CrimeDistrictsLatestMain PostUttara Kannada
ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ಪೊಲೀಸರ ದಾಳಿ

Advertisements
ಕಾರವಾರ: ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್‌ಗೆ ಪೊಲೀಸರು ದಾಳಿ ನಡೆಸಿ ಯುವತಿಯ ರಕ್ಷಣೆ ಮಾಡಿದ ಘಟನೆ ಕಾರವಾರದ ಸುಮಿತ್ರಾ ಲಾಡ್ಜ್‌ನಲ್ಲಿ ನಡೆದಿದೆ.
ಕುಮಟಾ ನಗರದ ಸುಭಾಶ್ ರಸ್ತೆಯ ನಿವಾಸಿ ಹೇಮಾಂಶು ನಾಯಕ್ ಬಂಧಿತನಾಗಿದ್ದಾನೆ. ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಲಾಡ್ಜ್ ನಡೆಸುತ್ತಿದ್ದ ಸತೀಶ್ ಠಾಣೆ ಹಾಗೂ ಮಾಲೀಕ ವರ್ಣೇಕರ್ ಮೇಲೆಯೂ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಗೆಳೆಯನನ್ನು ಕೊಂದು, ಕತೆ ಕಟ್ಟಿದ ಸ್ನೇಹಿತ ಪೊಲೀಸರ ಬಲೆಗೆ
ಕಾರವಾರ ನಗರ ಪೊಲೀಸರು ಖಚಿತ ಮಾಹಿತಿ ಆಧಾರದಲ್ಲಿ ಲಾಡ್ಜ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಂಕೋಲಾ ಮೂಲದ ಯುವತಿ ಹಾಗೂ ಕುಮಟಾ ಮೂಲದ ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ