BellaryDistrictsKarnatakaLatestMain Post

ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಗೆ ಧರ್ಮ ಬೋಧನೆ!

ಬಳ್ಳಾರಿ: ಸರ್ಕಾರಿ ಶಾಲೆಯ (Government School) ಶಿಕ್ಷಕಿಗೆ (Teacher) ಅಧಿಕಾರ ಸ್ವೀಕಾರದ ವೇಳೆ ಚರ್ಚ್ ಪಾದ್ರಿ ಧರ್ಮ ಬೋಧನೆ ಮಾಡಿದ ಘಟನೆ ಬಳ್ಳಾರಿಯ (Ballary) ಸರ್ಕಾರಿ ಗರ್ಲ್ಸ್  ಹೈಸ್ಕೂಲ್‍ನಲ್ಲಿ ನಡೆದಿದೆ.

ಜಾಯ್ (ಜಯಾ) ಎನ್ನುವ ಶಿಕ್ಷಕಿ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ಸ್ವೀಕರಿಸುವ ವೇಳೆ ಚರ್ಚ್ ಪಾದ್ರಿ ಕರೆಸಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹೆಡ್ ಮಾಸ್ಟರ್ ಚೇರ್‌ನಲ್ಲಿ ಕುಳಿತ ಪಾದ್ರಿ ಫೋಟೋ ವೈರಲ್ ಆಗಿದೆ.

ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಗೆ ಧರ್ಮ ಬೋಧನೆ!

ಸಮಾರಂಭ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೆಲವರು ಜಾಯ್ ವಿರುದ್ಧ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಿಸಿ ಮತ್ತು ಡಿಡಿಪಿಐಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡ್ತೀವಿ : ಬೊಮ್ಮಾಯಿ

ಈ ಬಗ್ಗೆ ಮುಖ್ಯಶಿಕ್ಷಕಿ ಜಾಯ್ ಮಾತನಾಡಿ, ತಮ್ಮ ವಿರುದ್ಧ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅವರು ನಮ್ಮ (ಪಾದ್ರಿ) ಅಣ್ಣ, ನಾನು ಅಧಿಕಾರ ವಹಿಸಿಕೊಂಡ ಮೇಲೆ ಸ್ಕೂಲ್‍ಗೆ ಬಂದು ವಿಶ್ ಮಾಡಿದ್ದಾರೆ. ನಾನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವೆ. ಶಾಲೆಯಲ್ಲಿ ಧರ್ಮವನ್ನು ತರಬಾರದು ಎಂದು ನನಗೂ ಅರಿವಿದೆ. ನನಗೆ ಆಗದೆ ಇರುವವರು ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 400 ವಂದೇ ಭಾರತ್ ರೈಲುಗಳಿಗೆ ಚಾಲನೆ – 2023ಕ್ಕೆ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ

Live Tv

Leave a Reply

Your email address will not be published. Required fields are marked *

Back to top button