ನಟಿ, ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಕೊನಿಡೆಲಾ (Niharika) -ಚೈತನ್ಯ ಡಿವೋರ್ಸ್ ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಚಂದಾಗಿದ್ದ ಈ ಜೋಡಿ ಯಾಕೆ ದೂರವಾದರು ಎನ್ನುವ ಪ್ರಶ್ನೆಯನ್ನು ಹಲವರು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಚೈತನ್ಯ ಅವರ ತಂದೆಯು ಹೇಳಿದ್ದಾರೆ ಎನ್ನಲಾದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಚೈತನ್ಯ ತಂದೆ ಪ್ರಭಾಕರ್ ರಾವ್ (Prabhakar Rao) ಈ ಕುರಿತು ತಮ್ಮ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ ಎನ್ನಲಾದ ಮಾತುಗಳು ಅಚ್ಚರಿ ಮೂಡಿಸಿವೆ.
‘ನಮ್ಮ ಕುಟುಂಬದ ಬಗ್ಗೆ ನಿಹಾರಿಕಾಗೆ ಗೌರವವೇ ಇರಲಿಲ್ಲ. ಕ್ಲಬ್ಬು, ಪಬ್ಬು ಅಂತ ಸುತ್ತಾಡೋದು ಬಿಟ್ಟರೆ, ಆಕೆಗೆ ಕುಟುಂಬದ ಬಗ್ಗೆ ಕಾಳಜಿ ಇರಲಿಲ್ಲ. ಪತಿಯೊಂದಿಗೆ ಜೀವನ ಕಳೆಯುವಂತಹ ಉತ್ಸಾಹವೂ ಆಕೆಗೆ ಇರಲಿಲ್ಲ. ಆದರೂ, ನಾವು ಸಹಿಸಿಕೊಂಡಿದ್ದೆವು. ಅತಿರೇಕವಾದಾಗ ದೂರ ಆಗುವುದಕ್ಕೆ ನಿರ್ಧಾರ ಮಾಡಿದ್ದು. ಆದರೆ, ಮೆಗಾಸ್ಟಾರ್ ಕುಟುಂಬದವರು ನಮ್ಮ ಮೇಲೆ ಗೂಬೆ ಕೂರಿಸುತ್ತಿರುವುದು ನೋವು ತಂದಿದೆ’ ಎಂದು ಆಪ್ತರ ಮುಂದೆ ಪ್ರಭಾಕರ್ ರಾವ್ ಹೇಳಿಕೊಂಡಿದ್ದಾರಂತೆ. ಈ ಸುದ್ದಿ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮೆಗಾಸ್ಟಾರ್ ಮನೆಯ ಮುದ್ದಿನ ಮಗಳು ನಿಹಾರಿಕಾ ಅವರ ಮದುವೆಯನ್ನ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಹಲವು ವರ್ಷಗಳ ಪ್ರೀತಿ, ಎರಡೂವರೆ ವರ್ಷದ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ. ನಿಹಾರಿಕಾ- ಚೈತನ್ಯ (Chaitanya) ಇಬ್ಬರು ಡಿವೋರ್ಸ್ (Divorce) ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು- ಚೈತನ್ಯ ಬೇರೆಯಾಗಬೇಕು ಎಂದು ನಿರ್ಧರಿಸಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಜೊತೆಯಾಗಿರೋದ್ದಕ್ಕೆ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ಹೊಸ ಜೀವನಕ್ಕೆ ಕಾಲಿಡಲು ನಮ್ಮ ಪ್ರೈವೆಸಿಯನ್ನ ಗೌರವಿಸಿ ಎಂದು ನಟಿ ಪೋಸ್ಟ್ ಮೂಲಕ ತಿಳಿಸಿದ್ದರು. ಇದನ್ನೂ ಓದಿ:ಸ್ಟೈಲೀಶ್ ಆಗಿ ಕಾಣಿಸಿಕೊಂಡ ‘ಅಮೃತಧಾರೆ’ ಸಾರಾ- ಕಾವ್ಯಾ ಗೌಡ
ನಟಿ ನಿಹಾರಿಕಾ ಅವರ ಮದುವೆಯು ಪ್ರಭಾಕರ್ ರಾವ್ ಅವರ ಪುತ್ರ ಚೈತನ್ಯ ಜೊನ್ನಲಗಡ್ಡ ಅವರ ಜೊತೆ 2020ರ ಡಿಸೆಂಬರ್ 9ರಂದು ನಡೆದಿತ್ತು. ರಾಜಸ್ಥಾನದ ಉದಯಪುರದಲ್ಲಿನ ಒಬೆರಾಯ್ ಉದಯ್ ವಿಲಾಸ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಇಡೀ ಮೆಗಾ ಸ್ಟಾರ್ ಕುಟುಂಬವು ಮದುವೆಗೆ ಹಾಜರಾಗಿತ್ತು. ವೈಭವದಿಂದ ನಡೆದಿತ್ತು. ಈ ಮದುವೆಯಲ್ಲಿ ಇಡೀ ಕುಟುಂಬವು ಹಾಡಿ ಕುಣಿದಿತ್ತು.
ನಿಹಾರಿಕಾ ಮತ್ತು ಚೈತನ್ಯ ಪರಸ್ಪರ ಒಪ್ಪಿಗೆಯೊಂದಿಗೆ ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ನಿಹಾರಿಕಾ ಡಿವೋರ್ಸ್ ವಿಷಯವು ಸಾಕಷ್ಟು ಚರ್ಚೆ ಆಗಿತ್ತು. ನಿಹಾರಿಕಾ ಮತ್ತು ಚೈತನ್ಯ ಇನ್ಸ್ಟಾಗ್ರಾಂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ನಿಹಾರಿಕಾ ಅವರು ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಅತ್ತ ಚೈತನ್ಯ ಅವರ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿಹಾರಿಕಾ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಅನುಮಾನವನ್ನು ಹುಟ್ಟುಹಾಕಿತ್ತು. ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಯು ಎಲ್ಲ ಕಡೆ ಹಬ್ಬಿಕೊಂಡಿತ್ತು. ನಂತರ ಅದು ನಿಜವಾಯಿತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]