ವಿಜಯನಗರ: ರಾಜ್ಯದ ನೂತನ ಜಿಲ್ಲೆಯಾಗಿ ವಿಜಯನಗರ ಅಧಿಕೃತವಾಗಿ ಇಂದು ಉದ್ಘಾಟನೆಯಾಗಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯ ಮುನಿಸಿಪಲ್ ಕ್ರೀಡಾಂಗಣದಲ್ಲಿ ರಚಿಸಿದ್ದ ಭವ್ಯ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‍ವೈ ಅಧಿಕೃತವಾಗಿ ಜಿಲ್ಲೆಯ ಉದ್ಘಾಟನೆಯನ್ನು ಮಾಡಿದ್ದಾರೆ.
Advertisement
ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಆನಂದ್ ಸಿಂಗ್ ಹಠವಾದಿ. ಅವರು ಒಂದು ಕೆಲಸ ಹಿಡಿದರೆ ಮಾಡದೇ ಬಿಡಲ್ಲ. ಅವರು ಉಡದ ಹಾಗೆ ಕೆಲಸ ಮುಗಿಯುವವರೆಗೂ ಬಿಡಲ್ಲ. ನೂತನ ಜಿಲ್ಲೆಯ ಅಭಿವೃದ್ಧಿಗೆ ಇಡೀ ಸರ್ಕಾರವೇ ಸಹಕಾರ ನೀಡಲಿದೆ. ಯಾವುದೇ ಬಗೆಯ ಸಹಕಾರಕ್ಕೂ ಸಚಿವ ಸಂಪುಟ ಸಜ್ಜಾಗಿದೆ. ಮೊದಲ ಅಂಗಾವಾಗಿ ಇಂದು 367 ಕೋಟಿಗೂ ಹೆಚ್ಚು ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದ್ಘಾಟನೆ
Advertisement
Advertisement
ಇದೇ ವೇಳೆ ಮಾತನಾಡಿದ ಸಚಿವ ಆನಂದ್ ಸಿಂಗ್, ಜಿಲ್ಲಾ ರಚನೆಗೆ ಕಾರಣೀಭೂತರು ಬಿಎಸ್‍ವೈ ಅವರಾಗಿದ್ದು, ಅವರ ಆಶೀರ್ವಾದಿದಂಲೇ ಜಿಲ್ಲೆಯಾಗಿದೆ. ಜಿಲ್ಲಾ ರಚನೆಗೆ ಎಲ್ಲಾ ಬಗೆಯ ಸಹಕಾರ ನೀಡಿದ ಸಿಎಂ ಹಾಗೂ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೂ ಸಹ ಧನ್ಯವಾದ ಅರ್ಪಿಸಿದರು.
Advertisement
ವಿಜಯನಗರ ಶೈಲಿಯಲ್ಲಿ ವೈಭವವಾಗಿ ನಿರ್ಮಿಸಿದ್ದ ವೇದಿಕೆಯಲ್ಲಿ ವಿಜಯನಗರ ಜಿಲ್ಲೆಗೆ ಚಾಲನೆ ನೀಡಾಲಾಯಿತು. ಈ ವೇಳೆ ನೆರೆದಿದ್ದ ಜನರು ಜೋರಾಗಿ ಕೂಗುವ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.