ಬೆಂಗಳೂರು: ಬಿಜೆಪಿಯನ್ನು (BJP) ಕಟ್ಟಿ ಬೆಳೆಸಿದ ನಾಯಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಮತ್ತು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನಡುವೆ ಮುನಿಸು ಉಂಟಾಗಲು ಪ್ರಮುಖ ಕಾರಣ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಎಂಬ ಸತ್ಯ ಇದೀಗ ಬಯಲಾಗಿದೆ.
ಶಿಕಾರಿಪುರದ ಮುಖಂಡನಿಗೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕೆಂದು ಯಡಿಯೂರಪ್ಪ ಆಗ್ರಹಿಸಿದ್ದರು. ಆದರೆ ಈ ಆಗ್ರಹಕ್ಕೆ ಬೊಮ್ಮಾಯಿ ಒಪ್ಪಿರಲಿಲ್ಲ. ಇದರಿಂದ ಸಿಟ್ಟಾಗಿದ್ದ ಬಿಎಸ್‍ವೈ ಬಿಜೆಪಿಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಅಡಿಕೆ ಬೆಳೆಗಾರರ ಪರ ಧ್ವನಿ ಎತ್ತಿದ ಬಿ.ವೈ ರಾಘವೇಂದ್ರ
ಯಡಿಯೂರಪ್ಪ ಅವರನ್ನು ಕಡೆಗಣಿಸಿದ ವಿಷಯ ಹೈಕಮಾಂಡ್ ಅಂಗಳಕ್ಕೆ ತಲುಪಿತ್ತು. ಈ ಬೆನ್ನಲ್ಲೇ ಸಿಎಂ ಬಿಎಸ್‍ವೈ ಆಶಯದಂತೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಹೆಚ್.ಟಿ.ಬಳಿಗಾರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಬಿಎಸ್‍ವೈ ಪಕ್ಷದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಮೆರೆದಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್ ಸಮೀಕ್ಷೆ ರಿಸಲ್ಟ್ ಔಟ್
ಇತ್ತೀಚಿಗೆ ಪಕ್ಷದ ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಬಿಎಸ್‍ವೈ ಭಾಗಿಯಾಗುತ್ತಿರಲಿಲ್ಲ. ಬೊಮ್ಮಾಯಿ ಜೊತೆಗೂ ಬಿಎಸ್‍ವೈ ಸಂಬಂಧ ಚೆನ್ನಾಗಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಇದೇ ಹೊತ್ತಲ್ಲಿಯೇ, ಪಕ್ಷದಲ್ಲಿ ಭಿನ್ನಮತ ಇರುವುದು ನಿಜ ಎಂದು ಮಾಜಿ ಮಂತ್ರಿ ಕೆ.ಎಸ್ ಈಶ್ವರಪ್ಪ, ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಇದನ್ನು ಸರಿಮಾಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಪೂರಕವೆಂಬಂತೆ ಕೊಪ್ಪಳದಲ್ಲಿ ಪಕ್ಷದ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಯಡಿಯೂರಪ್ಪಗೆ ಆಹ್ವಾನ ನೀಡದ ವಿಚಾರ ಹೈಕಮಾಂಡ್ ಅಂಗಳ ತಲುಪಿತ್ತು.
ಯಡಿಯೂರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಪಕ್ಷದ ನಾಯಕರನ್ನು ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಹೈಕಮಾಂಡ್ ಚುನಾವಣೆಗೆ ಐದಾರು ತಿಂಗಳು ಬಾಕಿ ಇರುವಾಗ ಮಾಸ್ ಲೀಡರ್ ಯಡಿಯೂರಪ್ಪ ಅವರನ್ನು ಕಡೆಗಣಿಸಬಾರದು. ನಾಯಕರು ಜೊತೆಯಾಗಿ ಚುನಾವಣೆಗೆ ಹೋಗಬೇಕು ಎಂದು ಸೂಚಿಸಿತ್ತು.