ಪಂಚಮಸಾಲಿಗಳಿಗೆ ಏನು ಮಾಡಲಿಲ್ಲ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಗೆ ಧರ್ಮ ಬೋಧನೆ!
Advertisement
ಕೂಡಲಸಂಗಮ ಸ್ವಾಮೀಜಿ ಹೋರಾಟದ ಫಲವಾಗಿ ನಮ್ಮ ಸಮಾಜ ಇಂದು ಒಂದಾಗಿದೆ. ನಮ್ಮ ಶಕ್ತಿ ಬಗ್ಗೆ ಇಲ್ಲಿಯವರೆಗೆ ನಮಗೆ ಗೊತ್ತಿರಲಿಲ್ಲ. ನಮ್ಮ ಸ್ವಾಮೀಜಿಗಳು ನಮ್ಮ ಶಕ್ತಿಯ ಪರಿಚಯ ಮಾಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುತ್ತೆ. ನಾವು ಯಾವುದೇ ಸಮಾಜಕ್ಕೂ ಅನ್ಯಾಯ ಮಾಡಿಲ್ಲ. ನಮಗೆ ಬೇಕಾದ ಪಾಲು ನಾವು ಕೇಳುತ್ತಿದ್ದೇವೆ. ಎಲ್ಲಾ ಸಮಾಜದಲ್ಲಿಯೂ ಬಡವರು ಇದ್ದಾರೆ. ಬಡತನ ಜಾತಿಗೆ ಸೀಮಿತವಾಗಿಲ್ಲ. ಬಡತನಕ್ಕೆ ಕೇಂದ್ರ ಸರ್ಕಾರವೇ ಶೇ.10 ಮೀಸಲಾತಿ ನೀಡಿದೆ. ನಮ್ಮ ಸಮಾಜಕ್ಕೆ ನ್ಯಾಯ ಕೇಳಿದ್ರೆ ಕೆಲವರಿಗೆ ತೊಂದರೆ ಆಗಿದೆ ಎಂದರು.
ವಿಜಯಪುರ ನಗರದ ಚುನಾವಣೆ ವಿಚಾರ ಪ್ರಸ್ತಾಪಿಸಿದ ಯತ್ನಾಳ್, ಬೆಳಗಾವಿ ಅಧಿವೇಶನದಲ್ಲಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ರೆ ಅವರಿಗೆ ವೋಟು ಹಾಕಿ. ನಾನು ಲಿಸ್ಟ್ ಕೊಟ್ಟವರಿಗೆ ವೋಟು ಹಾಕಿ ಎಂದು ಮತದಾರರಿಗೆ ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡ್ತೀವಿ : ಬೊಮ್ಮಾಯಿ