ಸೆಲ್ಫಿ ತಗೊಳ್ಳಿ, ಆದರೆ ಕಾಂಗ್ರೆಸ್ಸಿಗೆ ವೋಟ್ ಹಾಕೋದನ್ನು ಮರೀಬೇಡಿ: ಪುನೀತ್ ಅಭಿಮಾನಿಗಳಲ್ಲಿ ಡಿಕೆಶಿ ಮನವಿ

Public TV
1 Min Read
DKSHI

ಬೆಂಗಳೂರು: “ಸೆಲ್ಫಿ ಬೇಕಿದ್ರೆ ತಗೊಳ್ಳಿ, ಆದರೆ ಕಾಂಗ್ರೆಸ್ಸಿಗೆ ವೋಟ್ ಹಾಕಲು ಮರೆಯಬೇಡಿ” ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳು ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಶುಭಾಶಯ ತಿಳಿಸಲು ಆಗಮಿಸಿದ್ದರು. ಈ ವೇಳೆ ಪುನೀತ್ ನಿವಾಸದ ಬಳಿ ಇದ್ದ ಮನೆಯಲ್ಲಿ ಡಿಕೆ ಶಿವಕುಮಾರ್ ಇರುವುದನ್ನು ನೋಡಿ ಅವರ ಜೊತೆಗೂ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದರು.

DKSHI SELFIE

ಡಿಕೆಶಿ ಮನೆ ಜಗಲಿಯಲ್ಲಿ ನಿಂತುಕೊಂಡಾಗ ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿದರು. ಈ ವೇಳೆ ಡಿಕೆಶಿ,”ಸೆಲ್ಫಿ ಬೇಕಿದ್ರೆ ತಗೊಳ್ಳಿ, ಆದರೆ ಕಾಂಗ್ರೆಸ್ಸಿಗೆ ವೋಟ್ ಹಾಕುವುದನ್ನು ಮರೆಯಬೇಡಿ. ಎಲ್ಲರೂ ಒಬ್ಬೊಬ್ಬರೇ ಬಂದು ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಿ. ಆದರೆ ನೀವುಗಳು ಈ ಬಾರಿ ವೋಟು ಮಾತ್ರ ಕಾಂಗ್ರೆಸ್ಸಿಗೆ ಹಾಕಬೇಕು ಎಂದು ಮನವಿ ಮಾಡಿದರು.

ಡಿಕೆಶಿಯ ಮಾತಿಗೆ, ಆಯ್ತು ಸರ್ ಈ ಬಾರಿ ಕಾಂಗ್ರೆಸ್ಸಿಗೆ ನಮ್ಮ ವೋಟು, ಸ್ವಲ್ಪ ಈ ಕಡೆ ತಿರುಗಿ ಎಂದ ಹೇಳಿದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *