ಹಾವೇರಿ: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ದಂಗಲ್ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರ ಪಟ್ಟಣದ ಹಳ್ಳೂರ ಓಣಿಯಲ್ಲಿರುವ ಅತ್ತೆ ಮನೆ ತೆರಳಿ ಮತಯಾಚಿಸಿದ್ದಾರೆ.
ಸಿಎಂ ಆದ ಬಳಿಕ ಪ್ರಥಮ ಬಾರಿಗೆ ಅತ್ತೆ ಮನೆಗೆ ಬೊಮ್ಮಾಯಿ ಬರುತ್ತಿದ್ದಂತೆ, ಮನೆ ಅಳಿಯನಿಗೆ ಆರತಿ ಮಾಡಿ, ಹೂಗುಚ್ಛ ನೀಡಿ ಬೀಗರು ಸ್ವಾಗತಿಸಿದರು. ಬಳಿಕ ಬೀಗರ ಮನೆಯಲ್ಲಿ ಮಂಡಕ್ಕಿ, ಮಿರ್ಚಿ ಮತ್ತು ಚಹಾ ಸೇವಿಸಿದರು. ನಂತರ ನಮ್ಮ ಅಭ್ಯರ್ಥಿ ಶಿವರಾಜ ಸಜ್ಜನರಗೆ ಮತ ನೀಡಿ ಎಂದು ಬೊಮ್ಮಾಯಿ ಕೇಳಿಕೊಂಡರು. ಇದನ್ನೂ ಓದಿ: ಪ್ರೇಮ ವೈಫಲ್ಯ – ವೀಡಿಯೋ ಮಾಡಿಟ್ಟು ಜಿಮ್ ಟ್ರೈನರ್ ಆತ್ಮಹತ್ಯೆ
ಈ ಮೊದಲು ಬೊಮ್ಮಾಯಿ ಹಾನಗಲ್ ತಾಲೂಕಿನ ಶೀಗಿಹಳ್ಳಿ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಯುವತಿಯೊಬ್ಬಳು ಸಿಎಂ ಕೈಕುಲುಕಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದಳು. ಬಳಿಕ ಸಿಎಂ ಕಾಲಿಗೆ ಎರಗಿ ನಮಸ್ಕರಿಸಿದಳು. ನಂತರ ಶಾಲಾ ಬಾಲಕಿ ಮತ್ತು ಮಹಿಳೆಯರೊಂದಿಗೂ ಸಿಎಂ ಸೆಲ್ಫಿಗೆ ಪೋಸ್ ನೀಡಿದರು. ಇದನ್ನೂ ಓದಿ: ಟಿಪ್ಪರ್ ಡಿಕ್ಕಿ – ಬೈಕಲ್ಲಿ ಹೋಗ್ತಿದ್ದ ತಾಯಿ, ಮಗು ಸಾವು