ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ (Karnataka Media Academy) ವತಿಯಿಂದ ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಪಬ್ಲಿಕ್ ಟಿವಿಯ ಪತ್ರಕರ್ತರು ಸೇರಿದಂತೆ ವಿವಿಧ ಮಾಧ್ಯಮಗಳ ಸಾಧಕರಿಗೆ ಸೋಮವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ (HR Ranganath) ಅವರಿಗೆ 2021ನೇ ಸಾಲಿನ ವಿಶೇಷ ಜೀವಮಾನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರದಾನ ಮಾಡಿ ಗೌರವಿಸಿದರು. ಇದನ್ನೂ ಓದಿ: ಲಂಕಾ ವಿರುದ್ಧ ಕಿವೀಸ್‌ಗೆ ರೋಚಕ ಜಯ – 2ನೇ ಬಾರಿ WTC ಫೈನಲ್‌ಗೆ ಭಾರತ
Advertisement
ಈ ಸಂದರ್ಭದಲ್ಲಿ 2019 ವಾರ್ಷಿಕ ಪ್ರಶಸ್ತಿಯನ್ನ ಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕರಾದ ದಿವಾಕರ್ ಅವರಿಗೆ, 2020ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನ ಪಬ್ಲಿಕ್ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಆನಂದ್ ವಿ ಅವರಿಗೆ, 2021 ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನ ಮೈಸೂರು ಜಿಲ್ಲಾ ವರದಿಗಾರರಾದ ಕೆ. ಪಿ. ನಾಗರಾಜ್ ಅವರಿಗೆ, ಹಾಗೂ 2022 ನೇ ವಾರ್ಷಿಕ ಪ್ರಶಸ್ತಿಯನ್ನ ಪಬ್ಲಿಕ್ ಟಿವಿಯ ಬೆಳಗಾವಿ ಜಿಲ್ಲಾ ವರದಿಗಾರ ದಿಲೀಪ್ ಕುರಂದವಾಡೆ ಅವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಿದರು.
Advertisement
ಸಿನಿಮಾ ಕ್ಷೇತ್ರದ ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿಯನ್ನ ಪಬ್ಲಿಕ್ ಟಿವಿ ಡಿಜಿಟಲ್ ವಿಭಾಗದ ಸಿನಿಮಾ ಬ್ಯೂರೋದ ಡಾ. ಶರಣು ಹುಲ್ಲೂರು ಪ್ರದಾನ ಮಾಡಲಾಯಿತು.
Advertisement
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ನಾಲ್ಕು ವರ್ಷಗಳ ಸಾಲಿನ (2019, 2020, 2021, 2022ನೇ ಸಾಲು) ನಾಡಿನ ವಿವಿಧ ಪತ್ರಕರ್ತರನ್ನು ʼಮಾಧ್ಯಮ ವಾರ್ಷಿಕ ಪ್ರಶಸ್ತಿʼ ಮತ್ತು ʼದತ್ತಿ ಪ್ರಶಸ್ತಿʼಗೆ ಆಯ್ಕೆ ಮಾಡಲಾಗಿತ್ತು.
Advertisement
ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ 50,000 ರೂ. ನಗದು, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25,000 ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ನಾಲ್ಕು ವರ್ಷಗಳು ಸೇರಿ 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಹಾಗೆಯೇ ಒಟ್ಟು 21 ಮಂದಿ ಪತ್ರಕರ್ತರು ʼದತ್ತಿ ಪ್ರಶಸ್ತಿʼಗೆ ಆಯ್ಕೆಯಾಗಿದ್ದರು.