– ಸಿದ್ದರಾಮಯ್ಯ ವಿಷ ತುಂಬಿದ ಮನುಷ್ಯ
– ಮೆಡಿಕಲ್ ಕಾಲೇಜ್ ಕಿತ್ತುಕೊಂಡಿಲ್ಲ
ಬೆಂಗಳೂರು: ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ಪ್ರತಿಯೊಂದು ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅತಿವೃಷ್ಟಿಗೆ ಏನು ನೀಡಿದ್ದೇನೆ ಎಂಬುದನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿದ್ದರಾಮಯ್ಯನವರಿಗೆ ನಂಬಿಕೆ ಬರದಿದ್ದರೆ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳಬಹುದು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ದರಾಮಯ್ಯನವರು ನೀಡುವ ಸಲಹೆಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ಪ್ರತಿಯೊಂದು ವಿಷಯಗಳಿಗೂ ಟೀಕೆ ಮಾಡುತ್ತಾ ನಿಂತರೆ ಏನು ಮಾಡಲು ಸಾಧ್ಯ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಧ್ಯಕ್ಷ ಕಟೀಲ್ ಜೊತೆಗಿನ ಸಮನ್ವಯತೆಯ ಸೂತ್ರ ಬಿಚ್ಚಿಟ್ಟ ಬಿಎಸ್‍ವೈ
Advertisement
Advertisement
ಸಿದ್ದರಾಮಯ್ಯನವರು ಸತ್ಯಾಂಶ ತಿಳಿದುಕೊಳ್ಳದೇ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಈ ರೀತಿಯ ಹೇಳಿಕೆಗಳಿಂದ ನಿರಾಶ್ರಿತರು ಗೊಂದಲಕ್ಕೊಳಗಾಗಿ ಕಣ್ಣೀರು ಹಾಕುತ್ತಾರೆ. ನಾನು ನೀಡಿರುವ ಪ್ರಕಟಣೆಯ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳಿದ್ದರೆ ಸಿದ್ದರಾಮಯ್ಯ ಹೇಳಿದಂತೆ ಕೇಳಲು ನಾನು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪ, ಮಕ್ಕಳು ಈಗ ಸುಧಾರಿಸಿದ್ದಾರೆ – ಸಿಎಂ ಬಿಎಸ್‍ವೈ
Advertisement
ದುರುದ್ದೇಶದಿಂದ ಟೀಕೆ ಮಾಡುವವರ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ವಿಷ ತುಂಬಿದ ಮನುಷ್ಯರಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನ ಮಾಡದ ರಾಜಕಾರಣಿ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಚುನಾವಣೆಯಲ್ಲಿ ಒಂದು ಸೀಟ್ ಗೆದ್ದವರೂ ನಮಗೆ ಉಪದೇಶ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಯಡಿಯೂರಪ್ಪನವರೇ ಯಾಕೆ ಸುಳ್ಳು ಹೇಳ್ತೀರಾ? ಸಿದ್ದರಾಮಯ್ಯ
Advertisement
ಸರ್ಕಾರದ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸೋದು ನನ್ನ ಕರ್ತವ್ಯ. ಹಾಗಂತ ನಾನು ಯಾರೊಂದಿಗೆ ಹೊಸ ಫ್ರೆಂಡ್‍ಶಿಪ್ ಮಾಡಿಕೊಂಡಿಲ್ಲ. ಈ ಮಾತುಗಳಿಗೆ ಸಿದ್ದರಾಮಯ್ಯನವರು ಒಳಒಪ್ಪಂದ ಎಂದು ಅಪಾರ್ಥ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಎಸ್‍ವೈ-ಎಚ್‍ಡಿಕೆ ನಡುವೆ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ
ಮೆಡಿಕಲ್ ಕಾಲೇಜು ಕಿತ್ತುಕೊಂಡಿಲ್ಲ: ಮಾಜಿ ಸಚಿವರಾದ ಡಿಕೆ ಶಿವಕುಮಾರ್ ನನ್ನ ಆಪ್ತ ಸ್ನೇಹಿತರು. ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ ತಾಲೂಕು ಕೇಂದ್ರಗಳಿಗೆ ಮೆಡಿಕಲ್ ಕಾಲೇಜು ನೀಡಲು ಸಾಧ್ಯವಿಲ್ಲ. ಮೊದಲು ಜಿಲ್ಲಾ ಕೇಂದ್ರಗಳಿಗೆ ಆಸ್ಪತ್ರೆ ನೀಡಬೇಕು ಎಂಬುವುದು ಶಿವಕುಮಾರ್ ಅವರಿಗೂ ಗೊತ್ತಿದೆ. ಕೇಂದ್ರ ಸರ್ಕಾರ ಮೂರು ಕ್ಷೇತ್ರಗಳಿಗೆ ಅನುದಾನ ನೀಡಿದೆ. 60:40 (ರಾಜ್ಯ 60% & ಕೇಂದ್ರ 40%) ಅನುಪಾತದಲ್ಲಿ ಹಣ ಬಿಡುಗಡೆಯಾಗಿದ್ದರಿಂದ ಚಿಕ್ಕಬಳ್ಳಾಪುರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಡಿಯೋದ ತಪ್ಪು ವ್ಯಾಖ್ಯಾನ ನೀಡಿ ಬಿಜೆಪಿ ವಿಕೃತಾನಂದ: ಸಿದ್ದರಾಮಯ್ಯ