DistrictsKarnatakaLatestMain Post

ಕಾನೂನು ಕೈಗೆತ್ತಿಕೊಂಡಿರುವ ಮೂವರ ಬಂಧನವಾಗಿದೆ: ಸಿಎಂ

ಬೆಂಗಳೂರು: ಕಾನೂನನ್ನ ಕೈಗೆತ್ತಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಳ್ಳೋದು ಶತಸಿದ್ಧ. ಈಗ ಮೂರು ಜನ ಆರೆಸ್ಟ್ ಆಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನದಿಂದ ದೇಶ ಭಕ್ತರ ಮೂರ್ತಿಗಳನ್ನು ಭಂಗ ಮಾಡೋ ವಿಚಾರದಲ್ಲಿ ಕೆಲವರು ಕಾನೂನನ್ನ ಕೈಗೆತ್ತಿಕೊಳ್ಳೋ ಕೆಲಸ ಮಾಡ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ ಅವರು ದೇಶ ಭಕ್ತರು. ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದವರು. ಅವರನ್ನು ಯಾವುದೇ ಒಂದು ಭಾಷೆಗೆ ಅಥವಾ ಸಮುದಾಯಕ್ಕೆ ಸೀಮಿತ ಮಾಡೋದಕ್ಕೆ ಆಗಲ್ಲ ಎಂದರು.

ಈ ದೇಶಭಕ್ತರ ಹೆಸರಿನಲ್ಲಿ ವಿಭಜಿಸುವ ಕೃತ್ಯವನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ. ಈಗಾಗಲೇ ಗೃಹ ಮಂತ್ರಿಗಳಿಗೆ ಸೂಚನೆ ನೀಡಿದ್ದು, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಅನೇಕರನ್ನ ಬಂಧಿಸಲಾಗಿದೆ. ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳವಂತೆ ಸೂಚನೆ ನೀಡಿದ್ದೇನೆ. ಅದರಿಂದ ಜನ ಈ ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡದೇ ಎರಡು ರಾಜ್ಯದ ನಡುವಿರುವ ಬಾಂಧವ್ಯವನ್ನ ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಈ ದೇಶ ಭಕ್ತರು ಎಲ್ಲರಿಗೂ ಸೇರಿದವರು. ಇವರ ಬಗ್ಗೆ ಅಪಾರ ಗೌರವವಿದೆ. ಕಾನೂನನ್ನ ಕೈಗೆತ್ತಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಶತಸಿದ್ಧ. ಈಗ ಮೂರು ಜನ ಅರೆಸ್ಟ್ ಆಗಿದ್ದಾರೆ ಎಂದರು. ಇದನ್ನೂ ಓದಿ: ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಬೊಮ್ಮಾಯಿ

 

ಇದೇ ವೇಳೆ ಸಂಘಟನೆಗಳ ನಿಷೇಧ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬಹುದು ಅದನ್ನ ಕೈಗೊಳ್ಳುತ್ತೇವೆ. ಬೆಂಗಳೂರಿನಲ್ಲಿ 3 ಬೆಳಗಾವಿಯಲ್ಲಿ 27 ಜನರನ್ನ ಬಂಧಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

Leave a Reply

Your email address will not be published.

Back to top button