ನವದೆಹಲಿ: ಕರಾವಳಿ (Karavali) ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುವ ಅಡಿಕೆ (Arecanut) ಬೆಳೆಗಾರರ ಸಮಸ್ಯೆಗಳನ್ನು ಲೋಕಸಭೆಯಲ್ಲಿ (Lok Sabha) ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ (B.Y Raghavendra) ಪ್ರಾಸ್ತಾಪಿಸಿ, ಕೆಲ ಪರಿಹಾರ ಸೂಚಕಗಳನ್ನು ಅಳವಡಿಕೆ ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
Advertisement
ಪ್ರತಿಬಾರಿ ಅಡಿಕೆಗೆ ಎಲೆಚುಕ್ಕಿ ರೋಗ ಯತೇಚ್ಛವಾಗಿ ಕಾಡುತ್ತದೆ. ಈ ಬಾರಿ ಕೂಡ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದಿಂದಾಗಿ ಇಳುವರಿ ಕಳೆದುಕೊಂಡಿದ್ದಾರೆ. ಇದರೊಂದಿಗೆ ಬೆಲೆ ಕೂಡ ಕುಸಿತ ಕಂಡಿದೆ. ಜೊತೆಗೆ ಆಮದು ಅಡಿಕೆಯಿಂದಾಗಿ ಇಲ್ಲೇ ಬೆಳೆಯುವ ಅಡಿಕೆ ಬೆಳೆಗಾರರಿಗೆ ಹೆಚ್ಚು ಹೊಡೆತ ಬೀಳುತ್ತಿದೆ. ಅಡಿಕೆ ಆಮದು ನಿಲ್ಲಿಸಬೇಕೆಂಬ ರೈತರ (Farmers) ಹಲವು ವರ್ಷಗಳ ಕೂಗು ಹಾಗೆ ಮುಂದುವರಿದೆ. ಹಾಗಾಗಿ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯವನ್ನು ವಿಜಯೇಂದ್ರ ಲೋಕಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಂಡಿಸಿದರು. ಇದನ್ನೂ ಓದಿ: ತನ್ನ ಚುನಾವಣೆಯ ಗೆಲುವಿನ ರಹಸ್ಯ ರಿವೀಲ್ ಮಾಡಿದ ಮೋದಿ
Advertisement
Advertisement
ಕರ್ನಾಟಕದಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅದರಲ್ಲೂ ಮಳೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚಾಗಿ ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ. ಹತ್ತು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಅಡಿಕೆ ಬೆಳೆಯನ್ನು ತಮ್ಮ ಮುಖ್ಯ ಬೆಳೆಯನ್ನಾಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಶೇ.69 ರಷ್ಟು ಅಡಿಕೆ ಉತ್ಪಾದನೆಯಾಗುತ್ತಿದೆ. ಒಟ್ಟಾರೆ 16,50,000 ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದ್ದು, ಇದರಿಂದಾಗಿ ಜಿಎಸ್‍ಟಿ ಹಾಗೂ ಇನ್ನಿತರ ತೆರಿಗೆಗಳ ಮೂಲಕ ಸರ್ಕಾರಕ್ಕೆ 24,750 ಕೋಟಿ ರೂ. ಆದಾಯ ಬರುತ್ತಿದೆ. ಈಗ ಅಡಿಕೆ ಬೆಳೆಗಾರರು ಅಡಿಕೆಗೆ ಕೆಲ ರೋಗಗಳಿಂದ ಇಳುವರಿ ಕಳೆದುಕೊಂಡಿದ್ದಾರೆ. ಇರುವರಿಯು ಈಗಾಗಲೇ ಶೇ. 40 ರಿಂದ 50 ರಷ್ಟು ಕಡಿಮೆಯಾಗಿದೆ. ಇನ್ನೊಂದೆಡೆ ಅಡಿಕೆಯ ಬೆಲೆಯು ಕುಸಿಯುತ್ತಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಕ್ವಿಂಟಾಲ್‍ಗೆ 58 ಸಾವಿರ ರೂ. ಇದ್ದ ಅಡಿಕೆ ಧಾರಣೆ ಈಗ 30 ಸಾವಿರ ರೂ.ಗೆ ಇಳಿದಿದೆ ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡು ಗಮನಸೆಳೆದರು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ
Advertisement
During Zero Hour today, I requested the Union government to impose heavy import duty on imported arecanut, Introduce scientifically developed medicine to diseases, and put a stringent mechanism to prevent illegal trade of arecanut. @BSBommai @BSYBJP @BJP4Karnataka @AgriGoI pic.twitter.com/AgvIgnXR9l
— B Y Raghavendra (@BYRBJP) December 15, 2022
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸಲು ಆಮದು ಅಡಿಕೆಯ ಮೇಲೆ ಹೆಚ್ಚಿನ ಸುಂಕ ವಿಧಿಸಬೇಕು. ಅಡಿಕೆಯನ್ನು ಕಾಡುವ ಎಲ್ಲ ರೋಗಗಳಿಗೆ ವೈಜ್ಞಾನಿಕವಾಗಿ ಔಷಧಿಯನ್ನು ಅಭಿವೃದ್ಧಿ ಪಡಿಸಿಕೊಡಬೇಕು. ಕಾನೂನು ಬಾಹಿರವಾಗಿ ಅಡಿಕೆ ವ್ಯಾಪಾರ ನಡೆಯುವುದನ್ನು ತಡೆದು ಸರ್ಕಾರಿ ಸೌಮ್ಯದ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಗೆ ವ್ಯಾಪಾರ ನಡೆಸುವಂತಾಗಬೇಕೆಂದು ಆಶಯ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಒಂದು ನಿಮಿಷ ಕಾಲಾವಕಾಶ ನೀಡಲಾಗಿದ್ದರೂ ಸಂಸದರು 1.34 ನಿಮಿಷ ಮಾತನಾಡಿ, ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿ ಪರಿಹಾರಕ್ಕಾಗಿ ಆಗ್ರಹಿಸಿದರು.