ಮಡಿಕೇರಿ: ಗುಡ್ಡ ಕುಸಿತ ಹಾಗೂ ಮಳೆಯಿಂದ ಭಾರೀ ಅನಾಹುತ ಸೃಷ್ಟಿತಯಾಗಿದ್ದ ಕೊಡಗಿನ ಜನರ ಸಂಪೂರ್ಣ ಸಾಲಮನ್ನಾ ಮಾಡಿಕೊಡುವಂತೆ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರಲ್ಲಿ ಮನವಿಮಾಡಿಕೊಂಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಕೊಡಗಿನಲ್ಲಿ 1709 ಮನೆಗಳಿಗೆ ಪರಿಹಾರ ಕಾರ್ಯವನ್ನು ಎನ್‍ಡಿಆರ್‍ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ)ದಿಂದ ಕೊಡಲಾಗಿದೆ. ಅದು ಗರಿಷ್ಠ ಅಂದ್ರೆ 1 ಲಕ್ಷ ಅರೆಬರೆ ಡ್ಯಾಮೇಜ್ ಆದವರಿಗೆ 50,00 ಅಥವಾ 75,000 ಇರಬಹುದು. ಹೀಗೆ ಒಟ್ಟಾರೆ ಮೊತ್ತ 5,45,37,541 ರೂ. ವನ್ನು ಎನ್ ಡಿಆರ್ ಎಫ್ ನಲ್ಲಿ ಅನುದಾನ ಕೊಡಲಾಗಿದೆ ಅಂತ ವಿವರಿಸಿದ್ರು.
Advertisement
Advertisement
ಮುಂದಿನ 3 ತಿಂಗಳ ಕಾಲ ಕ್ರಾಪ್ ಲೋನ್ ಅಥವಾ ಟರ್ಮ್ ಲೋನ್ ವಸೂಲಾತಿಗೆ ಇಡೀ ಕೊಡಗಿನಲ್ಲಿ ಎಲ್ಲೂ ಹೋಗಕೂಡದು. ಕೊಡಗಿನಲ್ಲಿ 6 ಪಂಚಾಯ್ತಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಹಾಗೂ ಮಳೆಯಿಂದಾದ ಅನಾಹುತಗಳು ಜಾಸ್ತಿ ಇವೆ. ಇಡೀ ಕೊಡಗಿನಾದ್ಯಂತ ಧಾರಕಾರವಾಗಿ ಸುರಿದಂತಹ ಮಳೆಯಿಂದಾಗಿ ಕಾಫಿ, ಮೆಣಸು ಎಲ್ಲವೂ ಸಂಪೂರ್ಣವಾಗಿ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಒಕ್ಕೋರಲಿನಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಅಂತ ಹೇಳಿದ್ರು.
Advertisement
3 ತಿಂಗಳ ಕಾಲ ಸಾಲ ವಸೂಲಾತಿಗೆ ಹೋಗಬೇಡಿ ಅಂತ ಈಗಾಗಲೇ ಹೇಳಿದ್ದೇವೆ. ಈ ಮೂರು ತಿಂಗಳೊಳಗೆ ಕೊಡಗಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿ, ಈ ವರ್ಷ ಕೊಡಗಿನ ಸಂಪೂರ್ಣ ಸಾಲ ಮನ್ನಾ ಮಾಡಿ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv