ಬೆಳಗಾವಿ: ಹಿಂದೆ ನಮಗೆ ಲಕ್ಷನೇ ದೊಡ್ಡದಾಗಿತ್ತು. ಆದರೆ ಈಗಿನ ಶಾಸಕರಿಗೆ ಕೋಟಿ ಅಂದ್ರೆ ಕಿಮ್ಮತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟರು.
ಸವದತ್ತಿ ತಾಲ್ಲೂಕಿನ ಇಂಚಲದ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದ ರಜತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಕ್ಷೇತ್ರಕ್ಕೆ ಬಂದಿರುವ ಹಣದಲ್ಲಿ ಒಂಚೂರು ಪೋಲ್ ಆಗಬಾರದು. ಎಲ್ಲವೂ ಕಾಮಗಾರಿಗೆ ಹೋಗಬೇಕು. ಹಣ ಸೋರಿಕೆ ಆಗದಂತೆ ಕೆಲಸ ಆಗಬೇಕು ಎಂದರಲ್ಲದೇ, ನಿಮ್ಮ ಶಾಸಕರಿಂದ ಕೆಲಸ ಆಗುವಂತೆ ನೀವೂ ನೋಡಿಕೊಳ್ಳಿ ಎಂದು ಜನರಿಗೂ ಸಲಹೆ ನೀಡಿದರು. ಇದನ್ನೂ ಓದಿ: ರಾಮನಿಗೂ ಅಶ್ವಥ್ ನಾರಾಯಣಗೂ ಏನು ಸಂಬಂಧ, ತುಂಬಾ ಮಾತನಾಡುವುದು ಬೇಡ: HDD ವಾರ್ನಿಂಗ್
Advertisement
Advertisement
ಬಹಳ ಸನ್ಮಾನ ಮಾಡಿದ್ರೆ ಹೆದರಿಕೆಯಾಗುತ್ತೆ. ಸನ್ಮಾನ ಜೊತೆ ಮನವಿ ಸಹ ಬರುತ್ತೆ. ಶ್ರೀಮಠಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಒಂದು ಸಣ್ಣ ಹಳ್ಳಿಯಲ್ಲಿ, ಒಂದು ಶಾಲೆಯಿಂದ ಮೆಡಿಕಲ್ ಕಾಲೇಜುವರೆಗೂ ಬಂದು ನಿಂತಿದೆ. ಸಾವಿರಾರು ಮಕ್ಕಳಿಗೆ ಮಠ ವಿದ್ಯೆ ನೀಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.
Advertisement
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರೈತರ ಮಕ್ಕಳಿಗಾಗಿ ವಿದ್ಯಾ ನಿಧಿ ಯೋಜನೆ ತಂದಿದ್ದೇನೆ. ರೈತನ ಬದುಕು ಅನಿಶ್ಚಿತತೆಯಿಂದ ಕೂಡಿರುತ್ತೆ. ಆ ರೈತನ ಬದುಕು ನಿಶ್ಚಿತವಾಗಬೇಕು ಎಂದು ಸರ್ಕಾರ ಹಲವು ಕಾರ್ಯಕ್ರಮಗಳನ್ನ ತರುತ್ತಿದೆ. ಯಶಸ್ವಿನಿ ಯೋಜನೆ, ಹಾಲು ಉತ್ಪಾದಕರಿಗೆ ನೆರವು ಹೀಗೆ ಹಲವು ಯೋಜನೆಗಳನ್ನ ನೀಡುತ್ತಿದ್ದೇವೆ. ಮುಂದಿನ ಬಜೆಟ್‌ನಲ್ಲಿ ರೈತರಿಗಾಗಿ ಇನ್ನೂ ಹಲವಾರು ಯೋಜನೆ ರೂಪಿಸಲಿದ್ದೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ
Advertisement
ಇಂಚಲ್‌ಗೆ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದೇವೆ. ನಿಮ್ ಶಾಸಕ ಮಹಾಂತೇಶ್ ದೊಡ್ಡಗೌಡ ಉಡಾ ಇದ್ದ ಹಾಗೆ. ಯೋಜನೆ ಮಾಡಿಸಿಕೊಳ್ಳೋತನಕ ಬಿಡೋದಿಲ್ಲ. ಈಗಿನ ಶಾಸಕರಿಗೆ ಕೋಟಿ ಅಂದ್ರೆ ಕಿಮ್ಮತ್ತಿಲ್ಲ. ನಮಗೆ ಎಲ್ಲಾ ಲಕ್ಷನೇ ದೊಡ್ಡದಾಗಿತ್ತು ಎಂದು ಹೇಳಿದರು.