ಬೀದರ್: ಮುಸ್ಲಿಂ ಎಂಬ ಕಾರಣಕ್ಕೆ ಸಿಎಂ ಫಾಝಿಲ್ ಮನೆಗೆ ಹೋಗದೆ ತಾರತಮ್ಯ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಪಕ್ಷ ಸಂಘಟನೆಗೆಂದು ಬೀದರ್‌ಗೆ ಬಂದಿದ್ದ ಸಿ.ಎಂ ಇಬ್ರಾಹಿಂ, ಮುಸ್ಲಿಂ ಎಂಬ ಕಾರಣಕ್ಕೆ ಫಾಝಿಲ್ ಮನೆಗೆ ಸಿಎಂ ಹೋಗಿಲ್ಲ. ಆದರೆ ಪ್ರವೀಣ್ ಮನೆಗೆ ಮಾತ್ರ ಹೋಗಿದ್ದಾರೆ. ಇದು ಮನುಷ್ಯತ್ವನಾ, ಒಬ್ಬ ಮಾಜಿ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ಅವರ ಮಗನಾಗಿ ಈ ರೀತಿ ಮಾಡಿದ್ದು ಸರಿಯಲ್ಲ. ಎಲ್ಲರೂ ಮನುಷ್ಯರೆ ಅಲ್ವಾ? ನೀವು ಯಾರನ್ನು ತೃಪ್ತಿ ಪಡಿಸಲು ಸಿಎಂ ಆಗಿದ್ದೀರಿ? ಗೃಹ ಸಚಿವರು ಹಾಗೂ ಸಿಎಂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಂಬಂಧಿ ಜೊತೆ ಸೇರಿ ಪತ್ನಿ ಮೇಲೆ ಅತ್ಯಾಚಾರ ಎಸಗಿ ತಲಾಖ್ ನೀಡಿದ ಪತಿ
Advertisement
Advertisement
ಹತ್ಯೆ ವಿಷಯದಲ್ಲಿ ಯಾಕೆ ಇಂಟೆಲಿಜೆನ್ಸ್? ಪೊಲೀಸರು ಫೇಲಾಗಿದ್ದಾರೆ ಎಂದು ಸಿಎಂ ಇದನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು. ಕೇಶವ ಕೃಪಾ ಹಾಗೂ ಬಸವ ಕೃಪಾ ಹೊಡೆದಾಟ ಶುರುವಾಗಿದ್ದು, ಅದನ್ನು ಮುಗಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಬಾರ್ ಆರೋಪ- ಸ್ಮೃತಿ ಪುತ್ರಿ ವಿರುದ್ಧದ ಟ್ವೀಟ್‌ಗಳನ್ನು 24 ಗಂಟೆಯೊಳಗೆ ಅಳಿಸಲು ನ್ಯಾಯಾಲಯ ಆದೇಶ