ಚಿಕ್ಕಬಳ್ಳಾಪುರ: ಗುಮಾಸ್ತನೊಬ್ಬನು ವಿದ್ಯಾರ್ಥಿಗಳ ಹಾಗೂ ಸರ್ಕಾರಕ್ಕೆ ಸೇರಿದ ಹಣವನ್ನು ಸ್ವಂತ ಬಳಕೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ಸಂತೋಷ್ ಕುಮಾರ್ ಆರೋಪಿ. ಈತ ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವೀತಿಯ ದರ್ಜೆ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಈತ ವಿದ್ಯಾರ್ಥಿ ವೇತನ ಕಡತಗಳ ನಿರ್ವಹಣೆ ಮಾಡುತ್ತಿದ್ದ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೊತ್ತರ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಬರೋಬ್ಬರಿ 68 ಲಕ್ಷ 65 ಸಾವಿರ ರೂ. ಹಣ ಮಂಜೂರು ಮಾಡಿತ್ತು.
ಸಂತೋಷ್ ಕುಮಾರ್ ವಿದ್ಯಾರ್ಥಿಗಳು ಹಾಗೂ ಸರ್ಕಾರಕ್ಕೆ ನೀಡಬೇಕಿದ್ದ 68 ಲಕ್ಷ 65 ಸಾವಿರ ರೂ. ಹಣವನ್ನು ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಪಂಗನಾಮ ಹಾಕಿದ್ದಾನೆ.
ಸಮತೋಷ್ ಕಳೆದ ಏಪ್ರಿಲ್‌ನಿಂದ ಅನಧಿಕೃತ ಗೈರಾಗಿದ್ದಾನೆ. ಎಷ್ಟು ಕರೆದರೂ ಕರ್ತವ್ಯಕ್ಕೆ ಬಂದಿಲ್ಲ. ಇದರಿಂದ ಅನುಮಾನಗೊಂಡು, ಆತ ನಿರ್ವಹಿಸಿದ ಕಡತಗಳ ಪರಿಶೀಲನೆ ನಡೆಸಿದಾಗ 68 ಲಕ್ಷ 65 ಸಾವಿರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗೆಳೆಯನನ್ನು ಕೊಂದು, ಕತೆ ಕಟ್ಟಿದ ಸ್ನೇಹಿತ ಪೊಲೀಸರ ಬಲೆಗೆ
ಕಾಲೇಜಿನ ಪ್ರಾಂಶುಪಾಲೆ ಶಾರದಾರವರ ನಕಲಿ ಸಹಿಗಳನ್ನು ಮಾಡಿ, ಬೆಂಗಳೂರು ಥಣಿಸಂದ್ರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಂತೋಷಕುಮಾರ್ ತನ್ನ ವೈಯುಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು ಪತ್ತೆಯಾಗಿದೆ.
ಕೂಡಲೇ ಕಾಲೇಜಿನ ಪ್ರಾಂಶುಪಾಲರಾದ ಶಾರದಾ ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಚಿಂತಾಮಣಿ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ತಲೆ ಮರೆಸಿಕೊಂಡಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ಪೊಲೀಸರ ದಾಳಿ